ಬಿಜೆಪಿ ಆಡಳಿತ ಭ್ರಷ್ಟಾಚಾರದ ಬ್ರಾಂಡ್ ಆಗಿದೆ: ರಾಮಲಿಂಗ ರೆಡ್ಡಿ

ಬಿಜೆಪಿ ಆಡಳಿತ ಭ್ರಷ್ಟಾಚಾರದ ಬ್ರಾಂಡ್ ಆಗಿದೆ: ರಾಮಲಿಂಗ ರೆಡ್ಡಿ

ಬಿಟಿಎಂ: ರಾಜ್ಯದ ಜನರ ಹಿತದೃಷ್ಟಿಯಿಂದ ಈ ಬಾರಿ ಮತದಾರ ಪ್ರಭುಗಳು ಕಾಂಗ್ರೆಸ್ ಪಕ್ಷಕ್ಕೆ ಮತ‌ ನೀಡಬೇಕು ಎಂದು ಬಿಟಿಎಂ ಲೇಔಟ್ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಾಮಲಿಂಗಾರೆಡ್ಡಿ ಮತದಾರರಲ್ಲಿ ಮನವಿ ಮಾಡಿದರು. ಅವರು ಬಿಟಿಎಂ ವಿಧಾನಸಭಾ ಕ್ಷೇತ್ರದ ವಿವಿಧ ಕಡೆ ಮತಯಾಚನೆ ಬಳಿಕ ಮಾತನಾಡಿ ಎಸ್ಎಂ ಕೃಷ್ಣ ಮುಖ್ಯಮಂತ್ರಿ ಆಗಿದ್ದ ಕಾಲದಲ್ಲಿ ಬೆಂಗಳೂರು ಅಭಿವೃದ್ಧಿಗೆ ವೇಗ ನೀಡಿದ್ದರು. ಆದರೆ ಬಿಜೆಪಿ ಆಡಳಿತದ ಅವದಿಯಲ್ಲಿ ಬೆಂಗಳೂರು ಕಸದ ಕೂಪವಾಗಿದೆ. ಭ್ರಷ್ಟಾಚಾರಕ್ಕೆ ರಾಜ್ಯ ಬ್ರಾಂಡ್ ಆಗಿದೆ. ಸ್ವಚ್ಚ ನಿಷ್ಪಕ್ಷಪಾತ ಆಡಳಿತಕ್ಕೆ ಕಾಂಗ್ರೆಸ್ ಪಕ್ಷವನ್ನು ಮತದಾರ ಪ್ರಭುಗಳು ಬೆಂಬಲಿಸಬೇಕಿದೆ ಎಂದು ಮನವಿ ಮಾಡಿದರು

ನಾನು ಎಂಟು ಬಾರಿ ಚುನಾವಣೆಗೆ ಸ್ಪರ್ಧೆ ಮಾಡಿದ್ದು, ಒಮ್ಮೆ ಸೋತು ಏಳು ಬಾರಿ ಗೆಲುವು ಕಂಡಿದ್ದೆನೆ. ಇದೀಗ ಒಂಬತ್ತನೇ ಬಾರಿ ನಿಮ್ಮ ಮುಂದೆ ನಿಂತಿದ್ದೆನೆ. ಬಿಟಿಎಂ ಲೇಔಟ್ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಪೂರಕವಾಗಿ ಕೆಲಸ ಮಾಡಿದ್ದೆನೆ. ಆದರೂ ಬಿಜೆಪಿಯವರು ಏನೋ ಸಾಧನೆ ಮಾಡಿದ ಹಾಗೆ ಜಂಬ ಕೊಚ್ಚಿಕೊಳ್ಳುತ್ತಾರೆ ಎಂದು ಆರೋಪಿಸಿದ ರಾಮಲಿಂಗಾರೆಡ್ಡಿ

ಈ ಹಿಂದೆ ಸಹ ಕ್ಷೇತ್ರದ ಜನ ನನ್ನ ಬೆಂಬಲಕ್ಜೆ ನಿಂತಿದ್ದು, ಈ ಬಾರಿಯು ಕ್ಷೇತ್ರದ ಜನ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ನನಗೆ ಮತ ನೀಡುವ ಭರವಸೆ ವ್ಯಕ್ತಪಡಿಸಿದರು.

ಇದೇ ಸಂದರ್ಭದಲ್ಲಿ ಬಿಬಿಎಂಪಿ ಮಾಜಿ ಮೇಯರ್ ಮಂಜುನಾಥ್ ರೆಡ್ಡಿ ಮಾತನಾಡಿ  40 ಪರ್ಸೆಂಟ್ ಬಿಜೆಪಿ ಸರ್ಕಾರ ಬೆಂಗಳೂರು ಅಭಿವೃದ್ಧಿ ಮಾಡುವ ಬದಲು ಬಿಬಿಎಂಪಿಯಲ್ಲಿ‌ ಕೋಟಿ ಕೋಟಿ ಲೂಟಿ ಹೊಡೆದಿದೆ. ಬಿಬಿಎಂಪಿಯಲ್ಲಿ ಬರೋಬ್ಬರಿ 22 ಸಾವಿರ ಕೋಟಿ ಕಾಮಗಾರಿಗಳ ಬಿಲ್ ಬಾಕಿ ಇದೆ.

ಈ ಕಾರ್ಯಕ್ರಮದಲ್ಲಿ ಮಾಜಿ ಮಹಾನಗರ ಪಾಲಿಕೆಯ ಸದಸ್ಯರಾದ ಸುದ್ಗುಂಟ ಪಾಳ್ಯ ಮಂಜು, ಮುನಿರಾಜು, ರಾಮಚಂದ್ರ ಹಾಗೂ ಕಾಂಗ್ರೆಸ್ ಮುಖಂಡರುಗಳಾದ ಶಿವರಾಮ ರೆಡ್ಡಿ ಮತ್ತು ಇನ್ನಿತರರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

 

Related