ರಜನಿಕಾಂತ್ ಪಕ್ಷದ ಹೆಸರು ಬಹಿರಂಗ?

ರಜನಿಕಾಂತ್ ಪಕ್ಷದ ಹೆಸರು ಬಹಿರಂಗ?

ಚೆನ್ನೈ: ತಮಿಳುನಾಡು ರಾಜಕೀಯ ರಂಗಕ್ಕೆ ಎಂಟ್ರಿಕೊಟ್ಟಿರುವ ಸೂಪರ್‍ಸ್ಟಾರ್ ರಜನಿಕಾಂತ್ ಅವರ ಪಕ್ಷದ ಹೆಸರು ‘ಮಕ್ಕಳ್ ಸೇವೈ ಕಟ್ಚಿ’ ಹಾಗೂ ಪಕ್ಷದ ಚಿಹ್ನೆ ಆಟೋ ಎಂದು ಸುದ್ದಿಮೂಲಗಳು ವರದಿ ಮಾಡಿವೆ.

ಮಕ್ಕಳ್ ಸೇವೈ ಕಟ್ಚಿ ಪಕ್ಷದ ಚಿಹ್ನೆಯಾಗಿ ಆಟೋರಿಕ್ಷಾ ಬಳಕೆಗೆ ಚುನಾವಣಾ ಆಯೋಗ ಅನುಮತಿ ನೀಡಿದೆ. ಅಂದ ಹಾಗೆ, ಪಕ್ಷದ ಹೆಸರು ಮತ್ತು ಚಿಹ್ನೆಗಾಗಿ ಚುನಾವಣಾ ಆಯೋಗಕ್ಕೆ ಸಲ್ಲಿಸಿದ್ದ ಅರ್ಜಿಯಲ್ಲಿ ರಜನಿಕಾಂತ್ ಹೆಸರು ಉಲ್ಲೇಖಿಸಲಾಗಿದೆ. ಆದರೆ, ಅರ್ಜಿ ಸಲ್ಲಿಸಿದವರ ಹೆಸರು ಸದ್ಯ ಬಹಿರಂಗವಾಗಿಲ್ಲ.

ಪಕ್ಷದ ಚಿಹ್ನೆಯಾಗಿ ‘ಹಸ್ತ ಮುದ್ರೆ’ ಬೇಕು ಎಂದು ಮಕ್ಕಳ್ ಸೇವೈ ಕಟ್ಚಿ ಪಕ್ಷ ಮನವಿ ಸಲ್ಲಿಸಿತ್ತು. ಆದರೆ, ಈಗಾಗಲೇ ಹಸ್ತ ಚಿಹ್ನೆ ಕಾಂಗ್ರೆಸ್ ಪಕ್ಷದ ಚಿಹ್ನೆಯಾಗಿರುವುದರಿಂದ ಮಕ್ಕಳ್ ಸೇವೈ ಕಟ್ಚಿ ಪಕ್ಷಕ್ಕೆ ಆಟೋರಿಕ್ಷಾ ಚಿಹ್ನೆ ನೀಡಲಾಗಿದೆ.

Related