ಖಾತೆ ಬದಲಾವಣೆ ಅಧಿಕಾರಿ ವಿರುದ್ಧ ಪ್ರತಿಭಟನೆ

ಖಾತೆ ಬದಲಾವಣೆ ಅಧಿಕಾರಿ ವಿರುದ್ಧ ಪ್ರತಿಭಟನೆ

ಕೆ.ಆರ್.ನಗರ : ಇಲ್ಲಿನ ಪುರಸಭೆಯ ಮುಖ್ಯಾಧಿಕಾರಿ ಡಿ.ಪುಟ್ಟರಾಜು ಪಟ್ಟಣದ ಬಸವೇಶ್ವರ ಬಡಾವಣೆಯ ನಿವಾಸಿ ಬಿ.ಸಂತೋಷ್‌ಕುಮಾರ್ ಎಂಬುವವರಿಗೆ ಸೇರಿದ ನಿವೇಶನವನ್ನು ಅಕ್ರಮವಾಗಿ ಮತ್ತೊಬ್ಬರಿಗೆ ಖಾತೆ ಮಾಡಿಕೊಟ್ಟಿದ್ದಾರೆ ಎಂದು ಆರೋಪಿಸಿ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಇಲ್ಲಿನ ಪಟ್ಟಣದ ತಾಲೂಕು ಕಚೇರಿ ಮುಂದೆ ಜಮಾವಣೆಗೊಂಡ ಸಮಿತಿಯ ಮುಖಂಡರು ಮುಖ್ಯಾಧಿಕಾರಿ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಈ ಸಂಧರ್ಭದಲ್ಲಿ ಮಾತನಾಡಿದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬನ್ನಹಳ್ಳಿಸೋಮಣ್ಣ, ರೈತಸಂಘದ ಜಿಲ್ಲಾ ಮಹಿಳಾಧ್ಯಕ್ಷೆ ನೇತ್ರಾವತಿ, ಜಿಲ್ಲಾ ಸಂಚಾಲಕ ಕಳ್ಳಿಮುದ್ದನಹಳ್ಳಿಚಂದ್ರು, ಮೂರ್ತಿ ಮತ್ತಿತರರು ಸಂತೋಷ್‌ರವರಿಗೆ ಸೇರಿದ ಹುಲ್ಲು ಹಿತ್ತಲನ್ನು ಅಕ್ರಮವಾಗಿ ಬೇರೊಬ್ಬರಿಗೆ ಮಾರಾಟ ಮಾಡಿ ಖಾತೆ ಮಾಡಿದ್ದನ್ನು ಪ್ರಶ್ನಿಸಿದ್ದಕ್ಕೆ ಮುಖ್ಯಾಧಿಕಾರಿ ಪುಟ್ಟರಾಜು ಅವಾಚ್ಯಶಬ್ದಗಳಿಂದ ನಿಂದಿಸಿದ್ದಲ್ಲದೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದರು.

ಅಕ್ರಮವಾಗಿ ಖಾತೆ ಮಾಡಿಕೊಟ್ಟಿದ್ದಲ್ಲದೆ ಇದನ್ನು ಪ್ರಶ್ನಿಸಿದ ನಿವೇಶನ ಮಾಲೀಕರಾದ ಸಂತೋಷ್ ವಿರುದ್ಧವೇ ಬೆದರಿಕೆ ಹಾಕಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡು ಸೇವೆಯಿಂದ ವಜಾಗೊಳಿಸಿ ಸೂಕ್ತ ತನಿಖೆ ನಡೆಸಿ ಇದಲ್ಲದೆ ಬೇರೆ ಬಡಾವಣೆಗಳಲ್ಲೂ ಆಗಿವರು ಅಕ್ರಮ ಖಾತೆಗಳ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಒತ್ತಾಯಿಸಿದರು.

ಚನ್ನಾಗಿರುವ ಅಂಗನವಾಡಿಯನ್ನು ಶಿಥಿಲಗೊಂಡಿದೆ ಎಂದು ಅಂಗನವಾಡಿ ಕಟ್ಟಡ ಕೆಡವಿ ಮತ್ತೊಂದು ಅಂಗನವಾಡಿ ಕಟ್ಟಡ ನಿರ್ಮಾಣ ಮಾಡಲಾಗುತ್ತಿದ್ದು ಅಂಗನವಾಡಿ ಕಟ್ಟಡ ಕೆಡವಿದ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಮುರುಗೇಶ್, ಶಿವಕುಮಾರ್, ಮಹದೇವಮ್ಮ, ಬಲರಾಂ, ಕೃಷ್ಣಮೂರ್ತಿ, ಪುರುಷೋತ್ತಮ್, ಮಹದೇವ್, ನಾಗರಾಜ್, ಬಸವರಾಜು, ಸಂತೋಷ್, ಶಿವರಾಜ್, ಪ್ರಭಾಕರ್, ಹರೀಶ್,ಸುಧಾಕರ್, ಸೋಮು, ಮತ್ತಿತರ ಡಿಎಸ್‌ಎಸ್ ಮುಖಂಡರು ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.

Related