ಕರ್ನಾಟಕದ “ರತ್ನ” ಪ್ರಭಾ

ಕರ್ನಾಟಕದ “ರತ್ನ” ಪ್ರಭಾ

ಆಡು ಮುಟ್ಟದ ಸೊಪ್ಪಿಲ್ಲ ಮಹಿಳಾ ಪ್ರಾತಿನಿಧ್ಯವಿಲ್ಲದ ಕ್ಷೇತ್ರವಿಲ್ಲ….

ಸುಸ್ಥಿರ ನಾಳೆಗಾಗಿ ಲಿಂಗ ಸಮಾನತೆ ಇಂದಿನ ಔಚಿತ್ಯ…

ಆಡು ಮುಟ್ಟದ ಸೊಪ್ಪಿಲ್ಲ ಮಹಿಳಾ ಪ್ರಾತಿನಿಧ್ಯವಿಲ್ಲದ ಕ್ಷೇತ್ರವಿಲ್ಲ….

ಸುಸ್ಥಿರ ನಾಳೆಗಾಗಿ ಲಿಂಗ ಸಮಾನತೆ ಇಂದಿನ ಔಚಿತ್ಯ…

ಮಹಿಳೆಯರ ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಮತ್ತು ರಾಜಕೀಯ ಸಾಧನೆಗಳನ್ನು ಗುರುತಿಸಲು ಪ್ರತಿ ವರ್ಷ ಮಾರ್ಚ್ 8ರಂದು ಅಂತರರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಲಾಗುತ್ತದೆ.

1911ರಲ್ಲಿ ಮೊದಲ ಬಾರಿಗೆ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಆಚರಿಸಲಾಯಿತು. ವಿವಿಧ ಕ್ಷೇತ್ರಗಳಲ್ಲಿನ ಮಹಿಳೆಯರ ಸಾಧನೆಗಳನ್ನು ಗುರುತಿಸುವುದು ಮತ್ತು ಮಹಿಳಾ ಸಮಾನತೆ, ಲಿಂಗ ತಾರತಮ್ಯ ಕುರಿತು ಅರಿವು ಮೂಡಿಸುವುದು ಈ ದಿನದ ವಿಶೇಷತೆ.

ಸುಸ್ಥಿರ ನಾಳೆಗಾಗಿ ಲಿಂಗ ಸಮಾನತೆ

ಹವಾಮಾನ ಬಿಕ್ಕಟ್ಟಿನಷ್ಟೇ, ಲಿಂಗ ಸಮಾನತೆ ಎಂಬುದು 21ನೇ ಶತಮಾನದ ಅತಿದೊಡ್ಡ ಜಾಗತಿಕ ಸವಾಲುಗಳಲ್ಲಿ ಒಂದಾಗಿದೆ. ಪುರುಷರಿಗಿಂತ ಮಹಿಳೆಯರನ್ನು ಹೆಚ್ಚು ದುರ್ಬಲರಂತೆ ಕಾಣಲಾಗುತ್ತಿದೆ. ಮಹಿಳೆಯರು ಹವಾಮಾನ ಬದಲಾವಣೆ, ನೈಸರ್ಗಿಕ ಸಂಪನ್ಮೂಲಗಳ ಮೇಲೆ ಹೆಚ್ಚು ಅವಲಂಬಿತರಾಗಿದ್ದು, ಬದಲಾವಣೆಯ ಪರಿಣಾಮಕ್ಕೆ ಒಳಗಾಗುತ್ತಾರೆ.

ಈ ನಡುವೆಯೂ ಹವಾಮಾನ ಬಿಕ್ಕಟ್ಟನ್ನು ತಗ್ಗಿಸುವ ನಿಟ್ಟಿನಲ್ಲಿ ಹೆಣ್ಣು ಮಕ್ಕಳು, ಮಹಿಳೆಯರು ಪ್ರಮುಖ ಪಾತ್ರವಹಿಸುತ್ತಾರೆ. ಮಹಿಳೆಯರು ಮತ್ತು ಯುವತಿಯರು ಹೆಚ್ಚು ಪ್ರಭಾವಶಾಲಿ, ಶಕ್ತಿಯುತ ನಾಯಕಿಯರಾಗಿದ್ದಾರೆ. ಈ ಅಂತರರಾಷ್ಟ್ರೀಯ ಮಹಿಳಾ ದಿನದಂದು ‘ಸುಸ್ಥಿರ ನಾಳೆಗಾಗಿ ಇಂದು ಲಿಂಗ ಸಮಾನತೆ’ಎಂದು ವಿಶ್ವಸಂಸ್ಥೆ ಹೇಳಿದೆ.

