ಸಿಲ್‌ಡೌನ್‌ಗೆ ಕ್ಯಾರೆ ಎನ್ನದ ಜನ

  • In State
  • July 10, 2020
  • 481 Views
ಸಿಲ್‌ಡೌನ್‌ಗೆ ಕ್ಯಾರೆ ಎನ್ನದ ಜನ

ಮುಂಡಗೋಡ: ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು. ದಿನದಿಂದ ದಿನಕ್ಕೆ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಾ ಸಾಗುತ್ತಿವೆ. ಮುಂಡಗೋಡ ಪಟ್ಟಣದ ಎರಡು ಪ್ರಕಣಗಳು ಪತ್ತೆಯಾದ ನಂತರ ಬಸವನಬೀದಿ ಯನ್ನು ಸಿಲ್‌ಡೌನ್ ಮಾಡಲಾಗಿದೆ ಆದರೆ ಈ ಬಡಾವಣೆಯ ಜನರು ಹೋರಗಡೆ ಸುತ್ತಾಡುತ್ತಿರುವ ಬಗ್ಗೆ ಸಾರ್ವಜನಿಕರು ದೂರುತ್ತಿದ್ದು ಆ ಬಡಾವಣೆಯ ಜನರು ಯಾರಾದರು ಹೋರಗಡೆ ಸುತ್ತಾಡುವುದು ಕಂಡು ಬಂದರೆ ಅಂತವರ ಮೇಲೆ ಪೊಲೀಸ್ ದೂರು ದಾಖಲಿಸಲಾಗುವುದು ಎಂದರು.

ಕೆಲವು ಹೋಟೇಲ್ ಹಾಗೂ ಕಿರಾಣಿ ಅಂಗಡಿಗಳಲ್ಲಿ ಸಾಮಾಜಿಕ ಅಂತರ ಕಾಪಾಡುತ್ತಿಲ್ಲ ಹಾಗೂ ಮಾಸ್ಕ್ ಹಾಕುತ್ತಿಲ್ಲ ಎಂಬ ಕುರಿತು ದೂರುಗಳು ಬರುತ್ತಿವೆ ಅಂತಹ ಅಂಗಡಿಯ ಮಾಲಿಕರ ಮೇಲೆ ದೂರು ದಾಖಲಿಸಲಾಗುವುದು ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್ ಹಾಕಿಕೊಂಡು ಸಾಮಾಜಿಕ ಅಂತರದೊಂದಿಗೆ ಸಂಚರಿಸಬೇಕು. ಬೆಂಗಳೂರನಿಂದ ಬಂದವರು ಕಡ್ಡಾಯವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಂಡು ೧೪ದಿನಗಳ ಕಾಲ ಹೋಂ ಕ್ವಾರಂಟೈನ್‌ಲ್ಲಿ ಇರಬೇಕು ಮನೆಯಿಂದ ಹೋರಗಡೆ ಸುತ್ತಾಡಿದರೆ ಅವರ ಮೇಲೆಯೋ ದೂರು ದಾಖಲಿಸಲಾಗುವುದು ಈ ಬಗ್ಗೆ ಎಲ್ಲರು ಜಾಗೃತಿ ವಹಿಸಬೇಕು ಹೋರ ರಾಜ್ಯ ಹಾಗೂ ಜಿಲ್ಲೆಯಿಂದ ಬಂದವರ ಬಗ್ಗೆ ಸಾರ್ವಜನಿಕರು ಮಾಹಿತಿ ನೀಡಬೇಕು ಎಂದರು.

Related