ಕಿರುಕುಳ; ಮುಖ್ಯ ಶಿಕ್ಷಕ ಬಂಧನ

ಕಿರುಕುಳ; ಮುಖ್ಯ ಶಿಕ್ಷಕ ಬಂಧನ

ಮೈಸೂರು : ಟ್ಯೂಷನ್‌ಗೆ ಬರುತ್ತಿದ್ದ 14 ವರ್ಷ ವಯಸ್ಸಿನ ವಿದ್ಯಾರ್ಥಿನಿಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇರೆಗೆ ಶಾಲೆಯೊಂದರ ಮುಖ್ಯ ಶಿಕ್ಷಕನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.

ವಿದ್ಯಾರ್ಥಿನಿಯು ಈಚೆಗೆ ತನ್ನ ಸಂಬಂಧಿಕರೊಬ್ಬರ ಬಳಿ ತಾನು 2 ವರ್ಷದ ಹಿಂದೆ ಅನುಭವಿಸಿದ ಲೈಂಗಿಕ ಕಿರುಕುಳದ ಘಟನೆಯನ್ನು ಆಕಸ್ಮಿಕವಾಗಿ ಹೇಳಿದ್ದಾಳೆ. ಇದೇ ರೀತಿಯ ಕಿರುಕುಳವನ್ನು ಅನೇಕ ವಿದ್ಯಾರ್ಥಿನಿಗೂ ಶಿಕ್ಷಕ ನೀಡಿದ್ದ ಎಂದು ತಿಳಿಸಿದ್ದಾಳೆ. ತಕ್ಷಣವೇ ಸಂಬಂಧಿಕರು ವಿಷಯವನ್ನು ಪೊಲೀಸರಿಗೆ ತಿಳಿಸಿದ್ದಾರೆ. ಫೋಕ್ಸೊ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ಶಿಕ್ಷಕನನ್ನು ಬಂಧಿಸಿದ್ದಾರೆ.

ಮದ್ಯವ್ಯಸನಿಯಾಗಿದ್ದ ಇವರು ಕುಟುಂಬದ ಸದಸ್ಯರೊಂದಿಗೆ ಜಗಳವಾಡುತ್ತಿದ್ದರು. ಖಿನ್ನತೆಗೆ ಜಾರಿ ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸ್ಥಳಕ್ಕೆ ಡಿಸಿಪಿ ಪ್ರಕಾಶ್‌ಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪ್ರಕರಣ ವಿಜಯನಗರ ಠಾಣೆಯಲ್ಲಿ ದಾಖಲಾಗಿದೆ.

Related