ರಕ್ಷಿತ್ ಶೆಟ್ಟಿ ಮದುವೆಯ ಸುದ್ದಿಗೆ ರೆಕ್ಕೆ ಪುಕ್ಕ ಮೂಡಿದೆ!?

ರಕ್ಷಿತ್ ಶೆಟ್ಟಿ ಮದುವೆಯ ಸುದ್ದಿಗೆ ರೆಕ್ಕೆ ಪುಕ್ಕ ಮೂಡಿದೆ!?

ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ಸಕ್ಕತ್ ಸೌಂಡು ಮಾಡುತ್ತಿರುವ ಹೀರೋ ಎಂದರೆ ಅದು ರಕ್ಷಿತ್ ಶೆಟ್ಟಿ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ. ಹೌದು ಸಪ್ತಸಾಗರದ ಆಚೆ ಚಿತ್ರದ ಮೂಲಕ ರಕ್ಷಿತ್ ಶೆಟ್ಟಿ ಅವರು ಮತ್ತೆ ಅಭಿಮಾನಿಗಳ ಮನೆಗೆದ್ದಿದ್ದಾರೆ.

ಇನ್ನು ಸ್ಯಾಂಡಲ್ ವುಡ್ ನಲ್ಲಿ ರಕ್ಷಿತ್ ಶೆಟ್ಟಿ ಅವರ ಮದುವೆ ಬಗ್ಗೆ ಸುದ್ದಿಗಳಿ ಹರಿದಾಡುತ್ತಿದ್ದು ಹುಡುಗಿ ಯಾರೇಂಬ ಪ್ರಶ್ನೆ ರಕ್ಷಿತ್ ಶೆಟ್ಟಿ ಅವರ ಅಭಿಮಾನಿಗಳಲ್ಲಿ ಮೂಡಿದೆ.

ರಕ್ಷಿತ್ ಶೆಟ್ಟಿ ಅವರಿಗೂ ರಶ್ಮಿಕಾಗೂ ನಡುವೆ ಇದ್ದ ಸಂಬಂಧ ಎಲ್ಲರಿಗೂ ತಿಳಿದದ್ದೇ. ಎಂಗೇಜ್‌ಮೆಂಟ್‌ವರೆಗೂ ಬಂದ ಈ ಸಂಬಂಧ ಕೊನೆಗೆ ಬ್ರೇಕಪ್‌ನಲ್ಲಿ ಕೊನೆಯಾಯ್ತು. ಇದಾಗಿ ಸಾಕಷ್ಟು ಸಮಯವಾಗಿದೆ. ಒಂದು ಸಮಯದಲ್ಲಿ ಎಲ್ಲೆಲ್ಲೂ ಬರೀ ಇವರಿಬ್ಬರ ಸಂಬಂಧದ ಬಗ್ಗೆಯೇ ಪ್ರಶ್ನೆ ಕೇಳಿ ಬರುತ್ತಿತ್ತು. ಕ್ರಮೇಣ ಇದೆಲ್ಲ ತೆರೆ ಮರೆಗೆ ಸರಿದಿದೆ. ಇಬ್ಬರೂ ತಮ್ಮ ತಮ್ಮ ಸಿನಿಮಾಗಳಲ್ಲಿ ಬ್ಯುಸಿ ಆಗಿ ಬಿಟ್ಟರು. ತಾವಿಬ್ಬರೂ ಸ್ನೇಹಿತರಾಗಿ ಇರೋದಾಗಿ ರಕ್ಷಿತ್ ಹೇಳಿದ್ದರು. ಸಪ್ತಸಾಗರ ಸೈಡ್ ಬಿ ಬಿಡುಗಡೆ ಸಮಯದಲ್ಲೂ ರಶ್ಮಿಕಾ ಮತ್ತು ರಕ್ಷಿತ್ ರಿಲೇಶನ್‌ಶಿಪ್‌ ಬಗ್ಗೆ ಪ್ರಶ್ನೆಗಳು ಬಂದಿದ್ದವು. ಇದಕ್ಕೆ ರಕ್ಷಿತ್ ತಾವಿಬ್ಬರೂ ಈಗಲೂ ಸಂಪರ್ಕದಲ್ಲಿರುವುದಾಗಿ ಹೇಳಿದ್ದಾರೆ.

ಇದರ ನಡುವೆಯೇ ರಕ್ಷಿತ್ ಶೆಟ್ಟಿ ಮದುವೆ ಆಗ್ತಿದ್ದಾರೆ ಅನ್ನೋ ಸುದ್ದಿ ಓಡಾಡ್ತಿದೆ. ಅವರದು ಅರೇಂಜ್ ಮ್ಯಾರೇಜ್. ಈಗಾಗಲೇ ಪ್ರೇಮದಲ್ಲಿ ಸೋತಿರುವ ಕಾರಣ ಅವರು ಮತ್ತೆ ಲವ್ ಮ್ಯಾರೇಜ್ ಆಗೋ ಸಾಧ್ಯತೆಯನ್ನು ಕೈ ಬಿಟ್ಟಿದ್ದಾರೆ. ಬದಲಾಗಿ ದೊಡ್ಡವರು ನೋಡಿರುವ ಹುಡುಗಿಯನ್ನು ಮದುವೆ ಆಗ್ತಿದ್ದಾರೆ ಅನ್ನೋದು ಈಗ ಆಪ್ತ ವಲಯದಲ್ಲಿ ಹರಿದಾಡ್ತಿರೋ ಸುದ್ದಿ. ಹಳೆಯ ನೋವಿಂದ ಹೊರಬಂದು ರಕ್ಷಿತ್ ಮದುವೆ ಆಗ್ತಾರ? ಈಗಾಗಲೇ ನಲವತ್ತು ವರ್ಷ ವಯಸ್ಸಾಗಿರುವ ರಕ್ಷಿತ್ ಇನ್ನೆಷ್ಟು ಕಾಲ ಅವಿವಾಹಿತರಾಗಿರುತ್ತಾರೆ ಅನ್ನೋ ಪ್ರಶ್ನೆ ಫ್ಯಾನ್ಸ್‌ಗಳದ್ದು. ಏನೇ ಆದರೂ ಸಿಂಪಲ್‌ ಸ್ಟಾರ್‌ಗೆ ಒಂದೊಳ್ಳೆ ಹುಡುಗಿ ಸಿಗಲಿ ಅಂತ ಫ್ಯಾನ್ಸ್ ಹಾರೈಸುತ್ತಿದ್ದಾರೆ.

Related