ಗುತ್ತಿಗೆದಾರರ ಬಾಕಿ ಬಿಲ್​ ಪಾವತಿ ಮಾಡದಿದ್ದರೇ ಪ್ರತಿಭಟನೆ: ಕೆಂಪಣ್ಣ

ಗುತ್ತಿಗೆದಾರರ ಬಾಕಿ ಬಿಲ್​ ಪಾವತಿ ಮಾಡದಿದ್ದರೇ ಪ್ರತಿಭಟನೆ: ಕೆಂಪಣ್ಣ

ಬೆಂಗಳೂರು : ನಾವು ಸರ್ಕಾರಕ್ಕೆ ಕೊಳ್ಳುವುದು ಇಷ್ಟೇ ನಮ್ಮ ಗುತ್ತಿಗೆದಾರರ ಬಾಕಿ ಇರುವ ಬಿಲ್ಲನ್ನು ದಯಮಾಡಿ ಬಿಡುಗಡೆ ಮಾಡಿ ಎಂದು ನಾವು ಕೇಳಿಕೊಳ್ಳುತ್ತೇವೆ.

ನವು ಈಗಾಗಲೇ ಹಲವಾರು ಬಾರಿ ಸರ್ಕಾರಕ್ಕೆ ತಿಳಿಸಿದರು ಸಹ ಹಿಂದಿನ ಸರಕಾರ ಕೂಡ ನಮಗೆ ಯಾವುದೇ ರೀತಿ ಬಿಲ್ ಪಾವತಿಗೆ ಅನುಬತ್ತಿ ನೀಡಿಲ್ಲ ಹಾಗಾಗಿ ಈಗಿರುವ ಸರ್ಕಾರವಾದರೂ ನಮ್ಮ ಗುತ್ತಿಗೆದಾರರ ಬಾಕಿ ಬಿಲ್ಲನ್ನು ಪಾವತಿ ಮಾಡುತ್ತದೆ ಎಂದು ನಾವು ತಿಳಿದಿದ್ದೇವೆ.

ಸರ್ಕಾರಕ್ಕೆ ನಾವು 30 ದಿನಗಳ ಗಡಗು ಕೊಡುತ್ತೇವೆ. ಸರಕಾರ ನಮ್ಮ ಮಾತಿಗೆ ಬೆಲೆ ಕೊಡದೆ ಹೋದರೆ ನಾವು ಮುಂದೆ ಉಗ್ರ ಹೋರಾಟ ಮಾಡಲು ಸಜ್ಜಾಗುತ್ತೇವೆ ಎಂದು ಗುತ್ತಿಗೆದಾರ ಸಂಘದ ಅಧ್ಯಕ್ಷರಾಗಿರುವಂತ ಕೆಂಪಣ್ಣ ಅವರು ಹೇಳಿದರು.

ಬೆಂಗಳೂರಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜಲಸಂಪನ್ಮೂಲ, ಸಣ್ಣ ನೀರಾವರಿ, ಲೋಕೋಪಯೋಗಿ ಇಲಾಖೆ, ಗ್ರಾಮೀಣಾಭಿವೃದ್ಧಿ ಸೇರಿದಂತೆ ಹಲವು ಇಲಾಖೆಗಳಿಂದ ಬಾಕಿ ಬರಬೇಕು. ಇಂದಿನಿಂದ ಸರ್ಕಾರಕ್ಕೆ 30 ದಿನ ಗಡವು ನೀಡುವುತ್ತೇವೆ. ಕರೆದು ಮಾತನಾಡಿ ಬಗೆ ಹರಿಸಬೇಕು. ಇಲ್ಲವಾದರೆ ಹೋರಾಟ ಅನಿವಾರ್ಯ ಎಂದು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ ಕೆಂಪಣ್ಣ.

 

Related