ಅಜ್ಜಿಯ ಮೇಲೆ ಅತ್ಯಾಚಾರವೆಸಗಿದ ಕಾಮುಕ

ಅಜ್ಜಿಯ  ಮೇಲೆ ಅತ್ಯಾಚಾರವೆಸಗಿದ ಕಾಮುಕ

ಬೆಂಗಳೂರು : ಬೆಂಗಳೂರಿನಲ್ಲಿ 71 ವರ್ಷದ ವೃದ್ಧೆಯ ಮೇಲೆ 31 ವರ್ಷದ ವ್ಯಕ್ತಿ ಅತ್ಯಾಚಾರವೆಸಗಿರುವ ಅಮಾನವೀಯ ಘಟನೆಯೊಂದು ತಡವಾಗಿ ಬೆಳಕಿಗೆ ಬಂದಿದೆ. ವೃದ್ಧೆಯ ಮೇಲೆ  Rape  ನಡೆಸಿದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.

ಜ. 2ರಂದು ಬೆಂಗಳೂರಿನ ಕೋರಮಂಗಲದ 6ನೇ ಬ್ಲಾಕ್‌ನಲ್ಲಿ ಈ ಕೃತ್ಯ ನಡೆದಿದೆ. ವೃದ್ಧೆಗೆ ಸಹಾಯ ಮಾಡುವ ನೆಪದಲ್ಲಿ 31 ವರ್ಷದ ಜ್ಯೂಲಿರೋಸ್ ಅತ್ಯಾಚಾರವೆಸಗಿದ್ದಾನೆ. ಒಬ್ಬಂಟಿಯಾಗಿದ್ದ ವೃದ್ಧೆಯನ್ನು ಪರಿಚಯಿಸಿಕೊಂಡಿದ್ದ ಆರೋಪಿ ಆಕೆಯ ಮನೆಯಲ್ಲೇ ಕೆಲವು ಸಮಯದಿಂದ ಬಾಡಿಗೆಗೆ ಇದ್ದ. ಅಜ್ಜಿಗೆ ಹೊರಗೆ ಓಡಾಡಲು ಶಕ್ತಿಯಿಲ್ಲದ ಕಾರಣ ಆಕೆಗೆ ಚಿಕ್ಕಪುಟ್ಟ ಸಹಾಯ ಮಾಡಿಕೊಂಡಿದ್ದ. ಆರೋಪಿ ಜ್ಯೂಲಿರೋಸ್ ಮುಖ್ಯದ್ವಾರದ ಗ್ಲಾಸ್ ಒಡೆದು ಮನೆಯೊಳಗೆ ಪ್ರವೇಶಿಸಿದ್ದ. ರೂಮಿನಲ್ಲಿ ಮಲಗಿದ್ದ ವೃದ್ಧೆಯ ಮೇಲೆ ಅತ್ಯಾಚಾರ ನಡೆಸಿ, ಪರಾರಿಯಾಗಿದ್ದ. ಈ ಘಟನೆಯಿಂದ ಆಘಾತಕ್ಕೊಳಗಾಗಿದ್ದ ವೃದ್ಧೆ ಬಳಿಕ ಕೋರಮಂಗಲ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ತನ್ನ ಅಜ್ಜಿಯ ವಯಸ್ಸಿನ ಮನೆಯೊಡತಿಯನ್ನೇ ಕಾಮತೃಷೆಗೆ ಬಳಸಿಕೊಂಡ ಕಾಮುಕ ಕೊನೆಗೂ ಸಿಕ್ಕಿಬಿದ್ದಿದ್ದಾನೆ. ವೃದ್ಧೆ ನೀಡಿದ ದೂರಿನ ಆಧಾರದಲ್ಲಿ ಕೋರಮಂಗಲ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ.

Related