ಪ್ರಧಾನಿ ಹುಟ್ಟು ಹಬ್ಬ : ಹಾಲು, ಬ್ರೇಡ್ ವಿತರಣೆ

ಪ್ರಧಾನಿ ಹುಟ್ಟು ಹಬ್ಬ : ಹಾಲು, ಬ್ರೇಡ್ ವಿತರಣೆ

ಶಹಾಪುರ :ಪ್ರಧಾನಮಂತ್ರಿ ನರೇಂದ್ರ ಮೋದಿ ರವರ 72 ಹುಟ್ಟು ಹಬ್ಬದ ಪ್ರಯುಕ್ತ ನಗರದ ಬಿಜೆಪಿ ಕಾರ್ಯಕರ್ತರು ಸಾರ್ವಜನಿಕ ಆಸ್ಪತ್ರೆಗಳಿಗೆ ಭೇಟಿ ನೀಡಿ ರೋಗಿಗಳಿಗೆ ಹಾಲು, ಬ್ರೇಡ್, ಹಣ್ಣನ್ನು ವಿತರಿಸಿದರು.
ಮುಖಂಡ ಅಪ್ಪುಗೌಡ ಮಾತನಾಡಿ ಪ್ರಧಾನಮಂತ್ರಿ ಮೋದಿ ಅವರು ದೇಶದ ಚಿಕ್ಕಾಣಿ ಹಿಡಿದು ಏಳು ವರ್ಷ ಕಳೆದಿವೆ. ಕೊರೋನಾ ಮಹಾಮಾರಿಯಂತಹ ಅನೇಕ ಸವಾಲು ಬಿಕ್ಕಟ್ಟುಗಳ ನಡುವೆಯೂ ದೇಶವನ್ನೂ ಪ್ರಗತಿಯತ್ತ ಮುನ್ನಡೆಸುತ್ತಿದ್ದು, ಭಾರತದ ಸಮಗ್ರ ಅಭಿವೃದ್ಧಿಯ ದಿಕ್ಕನ್ನು ನಿರ್ಧರಿಸುವಲ್ಲಿ ಧೀಮಂತ ನಾಯಕತ್ವವನ್ನು ಪ್ರದರ್ಶಿಸುತ್ತಿರುವ ಇವರ ಜೀವನದ ಹಾದಿ ಈಗೆ ಮುಂದುವರೆಯಲಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಲ್ಲಿಕಾರ್ಜುನ್ ಕಂದಕೂರ, ದೇವಿಂದ್ರಪ್ಪ ಕೊನೇರ, ಶಿವಲೀಲಾ ಅಕುಲ್, ಶೇಖರ ದೊರಿ, ಭಾರತಿ ಜಮಖಂಡಿ, ಮಂಜುಳಾ ಮಾಲಗತ್ತಿ, ಅಶೋಕ ನಾಯಕ, ಚಂದ್ರು ಯಾಳಗಿ, ರಾಜು ಪಂಚಬಾವಿ, ಖಾದರ್ ಪಾಷಾ , ಮಂಜು ಅಲಬನೂರ, ಬಿಜೆಪಿ ಕಾರ್ಯಕರ್ತರು ಇದ್ದರು.

Related