ರೈಲ್ವೆ ನಿಲ್ದಾಣ ಉದ್ಘಾಟಿಸಿದ ಮೋದಿ

ರೈಲ್ವೆ ನಿಲ್ದಾಣ ಉದ್ಘಾಟಿಸಿದ ಮೋದಿ

ಅಯೋಧ್ಯೆ: ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ರಾಮಜನ್ಮಭೂಮಿ ಅಯೋಧ್ಯಕ್ಕೆ ಭೇಟಿ ನೀಡಿದ್ದಾರೆ. ಇನ್ನು ನರೇಂದ್ರ ಮೋದಿ ಅವರ ಭೇಟಿಯಿಂದಾಗಿ, ನರೇಂದ್ರ ಮೋದಿಯವರಿಗೆ ಪ್ರತಿ ಹೆಜ್ಜೆ ಹೆಜ್ಜೆಗೂ ಹೈ ಸೆಕ್ಯೂರಿಟಿಯನ್ನು ಅಳವಡಿಸಲಾಗಿದೆ.

2 ಅಮೃತ್ ಭಾರತ್ ರೈಲುಗಳು ಹಾಗೂ 6 ವಂದೇ ಭಾರತ್ ರೈಲುಗಳಿಗೆ ಪ್ರಧಾನಿ ನರೇಂದ್ರ ಮೋದಿ ಶನಿವಾರ ಚಾಲನೆ ನೀಡಿದರು. ಅಯೋಧ್ಯೆಯ ಅಯೋಧ್ಯಾ ಧಾಮ್ ರೈಲು ನಿಲ್ದಾಣವನ್ನು ಲೋಕಾರ್ಪಣೆಗೊಳಿಸಿದ್ದಾರೆ

ರಾಮಮಂದಿರಕ್ಕೆ ಭೇಟಿ ನೀಡಿದ ನರೇಂದ್ರ ಮೋದಿಯವರು ಇಂದು ಹಲವಾರು ರೀತಿಯ ವಿವಿಧ ಕಾರ್ಯಕ್ರಮಗಳಿಗೆ ಚಾಲನೆ ನೀಡಲಿದ್ದಾರೆ. ಇನ್ನು ಹೊಸ ಅಮೃತ್ ಭಾರತ್ ಮತ್ತು ವಂದೇ ಭಾರತ್ ರೈಲುಗಳಿಗೂ ಹಸಿರು ನಿಶಾನೆ ತೋರಿದ್ದಾರೆ.

ವಿಮಾನ ನಿಲ್ದಾಣ ಮತ್ತು ರೈಲ್ವೆ ನಿಲ್ದಾಣವನ್ನು ಹೂವಿನಿಂದ ಅಲಂಕರಿಸಲಾಗಿದ್ದು, ಜೊತೆಗೆ ರಾಮನ ದೊಡ್ಡ ಕಟೌಟ್​​​ನ್ನು ಹಾಕಲಾಗಿದೆ. ಅಯೋಧ್ಯೆಯ ಅನೇಕ ಕಡೆಗಳಲ್ಲಿ ರಾಮನ ಚಿತ್ರಗಳನ್ನು ಚಿತ್ರಿಸಲಾಗಿದೆ. ಅಯೋಧ್ಯೆಯ ರಸ್ತೆಗಳಿಂದ ಹಿಡಿದು ಘಾಟ್‌ಗಳವರೆಗೆ ಅದ್ಭುತವಾಗಿ ಅಲಂಕರಿಸಲಾಗಿದೆ.

ಇನ್ನು ನರೇಂದ್ರ ಮೋದಿಯವರು ಅಯೋಧ್ಯಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಸುಮಾರು 15 ಕಿ.ಮೀ ರೋಡ್ ಶೋ ಮಾಡಿದ್ದಾರೆ ಎಂದು ತಿಳಿದುಬಂದಿದೆ.

 

Related