ಗದಗ: ಕಾಂಗ್ರೆಸ್ನವರಿಗೆ ಅಧಿಕಾರ ಸಿಕ್ಕಿರುವುದು ಭಸ್ಮಾಸುರನಿಗೆ ಶಕ್ತಿ ಬಂದಂತಾಗಿದೆ ಎಂದು ಮಾಜಿ ಸಚಿವ ಸಿ.ಸಿ.ಪಾಟೀಲ್ ವಾಗ್ದಾಳಿ ಮಾಡಿದ್ದಾರೆ. ನಗದರಲ್ಲಿ ಮಾಧ್ಯದವರೊಂದಿಗೆ ಮಾತನಾಡಿದ ಅವರು, ಸರ್ಕಾರದ ಲೋಪ ದೋಷ ಆದಾಗ ಎತ್ತಿ ಹಿಡಿಯಬೇಕಾಗಿದ್ದು ನಮ್ಮ ಧರ್ಮ. ಕರ್ತವ್ಯ. ಎಲ್ಲರೂ ಅಧಿಕಾರ ಮದದೊಳಗೆ ಇದ್ದಾರೆ. 136 ಸೀಟು ಬಂದಿರುವುದರಿಂದ ಭಸ್ಮಾಸುರನಿಗೆ ಶಕ್ತಿ ಬಂದಂತಾಗಿದೆ ಎಂದು ಕಿಡಿಕಾರಿದ್ದಾರೆ.
ಅಭಿವೃದ್ಧಿ ಕಾರ್ಯಕ್ರಮ ಒಂದೂ ಇಲ್ಲ. ನಾವು ಜಾರಿಗೆ ತಂದಿದ್ದ ಅಭಿವೃದ್ದಿ ಕಾರ್ಯಕ್ರಮ ನಿಲ್ಲಿಸಿದ್ದಾರೆ. ಕೆಲಸ ಮಾಡಿದ ಗುತ್ತಿಗೆದಾರರ ಬಿಲ್ ಕೊಡಿಸುತ್ತಿಲ್ಲ. ಇದಕ್ಕಿಂತ ಕೆಳಮಟ್ಟದ ರಾಜಕಾರಣ ಬೇಕಾ ಎಂದು ಪ್ರಶ್ನಿಸಿದ್ದಾರೆ.
ಬಿಜೆಪಿ ಬರ ಅಧ್ಯಯನ ಮೂಲಕ ಡ್ರಾಮಾ ಕಂಪನಿ ಶುರು ಮಾಡಿದೆ ಎಂಬ ಕಾಂಗ್ರೆಸ್ ಆರೋಪ ವಿಚಾರವಾಗಿ ಮಾತನಾಡಿದ ಅವರು, ಹೌದು. ನಾಟಕ ಅನ್ನೋದನ್ನ ನಾವು ಒಪ್ಪಿಕೊಳ್ಳುತ್ತೇವೆ. ಆದರೆ ನಾಟಕ ಮಾಡುವುದಕ್ಕೆ ಹಚ್ಚಿದವರಾರು ಎಂದರು. ಅವರು ಸರಿಯಾಗಿ ಅನುದಾನ ಕೊಟ್ಟಿದ್ದರೆ ನಾವು ಯಾಕೆ ನಾಟಕ ಶುರು ಮಾಡುತ್ತಿದ್ದೆವು. ನಾವು ವಿರೋಧ ಪಕ್ಷದಲ್ಲಿದ್ದೇವೆ ಎಂದು ಹೇಳಿದ್ದಾರೆ.