ಸಾಧನೆಗೆ ಬಡತನ ಅಡ್ಡಿಯಲ್ಲ; ಶ್ರಮವಹಿಸಿ

ಸಾಧನೆಗೆ ಬಡತನ ಅಡ್ಡಿಯಲ್ಲ; ಶ್ರಮವಹಿಸಿ

ಚಡಚಣ : ನಾ ಹುಟ್ಟಿದ ಹಂಜಗಿ ಗ್ರಾಮ. ಆದರೆ ನನಗೆ ರಾಜಕೀಯವಾಗಿ ಬೆಳೆಯಲು ಕರ್ಮ ಭೂಮಿ ಅಂಜುಟಗಿ ಗ್ರಾಮವಾಗಿದೆ. ಅಂತಹ ಗ್ರಾಮದ ಯುವಕ ಸಾಧನೆ ಮಾಡಿರುವುದನ್ನು ಕಂಡರೆ ಸಂತೋಷವಾಗುತ್ತದೆ ಎಂದು ಜೆ ಡಿ ಎಸ್ ಇಂಡಿ ತಾಲ್ಲೂಕ ಅಧ್ಯಕ್ಷ ಬಿ ಡಿ ಪಾಟೀಲ ಹರ್ಷ ವ್ಯಕ್ತಪಡಿಸಿದರು.

ನೂತನ ಪಿಎಸ್‌ಐ ಆಗಿ ಆಯ್ಕೆಯಾದ ಚಡಚಣ ಸಮೀಪದ ಅಂಜುಟಗಿ ಗ್ರಾಮದ ಪರಶುರಾಮ ಮಿರಜಿಗಿ ರವರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಸಿಗೆ ನೀರು ಹಾಕಿ ಚಾಲನೆ ನೀಡಿ ಮಾತನಾಡಿದರು. ಬಡತನದಲ್ಲಿ ಹುಟ್ಟಿ ಶ್ರಮಪಟ್ಟ ವಿದ್ಯಾಭ್ಯಾಸ ಮಾಡಿ ಗ್ರಾಮೀಣ ಪ್ರದೇಶಗಳಲ್ಲಿ ಕಡು ಬಡತನದಲ್ಲಿ ವಿದ್ಯೆಯನ್ನು ಕಲಿತ ಅಂಜುಟಗಿ ಗ್ರಾಮದ ಹೆಮ್ಮೆಯ ಪುತ್ರ ಪರಶುರಾಮ ಮಿರಜಿಗಿ ಅವರು ಪಿಎಸ್‌ಐ ಆಗಿ ನೇಮಕಗೊಂಡು ಗ್ರಾಮಕ್ಕೆ ಹೆಸರು ತಂದಿದ್ದಾರೆ ಎಂದು ಸಂತಸಗೊಂಡರು.

ಪಿಎಸ್‌ಐ ಪರಶುರಾಮ ಮಿರಜಗಿ ಮಾತನಾಡಿ, ಪ್ರತಿಯೊಬ್ಬ ತಂದೆ ತಾಯಿಗಳು ತಮ್ಮ ಮಕ್ಕಳಿಗೆ ಉತ್ತಮವಾಗಿ ಶಿಕ್ಷಣ ನೀಡಿ ಮಕ್ಕಳನ್ನು ದೇಶದ ಆಸ್ತಿಯನ್ನಾಗಿ ಮಾಡಿ ಎಂದು ಹೇಳಿದ ಇವರು ಪ್ರತಿಯೊಬ್ಬರು ಒಂದು ಗುರಿ ಇಟ್ಟುಕೊಂಡಿರಬೇಕು, ಕಠಿಣ ಪರಿಶ್ರಮ ವಹಿಸಿದರೆ ಮಾತ್ರ ನಮ್ಮ ಗುರಿ ತಲುಪಲು ಸಾಧ್ಯ ಎಂದು ಹೇಳಿದರು. ಜೊತೆಗೆ ಗ್ರಾಮದಲ್ಲಿ ಬಡ ಮಕ್ಕಳಿಗೆ ಅನುಕೂಲವಾಗುವ ಸಲುವಾಗಿ ವಿದ್ಯಾರ್ಥಿಗಳಿಗೆ ಒಂದು ಗ್ರಂಥಾಲಯ ನಿರ್ಮಿಸಿಕೊಡುವುದಾಗಿ ಭರವಸೆ ನೀಡಿದರು.

Related