ದೆಹಲಿಯಲ್ಲಿ ಪಂಜಾಬ್ ರೈತರ ಹೋರಾಟ

ದೆಹಲಿಯಲ್ಲಿ ಪಂಜಾಬ್ ರೈತರ ಹೋರಾಟ

ನವದೆಹಲಿ : ರಾಷ್ಟ್ರ ರಾಜಧಾನಿಯ ಸಿಂಘೂ ಗಡಿ ಭಾಗದಲ್ಲೇ ತಮ್ಮ ಹೋರಾಟ ಮುಂದುವರೆಸಲು ರೈತರು ತೀರ್ಮಾನಿಸಿದ್ದಾರೆ. ಪಂಜಾಬ್, ಹರಿಯಾಣ ಮತ್ತಿತರ  ಪ್ರಾಂತ್ಯಗಳಿಂದ  ಆಗಮಿಸಿರುವ ಸಾವಿರಾರು ರೈತರನ್ನು ಸಿಂಘು ಗಡಿಯಲ್ಲಿ ಪೊಲೀಸರು ತಡೆ ಹಿಡಿದಿದ್ದಾರೆ. ಹೀಗಾಗಿ ಅಲ್ಲೇ ಸಭೆ ನಡೆಸಿದ ರೈತ ಮುಖಂಡರು ಸ್ಥಳದಲ್ಲೇ ಪ್ರತಿಭಟನೆ ಮುಂದುವರೆಸಲು ನಿರ್ಧರಿಸಿದ್ದಾರೆ.

ಗಡಿಯಲ್ಲಿ ಜಮಾವಣೆಗೊಂಡಿರುವ ರೈತರ ಸುತ್ತ ಪೊಲೀಸ್ ಭದ್ರಕೋಟೆ ನಿರ್ಮಿಸಲಾಗಿದ್ದು ಅಲ್ಲಿಂದ ಮುಂದೆ ಸಾಗಲು ಅನುಮತಿ ನಿರಾಕರಿಸಲಾಗಿದೆ. ಹೀಗಾಗಿ ಸ್ಥಳದಲ್ಲೇ ಪ್ರತಿಭಟನೆ ನಡೆಸಲು ತೀರ್ಮಾನಿಸಿರುವ ರೈತ ಸಮುದಾಯ ನಾವು ಇಲ್ಲಿಂದ ಮುಂದೆ ಸಾಗುವುದಿಲ್ಲ. ಮನೆಗಳಿಗೂ ಹಿಂತಿರುಗುವುದಿಲ್ಲ.

ಕೇಂದ್ರ  ಸರ್ಕಾರ ಕೃಷಿ ನೀತಿಯನ್ನು ಹಿಂಪಡೆಯುವವರೆಗೂ ನಮ್ಮ ಹೋರಾಟವನ್ನು ಇಲ್ಲೇ ಮುಂದುವರೆಸಲಾಗುವುದು ಎಂದು ಘೋಷಿಸಿದೆ.

Related