ಪ್ರವಾಹಕ್ಕೆ ಸಿಲುಕಿದ್ದ ರೈತನ ರಕ್ಷಣೆ

ಪ್ರವಾಹಕ್ಕೆ ಸಿಲುಕಿದ್ದ ರೈತನ ರಕ್ಷಣೆ

ನವಲಗುಂದ : ಬೆಣ್ಣೆಹಳ್ಳ ಪ್ರವಾಹಕ್ಕೆ ಸಿಲುಕಿದ್ದ ರೈತನನ್ನು ಅಗ್ನಿಶಾಮಕ ದಳ ಹಾಗೂ ರಕ್ಷಣಾ ತಂಡದವರು ರಕ್ಷಿಸಿ ದಡಕ್ಕೆ ಕರೆದುಕೊಂಡು ಬಂದರು.

ತಾಲೂಕಿನ ಸೊಟಕನಾಳ ಗ್ರಾಮದ ರೈತ ಹಳ್ಳದ ಅರಿವು ಇಲ್ಲದೇ ಜಮೀನಿನ ಕೆಲಸಕ್ಕೆಂದು ಹೋಗಿ ಬೆಣ್ಣೆಹಳ್ಳದ ಪ್ರವಾಹದಲ್ಲಿ ಸಿಲುಕಿದ್ದ ರೈತ ಪ್ರವಾಹ ಬಂದಿರುವುದರಿಂದ ಆತನಿಗೆ ಬರಲು ಸಾಧ್ಯವಾಗಿಲ್ಲ.

ನಡುಗಡ್ಡೆಯ ಮಧ್ಯೆ ಸಿಲುಕಿದ್ದ ರೈತನ ಹತ್ತಿರ ಮೊಬೈಲ್ ಇಲ್ಲದೇ ಇರುವುದರಿಂದ ಆತನಿಗೆ ತಾನು ಅಪಾಯದಲ್ಲಿ ಇರುವುದನ್ನು ತಿಳಿಸಲು ಆಗಿರಲಿಲ್ಲ. ಮನೆಯವರು ಹೊಲಕ್ಕೆ ಹೋದವರು ಬರದೆ ಇರುವುದನ್ನು ಕಂಡು ಹಳ್ಳದ ದಂಡೆಯಲ್ಲಿ ಕೂಗಿದಾಗ ನಡುಗಡ್ಡೆಯಲ್ಲಿ ಸಿಲುಕಿರುವುದು ತಿಳಿದು ಬಂದಿದೆ.

ನಂತರ ಗ್ರಾಮಸ್ಥರು ತಾಲೂಕಾಡಳಿತಕ್ಕೆ ತಿಳಿಸಿದ ನಂತರ ಸ್ಥಳಕ್ಕೆ ಅಗ್ನಿಶಾಮಕ ದಳ, ರಕ್ಷಣಾ ತಂಡ ಹಾಗೂ ಅಮರಗೋಳದ ಈಜು ತಜ್ಞರ ಸಹಾಯದಿಂದ ಬೋಟ್ ಮೂಲಕ ನಡುಗಡ್ಡೆಯಲ್ಲಿದ್ದ ರೈತನನ್ನು ಪ್ರಾಣಾಪಾಯದಿಂದ ಪಾರು ಮಾಡಿದ್ದಾರೆ.

ನಮ್ಮ ಜಮೀನಿನಲ್ಲಿ ಬೆಳೆದ ಬೆಳೆಗಳನ್ನು ಅಲ್ಲಿಯೇ ಬಿಟ್ಟಿದ್ದೇವೆ. ಅವುಗಳನ್ನು ತರಬೇಕೆಂದರೆ ರಸ್ತೆ ಸಂಪರ್ಕವಿಲ್ಲ. ನಮ್ಮ ಕಷ್ಟ ಕೇಳುವವರೆ ಇಲ್ಲ ಎಂದು ಸೊಟಕನಾಳ ಗ್ರಾಮದ ರೈತ ರಂಗರಡ್ಡಿ ಕಿರೇಸೂರ ನೋವು ತೋಡಿಕೊಳ್ಳುತ್ತಾರೆ.

Related