ರಸ್ತೆಯಲ್ಲೇ ಹೊತ್ತಿ ಉರಿದ ‘ಪೊಲೀಸರ ಹೊಯ್ಸಳ ವಾಹನ’

  • In Crime
  • July 25, 2022
  • 286 Views

ಬೆಂಗಳೂರು ಜು25: ನಗರದಲ್ಲಿ ನಡುರಸ್ತೆಯಲ್ಲೇ ಬಿಎಂಟಿಸಿ ಬಳಿಕ, ಇದೀಗ ಪೊಲೀಸರ ಹೊಯ್ಸಳ ವಾಹನ ಕೂಡ ಬೆಂಕಿ ಹೊತ್ತಿಕೊಂಡು ಧಗಧಗಿಸಿ ಉರಿದಿರುವ ಘಟನೆ ನಡೆದಿದೆ.

ಬೆಂಗಳೂರಿನ ಸಿಟಿ ಮಾರುಕಟ್ಟೆಯ ಬಳಿಯಲ್ಲಿನ ವೃತ್ತದಲ್ಲಿ ಇಂದು ಸಿಟಿ ಮಾರುಕಟ್ಟೆ ಪೊಲೀಸ್ ಠಾಣೆಯ ಹೊಯ್ಸಳ-79 ವಾಹನದಲ್ಲಿ ಹೊಗೆ ಕಾಣಿಸಿಕೊಂಡಿದೆ. ಈ ವೇಳೆ ಕೂಡಲೇ ಅದರಲ್ಲಿದ್ದಂತ ಪೊಲೀಸರು ಕೆಳಗೆ ಇಳಿಯುತ್ತಿದ್ದಂತೇ ವಾಹನ ಹೊತ್ತಿ ಉರಿದಿದೆ.

ಈ ಘಟನೆಯನ್ನು ಕಂಡಂತ ಸ್ಥಳೀಯರು, ಕೂಡಲೇ ಹೊಯ್ಸಳ ವಾಹನಕ್ಕೆ ಹೊತ್ತಿಕೊಂಡಿದ್ದಂತ ಬೆಂಕಿಯನ್ನು ನಂದಿಸೋ ಕಾರ್ಯದಲ್ಲಿ ತೊಡಗಿದ್ದಾರೆ. ಬೆಂಕಿ ಹೊತ್ತಿಕೊಂಡ ಪರಿಣಾಮ, ಹೊಯ್ಸಳ-79 ವಾಹನ ಸುಟ್ಟು ಕರಕಲಾಗಿದೆ.

ಸದ್ಯಕ್ಕೆ ದೊರತೆ ಮಾಹಿತಿ ಪ್ರಕಾರ ಪೊಲೀಸ್ ಸಿಬ್ಬಂದಿಯೋರ್ವರು ಮಾತ್ರವೇ ಬೆಂಕಿಗೆ ಆಹುತಿಯಾದಂತ ಹೊಯ್ಸಳ ವಾಹನದಲ್ಲಿ ತೆರಳುತ್ತಿದ್ದರು ಎಂದು ತಿಳಿದು ಬಂದಿದೆ. ಈ ಬಗ್ಗೆ ಇನ್ನೂ ಹೆಚ್ಚಿ ಮಾಹಿತಿ ತಿಳಿದು ಬರಬೇಕಿದೆ.

Related