ಮಹಿಳಾ ದಿನದ ಮಹತ್ವ

ಮಹಿಳೆಯರ ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಮತ್ತು ರಾಜಕೀಯ ಸಾಧನೆಗಳನ್ನು ಗುರುತಿಸಲು ಅಂತರರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಲಾಗುತ್ತದೆ. ವಿಶ್ವದಾದ್ಯಂತ ಶಿಕ್ಷಣ ಸಂಸ್ಥೆಗಳಲ್ಲಿ ಸಾರ್ವಜನಿಕ ಭಾಷಣ, ರ‍್ಯಾಲಿ, ಕಾರ್ಯಾಗಾರ ಮತ್ತು ವಿಚಾರಗೋಷ್ಠಿ, ಚರ್ಚೆಗಳು, ರಸಪ್ರಶ್ನೆ ಸ್ಪರ್ಧೆ ಮತ್ತು ಉಪನ್ಯಾಸಗಳನ್ನು ನಡೆಸುವ ಮೂಲಕ ಅಂತರರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಲಾಗುತ್ತಿದೆ.

ಆಡು ಮುಟ್ಟದ ಸೊಪ್ಪಿಲ್ಲ ಮಹಿಳಾ ಪ್ರಾತಿನಿಧ್ಯವಿಲ್ಲದೆ ಕ್ಷೇತ್ರವೇ ಇಲ್ಲ.

ಮಹಿಳೆ ಎಂದರೆ ಅದೊಂದು ಶಕ್ತಿ. ಅದ್ಭುತ ತಾಯಿಯಾಗಿ, ಮಗಳಾಗಿ ಅತ್ತೆ-ಸೊಸೆ,ಅಜ್ಜಿ ಅಧಿಕಾರಿಣಿ,  ರಾಜಕಾರಣಿ, ಸಮಾಜ ಸೇವೆ, ಉದ್ಯಮ, ಐಎಎಸ್, ಪೊಲೀಸ್ ಇಂದ ಹಿಡಿದು ರಾಷ್ಟ್ರದ ಪ್ರಥಮ ಪ್ರಜೆಯವರೆ ದೇಶ, ವಿದೇಶಗಳನ್ನುಪ್ರತಿನಿಧಿಸಿ ಪ್ರತಿನಿಧಿಸುತ್ತಿರು ನಾರಿ ಶಕ್ತಿಗೊಂದು ಸಲಾಮು.

ಐದು ದಶಕಗಳ ಹಿಂದೆ ಮಹಿಳೆಯರು ಎಂದರೆ ಕೇವಲ ಅಡುಗೆ ಮನೆಗೆ ಸೀಮಿತ ಎಂಬ ಭಾವವಿತ್ತು. ಅದರಲ್ಲೂ ಉನ್ನತ ಹುದ್ದೆಗೇರುವ ಕನಸನ್ನು ಕಾಣುವಂತಿರಲಿಲ್ಲ. ಆದರೆ, ೧೯೮೧ರ ಕರ್ನಾಟಕ ಕೇಡರ್‌ನ ಪದವೀಧರರಾದ ಶ್ರೀಮತಿ ರತ್ನಪ್ರಭಾರವರು ರಾಜ್ಯದ ಮೊದಲ ಮಹಿಳಾ ಐ.ಎ.ಎಸ್. ಆಗಿ ಧೀರ್ಘಕಾಲದವರೆಗೆ ಖ್ಯಾತಿಯನ್ನು ಪಡೆದರು.

ಐದು ದಶಕಗಳ ಹಿಂದೆ ಮಹಿಳೆಯರು ಎಂದರೆ ಕೇವಲ ಅಡುಗೆ ಮನೆಗೆ ಸೀಮಿತ ಎಂಬ ಭಾವವಿತ್ತು. ಅದರಲ್ಲೂ ಉನ್ನತ ಹುದ್ದೆಗೇರುವ ಕನಸನ್ನು ಕಾಣುವಂತಿರಲಿಲ್ಲ. ಆದರೆ, 1981ರ ಕರ್ನಾಟಕ ಕೇಡರ್‌ನ ಪದವೀಧರರಾದ ಶ್ರೀಮತಿ ರತ್ನಪ್ರಭಾರವರು ರಾಜ್ಯದ ಮೊದಲ ಮಹಿಳಾ ಐ.ಎ.ಎಸ್. ಆಗಿ ಧೀರ್ಘಕಾಲದವರೆಗೆ ಖ್ಯಾತಿಯನ್ನು ಪಡೆದರು.

