ಕೌನ್ಸಿಲಿಂಗ್ ಮೂಲಕ ‘ಸಾರಿಗೆ ಸಿಬ್ಬಂದಿಗಳನ್ನು ನಾಲ್ಕು ಸಾರಿಗೆ ಸಂಸ್ಥೆಗಳಿಗೆ ಶಾಶ್ವತವಾಗಿ ಹಂಚಿಕೆ

ಕೌನ್ಸಿಲಿಂಗ್ ಮೂಲಕ ‘ಸಾರಿಗೆ ಸಿಬ್ಬಂದಿಗಳನ್ನು ನಾಲ್ಕು ಸಾರಿಗೆ ಸಂಸ್ಥೆಗಳಿಗೆ ಶಾಶ್ವತವಾಗಿ ಹಂಚಿಕೆ

ಬೆಂಗಳೂರು: ಪ್ರಪ್ರಥಮ ಬಾರಿಗೆ ಕೌನ್ಸಿಲಿಂಗ್ ಮೂಲಕ ಶಾಶ್ವತವಾಗಿ ದರ್ಜೆ-3 ಮೇಲ್ವಿಚಾರಕ ದರ್ಜೆ- 2, ದರ್ಜೆ-1 ಕಿರಿಯ ಅಧಿಕಾರಿಗಳನ್ನು ನಾಲ್ಕು ಸಾರಿಗೆ ಸಂಸ್ಥೆಗಳಿಗೆ  ಶಾಶ್ವತ ಹಂಚಿಕೆ.

ಈ ಬಗ್ಗೆ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿದ್ದು, ಕೆ.ಎಸ್.ಆರ್.ಟಿ.ಸಿಯ ದರ್ಜೆ-3 ಮೇಲ್ವಿಚಾರಣೆ, ದರ್ಜೆ-2 ಅಧಿಕಾರಿ ಹಾಗೂ ದರ್ಜೆ-1 (ಕಿರಿಯ) ಅಧಿಕಾರಿಗಳನ್ನು ನಾಲ್ಕೂ ಸಾರಿಗೆ ನಿಗಮಗಳ ಒಟ್ಟು 2525 ರ ಪೈಕಿ 238 ಅಧಿಕಾರಿಗಳನ್ನು ಅವರ ಇಚ್ಚೆ ಮೇರೆಗೆ ಹಂಚಿಕೆ ಮಾಡಲಾಗಿದೆ.

ಉಳಿದ 145 ಅಧಿಕಾರಿ/ಸಿಬ್ಬಂದಿಗಳಿಗೆ ನೇರ ಕೌನ್ಸಲಿಂಗ್ ಮೂಲಕ ದಿನಾಂಕ 05-08-2023 ರಂದು ಯಾವುದೇ ಬಾಹ್ಯ ಒತ್ತಡಕ್ಕೆ ಅಸ್ಪದ ಇರದಂತೆ ಪಾರದರ್ಶಕವಾಗಿ ಹಂಚಿಕೆ ಮಾಡುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ ಎಂದು ತಿಳಿಸಿದೆ.

ಸಾರಿಗೆ ಹಾಗೂ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಅವರು ಸಾಂಕೇತಿಕವಾಗಿ ತಾಂತ್ರಿಕ ಇಲಾಖೆಯ ಮೇಲ್ವಿಚಾರಕ ಸಿಬ್ಬಂದಿ ಎಂ.ಜಿ, ದೋಗಣ್ಣಗೌಡ, ಪ್ರದೀಪ್ ಕುಮಾರ್, ಆರ್. ಎ. ಕುಪ್ಪೇಲೂರ್‌ ಹಾಗೂ ನಳಿನಾಕ್ಷಿ ಎನ್ ರವರಿಗೆ ಹಂಚಿಕೆ ಪತ್ರ ವಿತರಿಸಿದರು.

ಈ ಸಂದರ್ಭದಲ್ಲಿ ಸದರಿ ಪ್ರಕ್ರಿಯೆಯ ಅಧಿಕಾರಯುತ ನಮಿತಿ ಅಧ್ಯಕ್ಷರಾದ ವಿ. ಅನ್ಸುಕುಮಾರ್, ಭಾ.ಆ.ನೇ, ವ್ಯವಸ್ಥಪಕ ನಿರ್ದೇಶಕರು, ಕೆ ಎಸ್ ಆರ್ ಟಿ ಸಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

Related