ಸಾರ್ವಜನಿಕರ, ವೃದ್ಧರ ಪರದಾಟ

ಸಾರ್ವಜನಿಕರ, ವೃದ್ಧರ ಪರದಾಟ

ಇಂಡಿ : ಇಂಡಿ ಪಟ್ಟಣದ ಪೋಸ್ಟ ಆಫೀಸ್ ಹತ್ತಿರದ ಸಿಂಡಿಕೇಟ್ (ಈಗಿನ ಕೆನರಾ) ಬ್ಯಾಂಕ್‌ನಲ್ಲಿ ಸಿಬ್ಬಂದಿಗಳ ಬೇಜವಾಬ್ದಾರಿತನದಿಂದ ಸಾರ್ವಜನಿಕರು ಹಾಗೂ ವೃದ್ಧರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಕೋವಿಡ್-19 ಹರಡುತ್ತಿದೆ ಎಂಬ ಕಾರಣಕೊಟ್ಟು ಬ್ಯಾಂಕಿನ ಬಾಗಿಲು ಬಂದ್ ಮಾಡಿ ಸಾರ್ವಜನಿಕರ ಪ್ರವೇಶವನ್ನು ಬ್ಯಾಂಕಿನವರು ನಿರ್ಬಂಧಿಸಿದ್ದಾರೆ. ಪಕ್ಕದ ಕಿಟಕಿಯಲ್ಲಿ ಹಣ ಕಟ್ಟಲು ಮತ್ತು ಹಣ ಪಡೆಯಲು ಒಂದೇ ಒಂದು ಕೌಂಟರ್ ತೆರೆದಿದ್ದಾರೆ. ಇದರಿಂದ ಜನ ಜಂಗುಳಿ ಹೆಚ್ಚಾಗಿದ್ದು, ವೃದ್ಧರು ಪಿಂಚಣಿ ಹಣ ಪಡೆಯಲು ಸಾಲುಗಟ್ಟಿ ನಿಂತು ಹೈರಾಣವಾಗಿದ್ದಾರೆ.

ಬೆಳಿಗ್ಗೆ 11 ಘಂಟೆಯಾದರೂ ಬ್ಯಾಂಕಿನ ವ್ಯವಹಾರ ಪ್ರಾರಂಭಿಸದೆ ಸಿಬ್ಬಂದಿಗಳು ಉದ್ಧಟತನ ಮೆರೆದಿದ್ದಾರೆ. ಅಲ್ಲಿನ ಗಾರ್ಡ ಬ್ಯಾಂಕ್ ಒಳಗಡೆ ವೃಧ್ಧರು ಅಥವಾ ಸಾರ್ವಜನಿಕರು ಹೋದರೆ ಅವರನ್ನು ಕುತ್ತಿಗೆ ಹಿಡಿದು ಹೊರದಬ್ಬುತ್ತಿದ್ದಾರೆ. ಈ ಸಿಬ್ಬಂದಿಗಳ ಗೂಂಡಾಗಿರಿಗೆ ಸಾರ್ವಜನಿಕರು ಕಂಗಾಲಾಗಿದ್ದಾರೆ.

ಇನ್ನು ಬ್ಯಾಂಕ್ ಒಳಗಡೆ ಯಾರಿಗೂ ಪ್ರವೇಶ ಇಲ್ಲದ ಕಾರಣ ಸಾಕಷ್ಟು ರೈತರು ತಮ್ಮ ಸಾಲದ ಕಂತಿನ ಮಾಹಿತಿ ಪಡೆಯಲು ಅಥವಾ ರಿನಿವಲ್‌ಗಾಗಿ ಬಂದರೂ ಅಲ್ಲಿನ ಸಿಬ್ಬಂದಿಗಳು ಅವರ ವ್ಯವಹಾರದ ಮಾಹಿತಿ ನೀಡದೆ ಉಧ್ಧಟತನ ಮೆರೆಯುತ್ತಿದ್ದಾರೆ. ಈ ಸಿಬ್ಬಂದಿಗಳ ಉಧ್ಧಟತನಕ್ಕೆ ಇಡೀ ಸಾರ್ವಜನಿಕರು ಹಿಡಿಶಾಪ ಹಾಕುತ್ತಿದ್ದಾರೆ.

Related