ಗರ್ಭಿಣಿಯರು ಪೌಷ್ಠಿಕ ಆಹಾರ ಸೇವಿಸಬೇಕು

ಗರ್ಭಿಣಿಯರು ಪೌಷ್ಠಿಕ ಆಹಾರ ಸೇವಿಸಬೇಕು

ಶಹಾಪುರ :ಗರ್ಭಿಣಿಯರಿಗೆ ಅಪೌಷ್ಠಿಕತೆ ಉಂಟಾಗದಂತೆ ಹಸಿರು ತರಕಾರಿ ಸೊಪ್ಪು ಸೇರಿ ಕಬ್ಬಿಣಾಂಶವುಳ್ಳ ಪದಾರ್ಥಗಳನ್ನು ಸೇವಿಸಬೇಕು ಎಂದು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ ಗುರುರಾಜ್ ಹೇಳಿದರು.
ತಾಲ್ಲೂಕಿನ ದಿಗ್ಗಿ ಸಿದ್ದಾರೂಢ ಆಶ್ರಮದಲ್ಲಿ, ಉಮರದೊಡ್ಡಿ, ಬಾಣತಿಹಾಳ, ಸೈದಾಪೂರ ಗ್ರಾಮಗಳಲ್ಲಿ ಶಿಶು ಅಭಿವೃಧ್ಧಿ, ಗ್ರಾಮೀಣ ಅಭಿವೃದ್ಧಿ, ಆರೋಗ್ಯ ಇಲಾಖೆ ವತಿಯಿಂದ ಪೋಷಣ ಮಾಸಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತಾನಾಡಿದರು.
ಮಕ್ಕಳಿಗೆ ಆರೋಗ್ಯ ಕಾಪಾಡುವುದಕ್ಕೆ ಚುಚ್ಚುಮದ್ದು ಮುಖ್ಯವಾಗಿದ್ದು, ಗರ್ಭಿಣಿಯರಿಗೆ ನವಮಾಸ ಹೆರಿಗೆಯ ಮುಂಚೆ ಎಂಟು ದಿನಗಳೊಳಗೆ ಕೋವಿಡ್ ಪರೀಕ್ಷೆ ಒಳಪಡಿಸಲಾಗುವುದು.
ಪೌಷ್ಠಿಕ ಆಹಾರ ಮೊಳಕೆ ಕಾಳು, ಶೇಂಗಾ, ಬೆಲ್ಲ ಸೇವಿಸಬೇಕು. ಇದರಿಂದ ಕಬ್ಬಿಣಾಂಶ ಹೆಚ್ಚಿಸುವುದರಿಂದ ಹೆರಿಗೆಗೆ ಸಹಾಯಕವಾಗುವುದು. ಸರ್ಕಾರವೇ ಮನೆ ಬಾಗಿಲಿಗೆ ಪೌಷ್ಠಿಕಾಂಶಯುಕ್ತ ಪದಾರ್ಥಗಳನ್ನು ತಲುಪಿಸುತ್ತಿದ್ದು, ಗರ್ಭಿಣಿಯರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಪ್ರಲ್ಹಾದ್, ನಂದಾ, ಮಂಜುನಾಥ ರಾಠೋಡ್, ಜಯಶ್ರೀ, ಅಶೋಕ ಪ್ಯಾಟ, ದೇವೆಗೌಡ, ಅಂಗನವಾಡಿ ಕಾರ್ಯಕರ್ತೆಯರಾದ ಶಶಿಕಲಾ, ಮಾಳಮ್ಮ, ಅರುಣಾ ಹೌಮಮ್ಮ, ಭೀಮಬಾಯಿ , ರೇಣುಕಾ, ಬಸಮ್ಮ, ಸೋಪನವಿ, ಇಲಾಖೆಯ ಅಧಿಕಾರಿಗಳು ಇದ್ದರು.

Related