ಆರ್‌ಸಿಬಿಗೆ ಒಲಿದು ಬಂತು ಚುಚ್ಚಲ

ಆರ್‌ಸಿಬಿಗೆ ಒಲಿದು ಬಂತು ಚುಚ್ಚಲ

ದೆಹಲಿ: ಹೆಣ್ಣು ಮಕ್ಕಳೇ ಸ್ಟ್ರಾಂಗು ಗುರು ಎನ್ನುವ ಮಾತು ಇಂದು ನಿಜ ಆಗಿದೆ. ಮಹಿಳಾ ಆರ್‌ಸಿಬಿ ತಂಡವು ನಿನ್ನೆ ನಡೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ದಿಟ್ಟ ಜಯವನ್ನು ಗಳಿಸಿದ್ದಾರೆ.

ಇದೇ ಮೊದಲ ಬಾರಿಗೆ ಆರ್‌ಸಿಬಿಗೆ ಗೆಲುವಿನ ಪಟ್ಟ ಸಿಕ್ಕಿದ್ದು ಆರ್ ಸಿ ಬಿ ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ. ದೆಹಲಿಯಲ್ಲಿ ನಡೆದ ರೋಮಾಂಚಕ ಪಂದ್ಯಾವಳಿಯಲ್ಲಿ ಆರ್‌ಸಿಬಿ ಹೆಣ್ಣು ಮಕ್ಕಳು ಆರ್‌ಸಿಬಿ ತಂಡಕ್ಕೆ ಜಯ ತಂದು ಕೊಟ್ಟಿದ್ದಾರೆ.

ಹೌದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮೊದಲ ಇದೇ   ಮೊದಲ ಬಾರಿಗೆ ಟ್ರೋಫಿ ಗೆದ್ದುಕೊಂಡಿದೆ. ಮಹಿಳಾ ಐಪಿಎಲ್ ಟೂರ್ನಿಯಲ್ಲಿ ಆರ್‌ಸಿಬಿ ತಂಡ ಫೈನಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ದಿಟ್ಟ ಹೋರಾಟ ನೀಡಿ ಪ್ರಶಸ್ತಿ ಗೆದ್ದುಕೊಂಡಿದೆ.  ಡೆಲ್ಲಿ ತಂಡವನ್ನು 113 ರನ್‌ಗೆ ಆಲೌಟ್ ಮಾಡಿದ ಆರ್‌ಸಿಬಿ ವನಿತೆಯರು 19.3 ಓವರ್‌ಗಳಲ್ಲಿ 8 ವಿಕೆಟ್ ಭರ್ಜರಿ ಗೆಲುವು ದಾಖಲಿಸಿತು. 2024ನೇ ಸಾಲಿನ ಐಪಿಎಲ್ ಆರ್‌ಸಿಬಿಗೆ ಪಾಲಿಗೆ ಕಠಿಣ ಪ್ರಯತ್ನದ ಜೊತೆಗೆ ಟ್ರೋಫಿ ಕಿರೀಟವನ್ನು ತಂದುಕೊಟ್ಟಿದೆ. ವನಿತೆಯರಿಂದ ಆರಂಭಗೊಂಡಿರುವ ಈ ಟ್ರೋಫಿ ಆಟ, ಇದೀಗ ಫಾಪ್ ಡುಪ್ಲೆಸಿಸ್ ನೇತೃತ್ವದ ಪುರುಷ ಆರ್‌ಸಿಬಿ ತಂಡಕ್ಕೂ ವಿಸ್ತರಣೆಯಾಗಲಿದೆ ಎಂದು ಅಭಿಮಾನಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕನ್ನಡತಿ ಶ್ರೇಯಾಂಕಾ ಪಾಟೀಲ್, ಸೋಫಿಯಾ ಮೊಲಿನೆಕ್ಸ್ ಅದ್ಭುತ ದಾಳಿಗೆ ತತ್ತರಿಸಿದ ಡೆಲ್ಲಿ ಕ್ಯಾಪಿಟಲ್ಸ್ 113 ರನ್‌ಗೆ ಆಲೌಟ್ ಆಗಿತ್ತು. ಹೀಗಾಗಿ ಬೆಂಗಳುರು ನಾರಿಯರು ಸುಲಭ ಟಾರ್ಗೆಟ್ ಪಡೆದುಕೊಂಡಿತು. ಆದರೆ ಫೈನಲ್ ಪಂದ್ಯ, ದಿಟ್ಟ ಹೋರಾಟ ಮೂಲಕ ಫೈನಲ್ ಪ್ರವೇಶಿಸಿದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ದ ಚೇಸಿಂಗ್ ಸುಲಭವಾಗಿರಲಿಲ್ಲ.

 

Related