ಚಿತ್ರದುರ್ಗ: ಮಾನವೀಯತೆ ಮರೆತ ವಿಕೃತಗಳಿಗೆ ಧಿಕ್ಕಾರ, ಧಿಕ್ಕಾರ ಎಂದು ಕೂಗುತ್ತಾ ನಟ ದರ್ಶನ್ ವಿರುದ್ಧ ಚಿತ್ರದುರ್ಗ ನಗರದಾದ್ಯಂತ ವಿವಿಧ ಸಂಘ-ಸಂಸ್ಥೆಗಳಿಂದ ರೇಣುಕಾ ಸ್ವಾಮಿ ಕೊಲೆ ಪ್ರಕರಣವನ್ನು ಖಂಡಿಸಿ ಬೃಹತ್ ಪ್ರತಿಭಟನೆಯನ್ನು ಕೈಗೊಂಡಿದ್ದಾರೆ.
ಇಂದು ಚಿತ್ರದುರ್ಗ ನಗರದಲ್ಲಿ ಸಾವಿರಾರು ಜನ ಈ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದು, ನರ ಮನುಷ್ಯನಂತಿರುವ ರಾಕ್ಷಸನಿಗೆ ಉಗ್ರ ಶಿಕ್ಷೆ ಆಗಬೇಕೆಂದು ಸರ್ವಜನಿಕರು ಆಕ್ರೋಶ ಹೊರ ಹಾಕುತ್ತಿದ್ದಾರೆ. ಇದನ್ನೂ ಓದಿ: ಬಿಬಿಎಂಪಿ ಚುನಾವಣೆ ನಡೆಸುವ ಬಗ್ಗೆ ಡಿಸಿಎಂ ಹೇಳಿದೇನು…?
ಹೌದು, ನಟ ದರ್ಶನ ಹಾಗೂ ಗ್ಯಾಂಗ್ನಿಂದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಈಗಾಗಲೇ ದರ್ಶನ ಸೇರಿದಂತೆ 11 ಜನರನ್ನ ಪೊಲೀಸರು ಬಂಧಿಸಿದ್ದಾರೆ. ತನಿಖೆ ಕೂಡ ಚುರುಕಾಗಿ ನಡೆದಿದೆ. ದರ್ಶನ ಹಾಗೂ ಗ್ಯಾಂಗ್ನಿಂದ ರೇಣುಕಾಸ್ವಾಮಿ ಕೊಲೆ ಇದೀಗ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಹೀಗಾಗಿ ಕೊಲೆ ಖಂಡಿಸಿ ವಿವಿಧ ಸಂಘಟನೆಗಳಿಂದ ಪ್ರತಿಭಟನೆ ಮಾಡಲಾಗುತ್ತಿದೆ. ಚಿತ್ರದುರ್ಗದ ಶ್ರೀ ನೀಲಕಂಠೇಶ್ವರ ಸ್ವಾಮಿ ದೇವಾಲಯದಿಂದ ಡಿಸಿ ಕಚೇರಿವರೆಗೂ ಪ್ರತಿಭಟನೆ ಮಾಡಲಾಗಿದೆ. ಈ ವೇಳೆ ನಟ ದರ್ಶನ್ ಭಾವಚಿತ್ರಕ್ಕೆ ಚಪ್ಪಲಿಯಿಂದ ತುಳಿದು, ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಗರದ ಮಹಾತ್ಮ ಗಾಂಧಿ ವೃತ್ತದಲ್ಲಿ ಮಾನವ ಸರಪಳಿ ನಡೆಸಿ ಮೌನ ಪ್ರತಿಭಟನೆ ಮಾಡಲಾಗಿದೆ. ಹಲವು ಸಂಘಟನೆಯ ಮುಖಂಡರು ಮತ್ತು ಸ್ಥಳಿಯರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.