3 ವರ್ಷದ ಮಗುವಿನ ಮೇಲೆ ಅತ್ಯಾಚಾರ

3 ವರ್ಷದ ಮಗುವಿನ ಮೇಲೆ ಅತ್ಯಾಚಾರ

ಲಕ್ನೋ : ಉತ್ತರ ಪ್ರದೇಶದಲ್ಲಿ ಲಖಿಂಪುರದಲ್ಲಿ 3 ವರ್ಷದ ಮಗುವಿನ ಮೇಲಿನ ಕೇವಲ ಹತ್ಯೆ ಮಾಡಿರಲಿಲ್ಲ, ಅತ್ಯಾಚಾರವೂ ನಡೆದಿತ್ತು ಎಂಬುದು ತಿಳಿದುಬಂದಿದೆ. ಅತ್ಯಾಚಾರ, ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಟಾಪ್ಸಿ ವರದಿಯಲ್ಲಿ ಮತ್ತೊಂದು ವಿಚಾರ ಬೆಳಕಿಗೆ ಬಂದಿದೆ.

ಲಖೀMಪುರದಲ್ಲಿ 3 ವರ್ಷದ ಮಗು ಶವ ಪತ್ತೆಯಾಗಿದೆ. ಸಿಂಘಹಿ ಗ್ರಾಮದಲ್ಲಿ ಗುರುವಾರ ಶವ ಪತ್ತೆಯಾಗಿತ್ತು. ಮಗುವಿನ ತಲೆಯಲ್ಲಿ ಗಾಯದ ಗುರುತುಗಳಿದ್ದು ಕಬ್ಬಿನ ಗದ್ದೆಯಲ್ಲಿ ಶವ ಪತ್ತೆಯಾಗಿತ್ತು.

ಈ ಕುರಿತು ಪೊಲೀಸರ ಬಳಿ ದೂರು ನೀಡಲಾಗಿತ್ತು. ಕುಟುಂಬದ ಮೇಲಿನ ದ್ವೇಷದಿಂದ ಮಗಳನ್ನು ಕೊಲೆ ಮಾಡಿರಬಹುದು ಎಂದು ಪೋಷಕರು ಅನುಮಾನ ವ್ಯಕ್ತಪಡಿಸಿದ್ದಾರೆ. ಲಖೀಂಪುರ ಎಸ್‌ಪಿ ಸತ್ಯೇಂದ್ರ ಕುಮಾರ್ ಸಿಂಗ್ ಮಾತನಾಡಿ, ಮಗುವಿನ ತಂದೆಯ ದೂರಿನ ಮೇರೆಗೆ ದೂರು ದಾಖಲಿಸಿರುವುದಾಗಿ ತಿಳಿಸಿದ್ದಾರೆ.

Related