ರತ್ನಪ್ರಭಾ ಹಿನ್ನೆಲೆ

ಪ್ರಕಾಶಂ ಜಿಲ್ಲೆಯ ಒಂಗೋಲ್‌ನಲ್ಲಿ 13 ಮಾರ್ಚ್ 1958 ರಂದು ರತ್ನಪ್ರಭಾರವರು ಜನಿಸಿದರು. ರತ್ನಪ್ರಭಾರವರ ತಂದೆ ಚಂದ್ರಯ್ಯರವರು ಸ್ವಾತಂತ್ರ್ಯದ ನಂತರ ಹೈದರಾಬಾದ್ ರಾಜ್ಯದ ಮೊಟ್ಟ ಮೊದಲ ಐ.ಎ.ಎಸ್. ಅಧಿಕಾರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಜಿಲ್ಲಾಧಿಕಾರಿಯಾಗಿ ವಿಶೇಷ ಜನಾನುರಾಗಿ ಅಧಿಕಾರಿ ಎಂಬ ಖ್ಯಾತಿಯನ್ನು ಪಡೆದರು. ಅವರ ಸಹೋದರ ಸಾಯಿ ಚಂದ್ರರವರು ಸಹ ಐ.ಎ.ಎಸ್. ಅಧಿಕಾರಿಯಾಗಿ ಆಂಧ್ರಪ್ರದೇಶ ಹಾಗೂ ತೆಲಂಗಾಣದಲ್ಲಿ ಸೇವೆ ಸಲ್ಲಿಸಿದ್ದಾರೆ.

ರತ್ನಪ್ರಭಾರವರ ತಾಯಿ ಮೂಲತಃ ಉಡುಪಿ ಜಿಲ್ಲೆಯ ಕಾರ್ಕಳದವರು. ಅವರ ತಾಯಿ ವಿಮಲಾ ಬಾಯಿ ಕಾರ್ಕಳದ ಮೊದಲ ಮಹಿಳಾ ವೈದ್ಯರಲ್ಲಿ ಒಬ್ಬರು. “ಕಾರ್ಕಳದಲ್ಲಿ ಪ್ರಾಥಮಿಕ ಶಿಕ್ಷಣದ ನಂತರ ಅವರ ತಾಯಿ ಮದ್ರಾಸ್ ವೈದ್ಯಕೀಯ ಕಾಲೇಜಿಗೆ ಸೇರಿದರು. ಅವರು 1948ರಲ್ಲಿ ಪದವಿ ಪಡೆದರು. ನಂತರ ಅವರು ಪುತ್ತೂರು, ಉಡುಪಿ ಮತ್ತು ಮಂಗಳೂರಿನ ಲೇಡಿ ಗೋಸ್ಚೆನ್ ಆಸ್ಪತ್ರೆಯಲ್ಲಿ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದರು.  ಅವರು ಐ.ಎ.ಎಸ್. ಅಧಿಕಾರಿ ಚಂದ್ರಯ್ಯರವರನ್ನು ವಿವಾಹವಾದ ನಂತರ ಆಂಧ್ರಪ್ರದೇಶಕ್ಕೆ ಸ್ಥಳಾಂತರಗೊಂಡಿದ್ದರು. ಕೊಂಕಣಿಯಲ್ಲಿ ನಿರರ್ಗಳವಾಗಿ ಮಾತನಾಡಬಲ್ಲ ರತ್ನಪ್ರಭಾ ಅವರ ಪೂರ್ವಿಕರ ಮನೆ ಇಂದಿಗೂ ಕಾರ್ಕಳದಲ್ಲಿದೆ.

