ಬೀದಿ ಸುತ್ತಿ ಜಾಗೃತಿ ಮೂಡಿಸುತ್ತಿರುವ  ಪೊಲೀಸ್

  • In State
  • March 29, 2020
  • 566 Views
ಬೀದಿ ಸುತ್ತಿ ಜಾಗೃತಿ ಮೂಡಿಸುತ್ತಿರುವ  ಪೊಲೀಸ್

ಗಂಗಾವತಿ, ಮಾ. 29: ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ನಾಗರೀಕ ಬಂಧುಗಳು ಲಾಕ್ ಡೌನ್ ಗೆ ಸಹಕರಿಸಬೇಕೆಂದು ನಾಗರೀಕರಲ್ಲಿ ಪೊಲೀಸ್ ಇಲಾಖೆಯಿಂದ ಗ್ಯಾನಪ್ಪ ಕುರಿ ಅವರು ಪ್ರತಿ ಬೀದಿ ಬೀದಿ ತಿರುಗಾಡಿ ಮನವಿ ಮಾಡುತ್ತಿದ್ದಾರೆ. ಆದರೂ ಕೆಲವೆಡೆ ಜನರು ಸುಮ್ಮನೆ ಬೀದಿಗೆ ಬರುತ್ತಿದ್ದಾರೆ. ಜನರು ಹೆಚ್ಚು ಜನಸಂದಣಿ ಯಾಗುವುದರಿಂದ ಕೋರೊನ ವೈರಸ್ ಹರಡುವ ಸಾಧ್ಯತೆ ಇರುತ್ತದೆ ಇದರಿಂದ ಜನರಪ್ರಾಣಕ್ಕೆ ಕಂಟಕವಾಗಬಹುದಾಗಿದೆ ಎಂದು ಗ್ಯಾನಪ್ಪ ಅವರು ಬೇಸರ ವ್ಯಕ್ತಪಡಿಸಿದರು ಹಾಗೂ ಕಿಡಿಗೇಡಿಗಳಿಗೆ ಲಾಠಿ ರುಚಿ  ಅನಿವಾರ್ಯವಾಗಿ ತೋರಿಸಬೇಕಾಗುತ್ತದೆ ಎಂದು ತಿಳಿಸಿದರು.

ನಾಗರೀಕರು ದಯವಿಟ್ಟು ಯಾರೂ ಅನಗತ್ಯ ಬೀದಿಗೆ ಬಂದು ಓಡಾಡಬಾರದು. 21 ದಿನ ಮನೆಯಲ್ಲೇ ಇರೋಮೂಲಕ ಕರೋನಾ ವೈರಸ್ ವಿರುದ್ಧ ಮನೆಯಿಂದಲೇ ಹೋರಾಟ ಮಾಡೋಣ. ದಯವಿಟ್ಟು ಯಾರೂ ಹೊರಗಡೆ ಬರಬೇಡಿ. ಸಾರ್ವಜನಿಕರ ಪ್ರಾಣ ಉಳಿಸಲಿಕ್ಕಾಗಿ ಪೊಲೀಸ ರು, ಆರೋಗ್ಯ ಇಲಾಖೆಯವರು,ಕಂದಾಇಲಾಖೆಯವರು, ಪುರಸಭೆಯವರು, ಗ್ರಾಮಪಂಚಾಯಿತಿ, ಪಟ್ಟಣಪಂಚಾಯಿತಿ, ನಗರಸಭೆ, ಮಹಾನಗರಪಾಲಿಕೆ,ಅಗ್ನಿಶಾಮಕ ದಳ, ಆಶಾ ಕಾರ್ಯಕರ್ತೆಯರು ತಮ್ಮ ಪ್ರಾಣವನ್ನು ಲೆಕ್ಕಿಸದೆ  ನಮ್ಮ ಪ್ರಾಣ ಉಳಿಸಲು ಹೋರಾಟ ಮಾಡುತ್ತಿದ್ದಾರೆ.

ಅವರ ಹೋರಾಟಕ್ಕೆ ನಾವು ಬೆಂಬಲ ಕೊಡಬೇಕೆಂದರೆ ವಿನಾಕಾರಣ ಹೊರಗಡೆ ಬರಬಾರದೆಂದು ಪೊಲೀಸ್ ಇಲಾಖೆಯ ಅವರು ಕಳಕಳಿ ಯಿಂದ ಮನವಿ ಮಾಡಿದರು ನೀವು ನಿಮಗೋಸ್ಕರ ಮನೇಲಿ ಇರೀ ನೀವು ನಿಮ್ಮ ಕುಟುಂಬ ಸುರಕ್ಷಿತವಾಗಿ ಆರೋಗ್ಯವಾಗಿ ಇರಬೇಕಾದರೆ  ಈ ಕರೋನ ಕ್ಕೆ ಮದ್ದು ಮನೇಲಿ ಇರುವದೇ ಮದ್ದು ಎಂದು ಜನಗಳಿಗೆ ಜಾಗೃತಿ ಮೂಡಿಸುವ ಮೂಲಕ ಪೊಲೀಸ್ ಇಲಾಖೆ ಗ್ಯಾನಪ್ಪ ಅವರು ಜನಕ್ಕೆ ತಿಳಿಹೇಳಿದರು.

Related