ನಟ ದರ್ಶನ್​ ಫೋಟೋಗೆ ಚಪ್ಪಲಿಯಿಂದ ತುಳಿದು, ಬೆಂಕಿ ಹಚ್ಚಿದ ಪ್ರತಿಭಟನಾಕಾರರು

ನಟ ದರ್ಶನ್​ ಫೋಟೋಗೆ ಚಪ್ಪಲಿಯಿಂದ ತುಳಿದು, ಬೆಂಕಿ ಹಚ್ಚಿದ ಪ್ರತಿಭಟನಾಕಾರರು

ಚಿತ್ರದುರ್ಗ: ಮಾನವೀಯತೆ ಮರೆತ ವಿಕೃತಗಳಿಗೆ ಧಿಕ್ಕಾರ, ಧಿಕ್ಕಾರ ಎಂದು ಕೂಗುತ್ತಾ ನಟ ದರ್ಶನ್ ವಿರುದ್ಧ ಚಿತ್ರದುರ್ಗ ನಗರದಾದ್ಯಂತ ವಿವಿಧ ಸಂಘ-ಸಂಸ್ಥೆಗಳಿಂದ ರೇಣುಕಾ ಸ್ವಾಮಿ ಕೊಲೆ ಪ್ರಕರಣವನ್ನು ಖಂಡಿಸಿ ಬೃಹತ್ ಪ್ರತಿಭಟನೆಯನ್ನು ಕೈಗೊಂಡಿದ್ದಾರೆ.

ಇಂದು ಚಿತ್ರದುರ್ಗ ನಗರದಲ್ಲಿ ಸಾವಿರಾರು ಜನ ಈ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದು, ನರ ಮನುಷ್ಯನಂತಿರುವ ರಾಕ್ಷಸನಿಗೆ ಉಗ್ರ ಶಿಕ್ಷೆ ಆಗಬೇಕೆಂದು ಸರ್ವಜನಿಕರು ಆಕ್ರೋಶ ಹೊರ ಹಾಕುತ್ತಿದ್ದಾರೆ. ಇದನ್ನೂ ಓದಿ: ಬಿಬಿಎಂಪಿ ಚುನಾವಣೆ ನಡೆಸುವ ಬಗ್ಗೆ ಡಿಸಿಎಂ ಹೇಳಿದೇನು…?

ಹೌದು, ನಟ ದರ್ಶನ ಹಾಗೂ ಗ್ಯಾಂಗ್​ನಿಂದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಈಗಾಗಲೇ ದರ್ಶನ ಸೇರಿದಂತೆ 11 ಜನರನ್ನ ಪೊಲೀಸರು ಬಂಧಿಸಿದ್ದಾರೆ. ತನಿಖೆ ಕೂಡ ಚುರುಕಾಗಿ ನಡೆದಿದೆ. ದರ್ಶನ ಹಾಗೂ ಗ್ಯಾಂಗ್​ನಿಂದ ರೇಣುಕಾಸ್ವಾಮಿ ಕೊಲೆ ಇದೀಗ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಹೀಗಾಗಿ ಕೊಲೆ ಖಂಡಿಸಿ ವಿವಿಧ ಸಂಘಟನೆಗಳಿಂದ ಪ್ರತಿಭಟನೆ ಮಾಡಲಾಗುತ್ತಿದೆ. ಚಿತ್ರದುರ್ಗದ ಶ್ರೀ ನೀಲಕಂಠೇಶ್ವರ ಸ್ವಾಮಿ ದೇವಾಲಯದಿಂದ ಡಿಸಿ ಕಚೇರಿವರೆಗೂ ಪ್ರತಿಭಟನೆ ಮಾಡಲಾಗಿದೆ. ಈ ವೇಳೆ ನಟ ದರ್ಶನ್ ಭಾವಚಿತ್ರಕ್ಕೆ ಚಪ್ಪಲಿಯಿಂದ ತುಳಿದು, ಬೆಂಕಿ ಹಚ್ಚಿ ಆಕ್ರೋಶ‌ ವ್ಯಕ್ತಪಡಿಸಿದ್ದಾರೆ. ನಗರದ ಮಹಾತ್ಮ ಗಾಂಧಿ ವೃತ್ತದಲ್ಲಿ ಮಾನವ ಸರಪಳಿ ನಡೆಸಿ ಮೌನ ಪ್ರತಿಭಟನೆ ಮಾಡಲಾಗಿದೆ. ಹಲವು ಸಂಘಟನೆಯ ಮುಖಂಡರು ಮತ್ತು ಸ್ಥಳಿಯರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.

 

Related