ರತ್ನಪ್ರಭಾರವರು ಹೈದರಾಬಾದ್‌ನಲ್ಲಿ ಹುಟ್ಟಿ ಬೆಳೆದು, ಬಿಎಸ್ಸಿ ಪದವಿಯನ್ನು ಪಡೆದಿದ್ದಾರೆ. ರತ್ನಪ್ರಭಾ ಅವರು 1981 ರ ಸಿವಿಲ್ ಸೇವೆಗಳ ಬ್ಯಾಚ್‌ಗೆ ಸೇರಿದಂರು. ಅವರು ಆಂಧ್ರ ಹಾಗೂ ಕರ್ನಾಟಕದಲ್ಲಿ ತಮ್ಮ ವೃತ್ತಿ ಜೀವನ ಆರಂಭಿಸಿದರು. ಮೂಲತಃ ಇವರು ಹೈದರಾಬಾದಿನವರಾದರೂ ವಿವಿಧ ಹುದ್ದೇಗೇರಿ ತಮ್ಮ ಅತ್ಯುನ್ನತ ಸೇವೆ ನೀಡಿದ್ದು ಕರ್ನಾಟಕಕ್ಕೆ. ಅದರಲ್ಲೂ ಉತ್ತರ ಕರ್ನಾಟಕಕ್ಕೆ. 1981ರಲ್ಲಿ ಬೀದರ್‌ನಲ್ಲಿ ಅಸಿಸ್ಟೆಂಟ್ ಕಮೀಷನರ್ ಆಗಿ ಸರ್ಕಾರಿ ಸೇವೆಯನ್ನು ಆರಂಭಿಸಿದರು.

ವಿವಾಹ : ಸುಶಿಕ್ಷಿತ ಶಿಕ್ಷಣ ಕುಟುಂಬದ ಹಿನ್ನೆಲೆಯಲ್ಲಿ ಬೆಳೆದು ಬಂದ ರತ್ನಪ್ರಭಾರವರು ತಂದೆ, ಸಹೋದರ ಎಲ್ಲರೂ ದೇಶದ ಉನ್ನತ ಹುದ್ದೆಯಲ್ಲಿ ಕಾರ್ಯನಿರ್ವಹಿಸಿದವರೇ. ತಾವು ಸಹ ಐಎಎಸ್ ಅಧಿಕಾರಿಯೂ ಆಗಿರುವ ವಿದ್ಯಾಸಾಗರ್ ಅವರನ್ನು ವಿವಾಹವಾದರು. ಸಾಂಸಾರಿಕ ಹಾಗೂ ವೃತ್ತಿ ಜೀವನದಲ್ಲಿ ಯಾವುದೇ ಏಳು ಬೀಳುಗಳಿಲ್ಲದೇ ಸುಖೀ ಸಂಸಾರ ನಡೆಸುತ್ತಾ ಸರ್ಕಾರಿ ಸೇವೆ, ಜನ ಸೇವೆ ಮಾಡುತ್ತಾ ಬಂದಿರುವ ರತ್ನಪ್ರಭಾರವರು ಎಲ್ಲರಿಗೂ ಸ್ಪೂರ್ತಿ.

ದಲಿತ ಕುಟುಂಬದವರಾದ ಶ್ರೀಮತಿ. ರತ್ನಪ್ರಭಾರವರು ವೃತ್ತಿ ಜೀವನದಲ್ಲಿ ಉನ್ನತ ಸ್ಥಾನಕ್ಕೇರಿದರು. ನಾರಾ ಚಂದ್ರಬಾಬು ನಾಯ್ಡು ಅವರ ಅಡಿಯಲ್ಲಿ ಎಪಿ ಮುಖ್ಯ ಕಾರ್ಯದರ್ಶಿಯಾಗಿ ಕೆಲಸ ಮಾಡಿದರು ಮತ್ತು ದಿವಂಗತ ವೈಎಸ್ ರಾಜಶೇಖರ್ ರೆಡ್ಡಿರವರ ಸಮ್ಮುಖದಲ್ಲೂ ಕೆಲಸ ನಿರ್ವಹಿಸದರು.

ರತ್ನಪ್ರಭಾರವರು ಹೆಚ್ಚಾಗಿ ಮಹಿಳಾ ಪ್ರಗತಿ ಮತ್ತು ಮಹಿಳಾ ಸಬಲೀಕರಣದ ವಿಷಯಗಳ ಚರ್ಚೆಗಳಲ್ಲಿ ಭಾಗವಹಿಸಿ ಮಹಿಳೆಯರ ಉನ್ನತಿಗಾಗಿ ಸದಾ ಶ್ರಮಿಸುವ ಧೀಮಂತ ನಾಯಕಿ ಎಂದರೆ ತಪ್ಪಾಗಲಾರದು.

