ರಾಜಕಾಲುವೆ ತೆರವು ಕಾರ್ಯ ಪ್ರಾರಂಭ

ರಾಜಕಾಲುವೆ ತೆರವು ಕಾರ್ಯ ಪ್ರಾರಂಭ

ಬೆಂಗಳೂರು: ಮಹಾದೇವಪುರದಲ್ಲಿ ಇತ್ತೀಚೆಗೆ ಭಾರೀ ಮಳೆಯಿಂದಾಗಿ ಪ್ರವಾಹದ ಸ್ಥಿತಿ ಉಂಟಾಗಿತ್ತು. ವಸತಿ ಪ್ರದೇಶಗಳು ಮತ್ತು ರಸ್ತೆಗಳಲ್ಲಿ ನೀರು ನಿಂತು ಅವಾಂತರ ಸೃಷ್ಟಿಸಿತ್ತು. ಈ ಹಿನ್ನೆಲೆ ಬಿಬಿಎಂಪಿ ಅಧಿಕಾರಿಗಳು ರಾಜಕಾಲುವೆ ಒತ್ತುವರಿ ತೆರವು  ಕಾರ್ಯಾಚರಣೆ ನಡೆಸಲು ಮುಂದಾಗಿದ್ದಾರೆ.

ಇತ್ತೀಚೆಗೆ ಸುರಿದ ಬಾರಿ ಮಳೆಗಳಿಗೆ ಹೈರಾಣಾಗಿದ್ದ ಜನ ಲೇಔಟ್ ಗಳು, ಅಪಾರ್ಟ್ಮೆಂಟ್ ಗಳು ಮತ್ತು ತಗ್ಗು ಪ್ರದೇಶಗಳಿಗೆ ನೀರು ಅವಾಂತರ ಸೃಷ್ಟಿಯಾಗಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ತೀವ್ರ ಟೀಕೆಗೆ ಗುರಿಯಾಗಿದ್ದರು.

ನಗರದ ಮಹಾದೇವಪುರದಲ್ಲಿ ಇತ್ತೀಚೆಗೆ ಭಾರೀ ಮಳೆಯಿಂದಾಗಿ ಪ್ರವಾಹದ ಸ್ಥಿತಿ ಉಂಟಾಗಿತ್ತು. ವಸತಿ ಪ್ರದೇಶಗಳು ಮತ್ತು ರಸ್ತೆಗಳಲ್ಲಿ ನೀರು ನಿಂತು ಅವಾಂತರ ಸೃಷ್ಟಿಸಿತ್ತು. ಈ ಹಿನ್ನೆಲೆ ಬಿಬಿಎಂಪಿ ಅಧಿಕಾರಿಗಳು ರಾಜಕಾಲುವೆ ಒತ್ತುವರಿ ತೆರವು  ಕಾರ್ಯಾಚರಣೆ ನಡೆಸಲು ಮುಂದಾಗಿದ್ದಾರೆ.

ಮಹದೇವಪುರ ವಲಯದ ಚಿನ್ನಪ್ಪನ ಹಳ್ಳಿ, ಬಾಗ್ಮನೆ, ಚೆಲ್ಲಘಟ್ಟ ಮತ್ತು ಬಸವನಗರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ತೆರೆವು ಆರಂಭಕ್ಕೆ ಕ್ಷಣಗಣನೆ ಶುರುವಾಗಿದ್ದು ಈ ಭಾಗದ ರಾಜ ಕಾಲುವೆ ಒತ್ತುವರಿ ದಾರರಿಗೆ ಶಾಕ್ ನೀಡಲು ಬಿಬಿಎಂಪಿ ಸಿದ್ಧವಾಗಿದೆ.

ಇಂದು ಮಹದೇವಪುರ ವಲಯ ಬಸವಣ್ಣನಗರದ ಗೋಪಾಲನ್ ಕಾಲೇಜು ಕ್ರೀಡಾಂಗಣದಲ್ಲಿ ತೆರವು ಕಾರ್ಯವನ್ನ ಶುರು ಮಾಡಲಾಗಿದೆ.

ಕಂದಾಯ ಇಲಾಖೆಯ ಸರ್ವೆ ವರದಿಯಲ್ಲಿ ಮಳೆ ಹಾನಿಗೆ ಈ ಅಪಾರ್ಟ್ಮೆಂಟ್‌ಗಳೇ ಕಾರಣ ಎಂಬುದು ತಿಳಿದುಬಂದಿತ್ತು. 145 ಅಪಾರ್ಟ್ಮೆಂಟ್‌ಗಳಿಂದ ರಾಜಕಾಲುವೆ ಹಾಗೂ ಸಬ್ ಕಾಲುವೆಗಳ ಒತ್ತುವರಿಯಾಗಿತ್ತು. ಹಲವೆಡೆ ಕಾಂಪೌಂಡ್, ರಸ್ತೆ, ಮನೆ, ಪಾರ್ಟ್ಮೆಂಟ್‌ಗಳ ನಿರ್ಮಾಣ ಮಾಡಿಕೊಂಡು ಒತ್ತುವರಿ ಮಾಡಲಾಗಿದೆ. ಇಂದು 8ಕ್ಕೂ ಹೆಚ್ಚು ಕಡೆಗಳಲ್ಲಿ ಒತ್ತುವರಿ ತೆರವು ಕಾರ್ಯ ಪ್ರಾರಂಭವಾಗಿದೆ.

Related