ಮಾಧ್ಯಮದವರು ಕೇಳಿದ ಪ್ರಶ್ನೆಗೆ ಕಕ್ಕಾಬಿಕ್ಕಿಯಾದ ನಿರ್ಮಾಪಕ ಉಮಾಪತಿ

ಮಾಧ್ಯಮದವರು ಕೇಳಿದ ಪ್ರಶ್ನೆಗೆ ಕಕ್ಕಾಬಿಕ್ಕಿಯಾದ ನಿರ್ಮಾಪಕ ಉಮಾಪತಿ

ಬೆಂಗಳೂರು: ಮಾಧ್ಯಮದವರು ಕೇಳುತ್ತಿರುವ ಪ್ರಶ್ನೆಗೆ ರಾಬರ್ಟ್ ಸಿನಿಮಾದ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ ಬೆಚ್ಚಿಬಿದ್ದಿದ್ದಾರೆ. ಇದೀಗ ಭೂ ಹಗರಣದಲ್ಲಿ ಮುಂಚೂಣಿಯಲ್ಲಿ ಕೇಳಿಬರುತ್ತಿರುವ ಹೆಸರು. ಈ ಸಂಬಂಧ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಕಕ್ಕಾಬಿಕ್ಕಿಯಾಗಿದ್ದಾರೆ. ಮಾಧ್ಯಮದರ ಬುಲೆಟ್ ರೀತಿಯ ಪ್ರಶ್ನೆಗೆ ಉತ್ತರಿಸಲಾಗದೇ ತಬ್ಬಿಬ್ಬಾದ ದೃಶ್ಯ ಕಂಡು ಬಂದಿತು.

ಹೌದು ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ ಬಿಡಿಎ ವಿರುದ್ಧದ 1000 ಕೋಟಿ ಭೂ ಹಗರಣದಲ್ಲಿ ಪ್ರಕರಣ ಎದುರಿಸುತ್ತಿದ್ದಾರೆ. ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯೂ ಆಗಿರುವ ಉಮಾಪತಿ ಅವರು ಬಿಡಿಎನಲ್ಲಿ 1000 ಕೋಟಿ ಅವ್ಯವಹಾರ ಆಗಿದೆ ಎನ್ನುತ್ತಿದ್ದಾರೆ. ಬೆಂಗಳೂರು ದಕ್ಷಿಣ ಬೇಗೂರು ಹೋಬಳಿಯ ದೇವರಚಿಕ್ಕನಹಳ್ಳಿ ಗ್ರಾಮದ ಸರ್ವೇ ನಂ. 27/1, 27/3, 29/1, 29/2, 29/3, 30, 33, 34, 35ಗೆ ಸೇರಿದ ಸಾವಿರ ಕೋಟಿಗೂ ಅಧಿಕ ಬೆಲೆ ಬಾಳುವ 25 ಎಕರೆಗೂ ಅಧಿಕ ಭೂಮಿಯನ್ನು ಕಬಳಿಸಿದ್ದಾರೆಂದು ಆರೋಪ ಮಾಡಿದ್ದಾರೆ.

ಈ ಎಲ್ಲದರ ನಡುವೆ ಬಿಡಿಎ ವಿರುದ್ಧದ 1000 ಕೋಟಿ ಭೂ ಹಗರಣದ ಬಗ್ಗೆ ನಗರದ ಖಾಸಗಿ ಹೋಟೆಲ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ದಾಖಲೆ ಬಿಡುಗಡೆ ಮಾಡಿ ತೊಂದರೆಗೆ ಸಿಲುಕಿದ್ದಾರೆ. ಈ ಹಿಂದೆ ತನ್ನ ಬಗ್ಗೆ ಸುದ್ದಿ ಪ್ರಸಾರ ಮಾಡದಂತೆ ತಡೆಯಾಜ್ಞೆ ತಂದಿದ್ದ ಉಮಾಪತಿ ಈ ಕುರಿತು ಮಾಧ್ಯಮಗಳು ಕೇಳಿದ ಪ್ರಶ್ನೆಗೆ ತಬ್ಬಿಬ್ಬಾಗಿ ತಡೆಯಾಜ್ಞೆ ವಾಪಾಸ್ ಪಡೆಯುವುದಾಗಿ ಉಮಾಪತಿ ಹೇಳಿಕೆ ನೀಡಿದ್ದಾರೆ.