ರತ್ನಪ್ರಭಾ ಅವರು 2017ರಲ್ಲಿ ಕರ್ನಾಟಕದ ಮುಖ್ಯ ಕಾರ್ಯದರ್ಶಿಯಾಗಿ ಕೆಲಸ ನಿರ್ವಹಿಸಿದರು. ಕೇವಲ ಒಂದೇ ವರ್ಷದಲ್ಲಿ ನಿವೃತ್ತಿ ಪಡೆದರು ಸಹಾ ಜನಾನುರಾಗಿ ಅಧಿಕಾರಿ ಎಂಬ ಹೆಗ್ಗಳಿಕೆ ಪಡೆದರು. ರಾಜ್ಯದ ಮೂಲೆ ಮೂಲೆಗಳಿಂದ ಮುಖ್ಯ ಕಾರ್ಯದರ್ಶಿ ಕಾರ್ಯಾಲಯಕ್ಕೆ ಬಡ ಜನ ಬಂದು ತಮ್ಮ ಅಹವಾಲುಗಳನ್ನು ನೀಡಿ, ಪರಿಹಾರಗಳನ್ನು ಪಡೆಯುವಲ್ಲಿ ಯಶಸ್ವಿಯಾದರು. ಅದರಲ್ಲೂ ಕಲ್ಯಾಣ ಕರ್ನಾಟಕದ ಜನತೆಗೆ ವಿಧಾನಸೌಧದ ಒಳ ಹೊಕ್ಕಲು ಇದ್ದಂತಹ ಭಯವನ್ನು ತೊಡೆದು ಹಾಕಿದ ಮಹಿಳಾ ಅಧಿಕಾರಿ ರತ್ನಪ್ರಭಾರವರೆಂದರೆ ಎಲ್ಲರಿಗೂ ಅಚ್ಚುಮೆಚ್ಚು. ತಮ್ಮ ವೃತ್ತಿ ಜೀವನದುದ್ದಕ್ಕೂ ಬಡ ಜನರ, ಮಹಿಳೆಯರ ಸಬಲೀಕರಣಕ್ಕಾಗಿ ಹೋರಾಡುತ್ತಾ ಬಂದಿದ್ದಾರೆ. ವಿಶೇಷವಾಗಿ ಉತ್ತರ ಕರ್ನಾಟಕದಲ್ಲಿ ಅತೀ ಹೆಚ್ಚು ಸೇವೆ ಸಲ್ಲಿಸಿರುವ ರತ್ನಪ್ರಭಾರವರನ್ನು ಕಂಡರೆ ಅಲ್ಲಿನ ಜನ “ಅಮ್ಮ” ಎಂದೇ ಕೂಗುತ್ತಾರೆ. ಅವರು ಎಸಿ ಆಗಿ ಕಾರ್ಯನಿರ್ವಹಿಸುವ ವೇಳೆ ಜನ ಅವರನ್ನು ಎಸಿ ಸಾಬ್ ಎಂದು ಕರೆಯುತ್ತಿದ್ದರು. ಪ್ರೇರಣೆ ಪಡೆದ ರತ್ನಪ್ರಭಾರವರು ಕ್ರಾನಿಕಲ್ಸ್ ಆಫ್ ಆನ್ ಎಸಿ ಸಾಬ್ ಎಂಬ ಪುಸ್ತಕವನ್ನು ಹೊರ ತಂದಿದ್ದಾರೆ.

ಗ್ರಾಮವೊಂದಕ್ಕೆ ಅಂಗನವಾಡಿ ಕಾರ್ಯಕರ್ತೆಯರನ್ನು ನೇಮಕ ಮಾಡುವ ಜವಾಬ್ದಾರಿಯನ್ನು ರತ್ನಪ್ರಭಾರವರು ಹೊಂದಿದ್ದರು. ಆದರೆ 7ನೇ ತರಗತಿಯಲ್ಲಿ ತೇರ್ಗಡೆಯಾದವರು ಯಾರೂ ಇರಲಿಲ್ಲ. ಕೊನೆಗೆ ಪಕ್ಕದ ಹಳ್ಳಿಯ ಕೆಲಸಗಾರರನ್ನು ಕರೆದುಕೊಂಡು ಬರಬೇಕಾಯಿತು. 1983ರಲ್ಲಿ ಅಂಗನವಾಡಿ ಕಾರ್ಯಕರ್ತೆಗೆ 75 ರೂ., ಸಹಾಯಕಿ 50 ರೂ. ವೇತನ ನೀಡಿದರು. ಆಗ ರಾಜಮ್ಮ ಎಂಬುವವರನ್ನು ಅಂಗನವಾಡಿ ಕಾರ್ಯಕರ್ತೆಯಾಗಿ ನೇಮಿಸಿದ್ದರು. ದಶಕಗಳ ನಂತರ ಇವರು ಮುಖ್ಯ ಕಾರ್ಯದರ್ಶಿ ಹುದ್ದೇಗೇರಿದಾಗ ರಾಜಮ್ಮ ಇವರನು ಕಂಡು ಮಾತನಾಡಿಸಿದರು. ಇವರ ಪ್ರೇರೆಣೆಯಿಂದಾಗಿ ಅವರು ಕೆಲಸಕ್ಕೆ ಸೇರಿದ್ದರಂತೆ. ಇದೀಗ ಅವರ ಮಗಳೂ ಸಹ ಅಂಗನವಾಡಿ ಕಾರ್ಯಕರ್ತೆಯಾಗಿದ್ದಾರೆ.

