ಕುಡುಕನ ರಂಪಾಟಕ್ಕೆ ಪೊಲೀಸರು ಸುಸ್ತು

ಕುಡುಕನ ರಂಪಾಟಕ್ಕೆ ಪೊಲೀಸರು ಸುಸ್ತು

ಗದಗ : ಜಿಲ್ಲೆಯಲ್ಲಿ ಮರಾಠ ಅಭಿವೃದ್ಧಿ ನಿಗಮ ಸ್ಥಾಪನೆ ವಿರೋಧಿಸಿ ಸರ್ಕಾರದ ವಿರುದ್ಧ ಕನ್ನಡ ಪರ ಸಂಘಟನೆಗಳು ಇಂದು ಬೀದಿಗಿಳಿದಿವೆ. ಈ ಮಧ್ಯೆ ಕುಡುಕನೋರ್ವ ರಂಪಾಟ ಮಾಡಿದ್ದು, ಪೊಲೀಸರೇ ಸುಸ್ತಾದ ಘಟನೆ ಗದಗ್ ನಲ್ಲಿ ನಡೆದಿದೆ.

ಸರ್ಕಾರದ ವಿರುದ್ಧ ಗದಗ ನಗರದ ಚೆನ್ನಮ್ಮ ಸರ್ಕಲ್ ಬಳಿ ಪ್ರತಿಭಟನೆ ನಡೆಯುತ್ತಿತ್ತು.. ಪ್ರತಿಭಟನೆಯಲ್ಲಿ ಕುಡುಕನ ರಂಪಾಟ ಪೊಲೀಸರಿಗೆ ಪ್ರಾಣ ಸಂಕಟ ಎಂಬಂತಾಗಿದ್ದು , ಕೊನೆಗೆ ಆತನನ್ನು ಪೊಲೀಸರು ಎಳೆದು ಹಾಕಿದ ಪ್ರಸಂಗ ನಡೆಯಿತು.

ಪ್ರತಿಭಟನೆ ವೇಳೆ ಲಾರಿಗಳನ್ನ ಅಡ್ಡಗಟ್ಟಿ ಪೊಲೀಸರ ಜೊತೆ ವಾಗ್ವಾದ ನಡೆಯಿತು. ವಾಹನ ತಡೆಯಲು ಪೊಲೀಸರು ತಾಕೀತು ಮಾಡಿದರು. ಈ ಹಿನ್ನೆಲೆಯಲ್ಲಿ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ವಾಗ್ವಾದ ನಡೆಯಿತು. ಕರವೆ ಕಾರ್ಯಕರ್ತರು ವಾಹನ ಏರಿ ರಸ್ತೆ ತಡೆಗೆ ಮುಂದಾದರು.

Related