1988 ರಿಂದ 2022ರ ಅವಧಿಯಲ್ಲಿ ನಡೆದುಕೊಂಡು ಬರುತ್ತಿರುವ ಪ್ರಕರಣ ಇದಾಗಿದೆ. ಮಾಲೀಕರು ನನ್ನ ಬಳಿ ಬಂದು ಬಿಡಿಎ ನಲ್ಲಿ ಆಗಿರುವ ಅನ್ಯಾಯಕ್ಕೆ ನ್ಯಾಯ ಕೊಡಿಸುವಂತೆ ಕೋರಿದ್ದಾರೆ. ಹೀಗಾಗಿ ನಾನು ಸುದ್ದಿಗೋಷ್ಠಿ ನಡೆಸಿ ಎಲ್ಲರ ಗಮನ ಸೆಳೆಯಲು ಪ್ರಯತ್ನಿಸುತ್ತಿದ್ದೇನೆ. ಬಿಡಿಎ ಅಧಿಕಾರಿಗಳು ಭೂಗಳ್ಳರ ಜೊತೆ ಕೈ ಜೋಡಿಸಿ ಬಡವರ ಜಮೀನು ನುಂಗಿದ್ದಾರೆ. ಈ ಭೂಮಿ ಅದರ ಅಸಲಿ ಮಾಲೀಕರ ಕೈಗೆ ಸೇರಬೇಕು ಎನ್ನುವ ಕಾರಣಕ್ಕೆ ಹೋರಾಡುತ್ತಿದ್ದೇನೆ ಎಂದು ಉಮಾಪತಿ ಹೇಳಿದ್ದಾರೆ.

ಈಗಾಗಲೇ ಬಿಡಿಎ ಹಾಗೂ ಭೂ ಮಾಲೀಕರ ಕುರಿತು ಸುಪ್ರೀಂ ಕೋರ್ಟ್ ವ್ಯಾಜ್ಯ ನಡೆಯುತ್ತಿದೆ. ಇಂತಹ ವೇಳೆ ಸುದ್ದಿಗೋಷ್ಠಿ ನಡೆಸುವುದು ಕಾನೂನಿಗೆ ವಿರುದ್ಧವಾಗಿದೆ. ಕಾನೂನಿನ ನಿಯಾಮವಳಿಗಳನ್ನೇ ಗಾಳಿಗೆ ತೂರಿ ಕಾನೂನಿಗೆ ತಲೆಬಾಗದೆ ಮನಬಂದಂತೆ ವರ್ತಿಸುತ್ತಿರುವ ಉಮಾಪತಿ ಅವರು ಅಡ್ಡ ಗೋಡೆ ಮೇಲೆ ದೀಪ ಇಟ್ಟಂತೆ ಆರೋಪ ಮಾಡುತ್ತಿದ್ದು, ಇವರ ನಡವಳಿಕೆ ಮೇಲೆ ಎಲ್ಲರಿಗೂ ಅನುಮಾನ ಮೂಡಿದೆ.

ಅಲ್ಲದೇ ಗಾಳಿಯಲ್ಲಿ ಗುಂಡು ಹಾರಿಸುವ ರೀತಿ ಮಾತನಾಡುತ್ತಿರುವ ಉಮಾಪತಿಯವರಿಗೆ ಮಾಹಿತಿಯ ಕೊರತೆ ಇರುವುದು ಸುದ್ದಿಗೋಷ್ಟಿಯಲ್ಲಿ ಎದ್ದುಕಾಣುತ್ತಿದ್ದು, ಇದಕ್ಕೆ ಸಂಬಂಧಪಟ್ಟಂತೆ ಸಂಪೂರ್ಣವಾಗಿ ವಕೀಲರನ್ನೇ ಅವಲಂಬಿಸಿದ್ದಾರೆ ಎಂಬುದು ಗೋಚರವಾಗಿದೆ.

ಇಲ್ಲಸಲ್ಲದ ಆರೋಪ ಮಾಡುತ್ತಿರುವ ಉಮಾಪತಿ ಅವರು ಮೊದಲು ಕಾನೂನಿನ ಪಾಠ ಕಲಿಯಬೇಕಾಗಿದೆ. ರಾಜಕೀಯ ದುರುದ್ದೇಶದಿಂದ, ಕಂಟೆಂಟ್ ಇಲ್ಲದಿದ್ದರೂ ಮಾತನಾಡಿರುವ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಬೇಕೆಂಬ ಉದ್ದೇಶದಿಂದ ಈ ಎಲ್ಲಾ ಹುನ್ನಾರಗಳನ್ನು ಮಾಡುತ್ತಿದ್ದು, ಆದರೆ ಇದರಲ್ಲಿ ವಿಫಲರಾಗಿದ್ದಾರೆ ಎಂದರೆ ತಪ್ಪಾಗಲಾರದು.

Related