ರಾಯಚೂರಿನಲ್ಲಿ ಮೊದಲ ಮಹಿಳಾ ಕಲೆಕ್ಟರ್ ಆಗಿದ್ದರು. ತುಂಗಭದ್ರಾ ಕಾಲುವೆ ಬರುತ್ತಿದ್ದು, ನೀರಿಗಾಗಿ ರೈತರು ಕಂಗಾಲಾಗಿದ್ದರು. “ಮುಖ್ಯಮಂತ್ರಿ ವೀರೇಂದ್ರ ಪಾಟೀಲ್ ರವರು ರತ್ನಪ್ರಭಾರವರು ಸಮಸ್ಯೆಯನ್ನು ಹೇಗೆ ನಿಭಾಯಿಸುತ್ತಾರೆಂದು  ಆಶ್ಚರ್ಯಪಟ್ಟರು. ಎರಡು ವರ್ಷಗಳು ನಾನು ಅಲ್ಲಿದ್ದೆ. ತುಂಗಭದ್ರಾ ಸಮಸ್ಯೆಯನ್ನು ಚೆನ್ನಾಗಿ ನಿಭಾಯಿಸಿ ಭೇಷ್ ಎನಿಸಿಕೊಂಡರು.

ಎಷ್ಟೋ ಜನ ಇವರ ಹೆಸರನ್ನು ತಮ್ಮ ಮಕ್ಕಳಿಗೆ ನಾಮಕರಣ ಮಾಡಿದ್ದಾರೆ. ಇವರ ಅಂತಹಕರಣ, ಇನ್ನೊಬ್ಬರ ಕಷ್ಟಕ್ಕೆ ಮಿಡಿಯುವ ಇವರ ಗುಣ ಎಲ್ಲರನ್ನು ತಮ್ಮತ್ತ ಆಕರ್ಷಿಸುತ್ತದೆ ಎಂಬುದರಲ್ಲಿ ಯಾವುದೇ ಅತಿಶಯೋಕ್ತಿ ಇಲ್ಲಾ.

ಸರ್ಕಾರದ ಅತ್ಯುನ್ನತ ಸ್ಥಾನಕ್ಕೇರಿದರು. ಕರ್ನಾಟಕ ರಾಜ್ಯದ ಮುಖ್ಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದರು. ತಮ್ಮ ನಿವೃತ್ತಿಯ ನಂತರವೂ ಮಹಿಳೆಯರಿಗಾಗಿ ಏನಾದರೂ ಮಾಡಬೇಕೆಂಬ ಹಂಬಲ ಅವರಲ್ಲಿ ತುಡಿಯುತ್ತಲೇ ಇತ್ತು. ಸಾಮಾಜಿಕ ಕ್ಷೇತ್ರದಿಂದ ಐಟಿ, ಮೂಲಸೌಕರ್ಯ, ಕೈಗಾರಿಕೆ ಮತ್ತು ವಾಣಿಜ್ಯ, ಕೌಶಲ್ಯ, ಮಹಿಳಾ ಸಬಲೀಕರಣಕ್ಕಾಗಿ ನಿರಂತರವಾಗಿ ಶ್ರಮಿಸುತ್ತಲೇ ಇದ್ದಾರೆ. ನಮ್ರತೆ, ಪ್ರಾಮಾಣಿಕತೆ ಮತ್ತು ಪ್ರಶ್ನಾತೀತ ಸಮಗ್ರತೆಯ ದಾರಿದೀಪವಾದ ಶ್ರೀಮತಿ ರತ್ನ ಪ್ರಭಾ ಅವರ ಮೂಲ ತತ್ವವೆಂದರೆ ಕಾಯಕವೇ ಕೈಲಾಸ.

