ಟಿ ರಸ್ತೆ ಸೀಲ್‌ಡೌನ್ ಸಾರ್ವಜನಿಕರ ಟೀಕೆ

ಟಿ ರಸ್ತೆ ಸೀಲ್‌ಡೌನ್ ಸಾರ್ವಜನಿಕರ ಟೀಕೆ

ಕೋಲಾರ : ಎತ್ತು ಏರಿಗೆ ಎಳೆದರೇ ಕೋಣ ನೀರಿಗೆ ಎಳೆಯಿತು ಎಂದಾಗೆ ವ್ಯಕ್ತಿಯೊಬ್ಬ ಸಾಲಗಾರರ ಕಾಟ ತಾಳಲಾರದೇ ಆತ್ಮಹತ್ಯೆಗೆ ಶರಣಾದರೇ ಅದನ್ನು ಕೊರೋನಾ ಸಾವು ಎಂದು ಬಿಂಬಿಸಿ ಬಂಗಾರಪೇಟೆ ಪಟ್ಟಣದ ಪುರಸಭೆ ಆಡಳಿತ ಇಡೀ ರಸ್ತೆಯನ್ನೇ ಸೀಲ್‌ಡೌನ್ ಮಾಡಿ ಅಧಿಕಾರಿಗಳು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಇದು ಸ್ಥಳೀಯ ಪುರಸಭೆ ಸದಸ್ಯರೊಬ್ಬರ ಒತ್ತಡಕ್ಕೆ ಮಣಿದು ಸಹಜ ಸಾವಿನ ಆತ್ಮಹತ್ಯೆಗೆ ಪ್ರಚೋದಿಸಿದ ವ್ಯಕ್ತಿಗಳನ್ನು ಪಾರು ಮಾಡಲು ಸತ್ತ ವ್ಯಕ್ತಿಗೆ ಕೊರೋನಾ ಎಂದು ಬಿಂಬಿಸುವ ಪ್ರಯತ್ನ ಮಾಡಿರುವುದು ಸಾರ್ವಜನಿಕರ ಟೀಕೆಗೆ ಪುರಸಭೆ ಅಧಿಕಾರಿಗಳು ಒಳಗಾಗಿದ್ದಾರೆ.

ಬಂಗಾರಪೇಟೆ ಪಟ್ಟಣದ ವಿಜಯ ಟಾಕೀಸ್ ಪಕ್ಕದ ರಸ್ತೆಯ ಮನೆಯೊಂದರಲ್ಲಿ ಆತ್ಮಹತ್ಯೆಗೆ ಶರಣಾದ ವ್ಯಕ್ತಿಯ ಶವವನ್ನು ಹತ್ತಾರು ಮಂದಿ ಇಳಿಸಿ,s ಸಾಗಿಸಿದ ನಂತರ ಬಂಗಾರಪೇಟೆ ಸರಕಾರಿ ಆಸ್ಪತ್ರೆಯಲ್ಲಿ ಶವ ಪೋಷ್ಟ್ ಮಾರ್ಟಂ ಮಾಡಿಸಿ ನಂತರ ಪಟ್ಟಣದ ಸ್ಮಶಾನದಲ್ಲಿ ಅಂತ್ಯಸಂಸ್ಕಾರ ನಡೆಸಲಾಗಿದೆ. ವ್ಯಾಪಾರ ಮಾಡುತ್ತಿದ್ದ ಎ.ಪಿ.ಎಂ.ಸಿ ಮಳಿಗೆಯಾಗಲಿ ಅಥವಾ ಆತ ಸಂಪರ್ಕ ಮಾಡಿದ ಯಾರನ್ನೂ ಕ್ವಾರಂಟೈನ್ ಮಾಡಿಲ್ಲ, ಜತೆಗೆ ಪತ್ನಿ ಮಕ್ಕಳನ್ನು ಯಾವುದೇ ಕೋವಿಡ್ ಟೆಸ್ಟ್ ಇದುವರೆಗೂ ಮಾಡದೇ ಇರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

ಸಾಲ ಶೂಲ ?

ಲಕ್ಷಾಂತರ ರೂ ಹಣ ತನ್ನ ಬಳಿಯೇ ಇಟ್ಟುಕೊಂಡಿದ್ದ ಶಿವಕುಮಾರ್ ಇನ್ನೂ ಕೆಲವೇ ದಿನಗಳಲ್ಲಿ ಬರುವ ಕಾವಡಿ ಉತ್ಸವಕ್ಕೆ ಭಕ್ತರಿಗೆ ಹಣ ನೀಡಬೇಕಾಗಿತ್ತು, ಕೆಲವು ಭಕ್ತರು ಹಣ ನೀಡುವುಂತೆ ಒತ್ತಾಯ ಮಾಡಿ ಮನೆಯ ಬಳಿ ಗಲಾಟೆ ಮಾಡುತ್ತೇವೆ ಎಂದು ಬೆದರಿಸಿದ್ದರಿಂದ ನೊಂದು ಶಿವಕುಮಾರ್ ಆತ್ಮಹತ್ಯೆಗೆ ಶರಣಾದ ಎನ್ನುವುದು ಸಾರ್ವಜನಿಕರ ವಲಯದಲ್ಲಿ ಚರ್ಚೆಯಾಗುತ್ತಿದ್ದು ಪತ್ನಿ ನಾಗವೇಣಿ ಸಹ ಪೋಲಿಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದು, ಪೋಲಿಸರು ಸಾಲಕ್ಕೆ ಹೆದರಿ ಆತ್ಮಹತ್ಯೆಗೆ ಶರಣಾಗಿರುವ ಬಗ್ಗೆ ಪ್ರಕರಣ ದಾಖಲಿಸಿದ್ದಾರೆ.

Related