ರವಿ ಪೂಜಾರಿ ಮತ್ತೆ ಬಂಧನ

ರವಿ ಪೂಜಾರಿ ಮತ್ತೆ ಬಂಧನ

ಮಂಗಳೂರು, ಫೆ. 23 : ಭೂಗತ ಪಾತಕಿ ಕರಾವಳಿ ಮೂಲದ ರವಿ ಪೂಜಾರಿಯನ್ನು ಆಫ್ರಿಕನ್ ದೇಶವೊಂದರಲ್ಲಿ ಮತ್ತೆ ಬಂಧಿಸು ವಲ್ಲಿ ದೇಶದ ರಾ (ರಿಸರ್ಚ್ ಆ್ಯಂಡ್ ಅನಾಲಿಸಿಸ್ ವಿಂಗ್)ದ ಪೊಲೀಸರು ಯಶಸ್ವಿಯಾಗಿದ್ದಾರೆ ಎನ್ನಲಾಗಿದೆ. ಆತನನ್ನು ಭಾರತಕ್ಕೆ ಕರೆತರಲು ಪ್ರಯತ್ನಗಳು ಸಾಗುತ್ತಿವೆ.
ಕಳೆದ ವರ್ಷ ಸೆನೆಗಲ್ನಲ್ಲಿ ಬಂಧನಕ್ಕೊಳಗಾಗಿದ್ದ ರವಿ ಪೂಜಾರಿ ಕೆಲವು ತಿಂಗಳ ಬಳಿಕ ಜಾಮೀನು ಮೇಲೆ ಬಿಡುಗಡೆಗೊಂಡು ಭೂಗತನಾಗಿದ್ದ. ಆದರೆ ರಾ ಪೊಲೀಸರು ಸೆನೆಗಲ್ನಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಅಧಿಕಾರಿಗಳ ನೆರವಿನೊಂದಿಗೆ ಆತನ ಚಲನವಲನಗಳ ಮೇಲೆ ನಿಗಾ ಇರಿಸಿದ್ದರು. ನಕಲಿ ಪಾಸ್ಪೋರ್ಟ್ ಸಹಿತ ಆತನ ಕುರಿತಾದ ಮಹತ್ವದ ಮಾಹಿತಿ ಭಾರತೀಯ ಪೊಲೀಸರಿಗೆ ಲಭಿಸಿತ್ತು.

Related