ರಾಜಕೀಯ ಪ್ರವೇಶ

ನಿವೃತ್ತಿ ನಂತರ 2019 ರಲ್ಲಿ ಬಿಜೆಪಿಗೆ ಸೇರಿದ ರತ್ನಪ್ರಭಾರತವರು, ನಂತರ ನಡೆದ ತಿರುಪತಿ ಉಪ ಚುನಾವಣೆಯಲ್ಲಿ ಸ್ಪರ್ಧಿಸಲು ಸ್ವತಃ ನರೇಂದ್ರ ಮೋದಿಯವರೇ ಇವರ ನಿಷ್ಠೆ, ಸೇವೆ ಹಾಗೂ ಬದ್ಧತೆಯನ್ನು ಮೆಚ್ಚಿ ಬಿಜೆಪಿ-ಜನಸೇನಾ ಜಂಟಿ ಅಭ್ಯರ್ಥಿಯಾಗಿ ಸ್ಪರ್ಧಿಸಲು ಅವಕಾಶ ಕಲ್ಪಿಸಿದರು.

ಜನರು, ಜನರಿಗಾಗಿ ಮತ್ತು ಸಾರ್ವಜನಿಕ ಸೇವಕರಾಗಿ 37 ವರ್ಷಗಳ ಕಾಲ ವೃತ್ತಿಜೀವನದ ವಿವಿಧ ಮಜಲುಗಳನ್ನು ಕಂಡ ಶ್ರೀಮತಿ ರತ್ನಪ್ರಭಾರವರಂತಹ ಮಹಿಳೆಯನ್ನು 2023 ರ ಮಹಿಳಾ ದಿನಾಚರಣೆಯಂದು ಸಂಭ್ರಮಿಸುವುದು ನಮ್ಮೆಲ್ಲರ ಹೆಮ್ಮೆ.

ಮಹಿಳಾ ಕಲ್ಯಾಣಕ್ಕಾಗಿ ಇತ್ತೀಚೆಗೆ ಕರ್ನಾಟಕ ರಾಜ್ಯದ ಮೈಸೂರು, ಮಂಗಳೂರು, ರಾಮನಗರ, ಕಲ್ಯಾಣ ಕರ್ನಾಟಕದಲ್ಲಿ ಉಬುಂಟು ಸಂಸ್ಥೆಯನ್ನು ಸ್ಥಾಪಿಸಿ ಡಿಜಿಟಲ್ ತರಬೇತಿ ನೀಡುತ್ತಿರುವ ರತ್ನಪ್ರಭಾರವರು ಮಹಿಳೆಯರು ಆರ್ಥಿಕವಾಗಿ ಸಬಲರಾಗಲು ಹೆಚ್ಚು ಶ್ರಮವಹಿಸುತ್ತಿದ್ದಾರೆ.

ಇಂತಹ ಮಹಿಳಾ ನಾಯಕಿಗೆ ಬಿಜೆಪಿ ಪಕ್ಷ ಹೆಚ್ಚು ಹೆಚ್ಚು ಅವಕಾಶ ನೀಡಿದರೆ ಉತ್ತಮ ನಾಯಕಿಯಾಗಿ ಹೊರ ಹೊಮ್ಮುವುದರಲ್ಲಿ ಯಾವುದೇ ಸಂಶಯವಿಲ್ಲ.  ಈಗಾಗಲೇ ವಿವಿಧ ಹುದ್ದೆಗಳನ್ನು ಅಲಂಕರಿಸಿರುವ ಇವರು ರಾಜ್ಯದ ಜನರಿಗೆ ಚಿರಪರಿಚಿತ.

