ಫೀಸ್ ಕಟ್ಟಲು ಒತ್ತಡ; ವಿದ್ಯಾರ್ಥಿ ಆತ್ಮಹತ್ಯೆ

ಫೀಸ್ ಕಟ್ಟಲು ಒತ್ತಡ; ವಿದ್ಯಾರ್ಥಿ ಆತ್ಮಹತ್ಯೆ

ಬಾಕಿ ಇರುವ ಶುಲ್ಕ ಪಾವತಿಗೆ ಆಡಳಿತ ಮಂಡಳಿಯ ಒತ್ತಡದಿಂದ ಬೇಸತ್ತ 10ನೇ ತರಗತಿ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಧ್ಯಪ್ರದೇಶದ ಮಹಾಲಕ್ಷ್ಮೀ ನಗರದಲ್ಲಿ ನಡೆದಿದೆ.

ಹರೇಂದ್ರ ಸಿಂಗ್ ಗುರ್ಜರ್ (15) ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಶಾಲೆಯವರು ಒತ್ತಡ ಹೇರಿದ್ದರಿಂದ ಹುಡುಗ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಪ್ರಕರಣ ದಾಖಲಿಸಿಕೊಂಡಿದ್ದೇವೆ. ಆತ್ಮಹತ್ಯೆಗೆ ಕಾರಣದ ಬಗ್ಗೆ ತನಿಖೆ ಆರಂಭಿಸಿದ್ದೇವೆ. ಬಾಲಕ ಯಾವುದೇ ನೋಟ್ ಬರೆದಿದ್ದು ಪತ್ತೆಯಾಗಿಲ್ಲ ಎಂದು ಲುಸುಡಿಯಾ ಸಬ್ ಇನ್ಸ್ ಪೆಕ್ಟರ್ ಧರ್ಮೆಂದ್ರ ಸರಗಿಯಾ ತಿಳಿಸಿದ್ದಾರೆ.

Related