ರಾಗಿಣಿಗೂ ನನಗೂ ಸಂಪರ್ಕವಿಲ್ಲ- ಲೂಸ್ ಮಾದ

ರಾಗಿಣಿಗೂ ನನಗೂ ಸಂಪರ್ಕವಿಲ್ಲ- ಲೂಸ್ ಮಾದ

ಬೆಂಗಳೂರು : ಸ್ಯಾಂಡಲ್ ವುಡ್‌ಗೆ ಡ್ರಗ್ಸ್ ನಂಟು ಪ್ರಕರಣಕ್ಕೆ ಸಂಬಂಧಿಸಿ, ಐಎಸ್ಡಿ ವಿಚಾರಣೆ ಎದುರಿಸಿರುವ ನಟ ಯೋಗೀಶ್, ನಟಿ ರಾಗಿಣಿಗೂ ತಮಗೂ ಯಾವುದೇ ಸಂಬಂಧವಿಲ್ಲ ಹಾಗೂ ಆ ಬಗ್ಗೆ ಆಂತರಿಕ ಭದ್ರತಾ ವಿಭಾಗದ ಅಧಿಕಾರಿಗಳು ಪ್ರಶ್ನಿಸಿಲ್ಲ ಎಂದಿದ್ದಾರೆ.

ಕೆಲ ದಿನಗಳ ಹಿಂದೆ ನಾನು ಪಾರ್ಟಿ ಮಾಡಿದ್ದಾಗ ಸ್ಥಳೀಯರು ದೂರು ಕೊಟ್ಟಿರೋದು ನಿಜ ಎಂದು ನಟ ಯೋಗೀಶ್ ಒಪ್ಪಿಕೊಂಡಿದ್ದಾರೆ. “ಇತ್ತೀಚೆಗೆ ನಾನು ನಡೆಸಿದ್ದ ಪಾರ್ಟಿ ವೇಳೆ ಸ್ಥಳೀಯರು ದೂರು ಕೊಟ್ಟಿದ್ದರು. ಪೋಲೀಸರು ನನಗೆ ಎಚ್ಚರಿಸಿದ್ದರು” ಎಂದು ನಟ ಹೇಳಿದ್ದಾರೆ.

ನಿನ್ನೆ ನಡೆದ ವಿಚಾರಣೆ ವೇಳೆ ಅಧಿಕಾರಿಗಳು ನನ್ನ ಮೊಬೈಲ್ ವಶಕ್ಕೆ ಪಡೆದಿಲ್ಲ. ನನಗೆ ಗುಟ್ಕಾ, ಸಿಗರೇಟ್, ಮದ್ಯ ಸೇವಿಸಿ ಅಭ್ಯಾಸವಿದೆ, ಬೇರೆ ಅಭ್ಯಾಸಗಳಿಲ್ಲ ಎಂದು ಯೋಗೀಶ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

Related