ಯುವತಿ ಮೇಲೆ ಸಹೋದರರಿಂದ ಅತ್ಯಾಚಾರ

ಯುವತಿ ಮೇಲೆ ಸಹೋದರರಿಂದ ಅತ್ಯಾಚಾರ

ಬೆಂಗಳೂರು : ಯುವತಿ ಮೇಲೆ ಸಹೋದರರಿಬ್ಬರು ಅತ್ಯಾಚಾರ ಎಸಗಿ ಮತಾಂತರಕ್ಕೆ ಬಲವಂತ ಮಾಡಿರುವ ಆರೋಪ ಕೇಳಿಬಂದಿದ್ದು,  19 ವರ್ಷದ ಯುವತಿ ನೀಡಿದ ದೂರು ಆಧರಿಸಿ ಶಬ್ಬಿರ್ ಅಹಮ್ಮದ್ ಎಂಬವನನ್ನು ಪೊಲೀಸರು ಬಂಧಿಸಿದ್ದಾರೆ. ಆತನ ಸಹೋದರ ಮೊಹಮ್ಮದ್ ರಿಲ್ವಾನ್ ಬಂಧನಕ್ಕೆ ಬಲೆ ಬೀಸಿದ್ದಾರೆ.

ಬೆಂಗಳೂರಿನ ಸ್ಪಾ ಒಂದರಲ್ಲಿ ಯುವತಿ ಕೆಲಸ ಮಾಡುತ್ತಿದ್ದು 2018 ರಲ್ಲಿ ಅಲ್ಲಿಗೆ ಆಗಾಗ ಬರುತ್ತಿದ್ದ ಶಬ್ಬೀರ್ ಅಪರಿಚಯವಾಗಿದ್ದ. ಬ್ರಿಗೇಡ್ ರಸ್ತೆಯ ಹೋಟೆಲ್‌ನಲ್ಲಿ ಕೆಲಸಕ್ಕೆ ಸೇರಿಸಿ ಆಕೆಯನ್ನು ಹೋಟೆಲ್ ರೂಮ್ ಗೆ ಕರೆಸಿಕೊಂಡು ಅತ್ಯಾಚಾರ ಎಸಗಿದ್ದಾನೆ.

ಯಾರಿಗಾದರೂ ವಿಷಯ ತಿಳಿಸಿದರೆ ಕೆಲಸದಿಂದ ತೆಗೆಯುವುದಾಗಿ, ಪೋಷಕರನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಇದಲ್ಲದೆ, ಆಸಿಡ್ ಹಾಕುವುದಾಗಿಯೂ ಆರೋಪಿ ಬೆದರಿಸಿದ್ದು, 2019 ರ ವರೆಗೆ 4 ಸಲ ಬೆದರಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ.

ಚೆನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಗೆ ಯುವತಿ ದೂರು ನೀಡಿದ್ದಾರೆ.

Related