ಇವರು 2019ರಲ್ಲಿ ಲೋಕಸಭಾ ಚುನಾವಣೆ ವೇಳೆ ಬಿಜೆಪಿ ಪಕ್ಷಕ್ಕೆ ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ಸಮ್ಮುಖದಲ್ಲಿ ಕಲಬುರಗಿಯಲ್ಲಿ ಸೇರ್ಪಡೆಗೊಂಡಿದ್ದರು. ಕೆಲಸ ನಿರ್ವಹಿಸಿದ ಪ್ರತಿ ಹಂತದಲ್ಲೂ ಅಲ್ಲಿನ ಜನರ ಕಷ್ಟ ಸುಖ, ಸಮಸ್ಯೆಗಳ ಅರಿತು ಪರಿಹರಿಸುವಲ್ಲಿಯೂ ಶ್ರಮಿಸಿದ್ದಾರೆ. ಅದರಲ್ಲೂ ರತ್ನಪ್ರಭಾ ಅವರು ನಿವೃತ್ತಿಯ ಬಳಿಕ ಜನರ ಸೇವೆ ಮಾಡಲು ರಾಜಕೀಯವೇ ಉತ್ತಮ ಮಾರ್ಗ ಎಂದುಕೊAಡಿದ್ದು, ಅಧಿಕಾರಿಯಾಗಿದ್ದಾಗ ನಿರ್ವಹಿಸಿದ ಅನುಭವದ ಹೆಜ್ಜೆಗಳನ್ನು ರಾಜಕೀಯದಲ್ಲೂ ಇರಿಸಿ ನೂತನ ರಾಜಕೀಯಕ್ಕೆ ಮುನ್ನುಡಿ ಬರೆಯುವ ಪ್ರತಿಭೆ ಇರುವಂತಹ ಅನುಭವಿ ಅಧಿಕಾರಿ.

ಎಲ್ಲಾ ಅಭ್ಯರ್ಥಿಗಳನ್ನು ಅಳೆದು ತೂಗಿ ಆಯ್ಕೆ ಮಾಡುತ್ತಿರುವ ಬಿಜೆಪಿಗೆ ರತ್ನಪ್ರಭಾ ಅವರ ಆಯ್ಕೆ ರಾಜಕೀಯಕ್ಕೆ ಎಲ್ಲಾ ರೀತಿಯಲ್ಲೂ ಅನುಕೂಲವೇ ಆಗುವಂತಿದೆ. ಅದರಲ್ಲೂ ಜನರ ಸೇವೆ ಮಾಡಿರುವ ಅವರ ಅನುಭವವನ್ನು ರಾಜಕೀಯಕ್ಕೂ ಬಳಸಿಕೊಳ್ಳುವುದು ಬಿಜೆಪಿಯ ಉದ್ದೇಶ. ಈ ಎಲ್ಲಾ ಅಂಶಗಳನ್ನು ಅರಿತಿರುವ ಬಿಜೆಪಿಯು ರತ್ನಪ್ರಭಾ ಅವರಿಗೆ

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಲ್ಯಾಣ ಕರ್ನಾಟಕದ ಯಾವ ಕ್ಷೇತ್ರಕ್ಕೆ ಸೀಟ್ ನೀಡಲಿದೆ ಎಂಬ ಕುತೂಹಲ ಜನರಲ್ಲಿ ಹೆಚ್ಚಿದೆ.

ಮಹಿಳಾ ಟೆಕ್ ಪಾರ್ಕ್

ಆಂಧ್ರಪ್ರದೇಶಕ್ಕೆ ಐಟಿ ನೀತಿಯನ್ನು ರಚಿಸಿದರು. ಹೆರಿಗೆ ಪ್ರಯೋಜನಗಳು ಸೇರಿದಂತೆ ಮಹಿಳೆಯರಿಗೆ ಇಲ್ಲದ ವಿಭಾಗಗಳನ್ನು ಸಂಯೋಜಿಸಿದರು. ಕೈಗಾರಿಕೋದ್ಯಮಿಗಳಿಗೆ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿಯನ್ನು ಸೇರಿಸಿದರು. ಕಾಲೇಜುಗಳಲ್ಲಿ ಜವಾಹರ್ ಜ್ಞಾನ ಕೇಂದ್ರಗಳನ್ನು ಪ್ರಾರಂಭಿಸಿದ್ದಾರೆ. ವಿದ್ಯಾರ್ಥಿಗಳಿಗೆ ಕಂಪನಿಯಿAದ ತರಬೇತಿ ನೀಡಲಾಯಿತು, ಅದು ನಂತರ ಅವರನ್ನು ಅವರ ಆಯ್ಕೆ ಪಟ್ಟಿಗೆ ತೆಗೆದುಕೊಳ್ಳುತ್ತದೆ.  ಬಹಳಷ್ಟು ಹುಡುಗಿಯರು ಮತ್ತು ಹುಡುಗರು ಈ ಉತ್ತಮ ಯೋಜನೆಯಿಂದ ಲಾಭ ಪಡೆದರು.

Related