15 ಜಿಲ್ಲೆಗಳಲ್ಲಿ ಬೂಸ್ಟ್ ರ್ ಡೋಸ್ ನ ನಿರ್ಲಕ್ಷ

ಬೆಂಗಳೂರಿನಲ್ಲಿ ಕೊರೋನಾ ನಾಲ್ಕನೇ ಅಲೆಯ ಅಪಾಯದ ಬಗ್ಗೆ ಸರ್ಕಾರ ಸತತವಾಗಿ ಎಚ್ಚರಿಕೆ ನೀಡುತ್ತಿದ್ದರೂ, ರಾಜ್ಯದ 15 ಜಿಲ್ಲೆಗಳಲ್ಲಿ ವಯಸ್ಕ ಗುಂಪಿನಡಿ ಬರುವ ಒಬ್ಬರೇ ಒಬ್ಬರು ಕೂಡಾ ಬೂಸ್ಟ್ ರ್ ರ್ಡೋಸ್ ಪಡೆದಿಲ್ಲ. ಬಳ್ಳಾರಿ, ಬಾಗಲಕೋಟೆ ,ಹಾಸನ, ರಾಯಚೂರು, ಮಂಡ್ಯ, ಬೀದರ್, ಚಿತ್ರದುರ್ಗ, ಕೋಲಾರ ಹಾವೇರಿ, ಕೊಪ್ಪಳ, ಚಿಕ್ಕಬಳ್ಳಾಪುರ, ಗದಗ, ಯಾದಗಿರಿ, ರಾಮನಗರ, ಚಾಮರಾಜನಗರ  ಜಿಲ್ಲೆಯಲ್ಲಿ ಏ.26ರವರೆಗೆ ಒಬ್ಬರೇ ಇಬ್ಬರು ಬೂಸ್ಟರ್ ಡೋಸ್ ಪಡೆದಿಲ್ಲ.

ತುಮಕೂರು ಜಿಲ್ಲೆಯಲ್ಲಿ ಒಬ್ಬರು ಮಾತ್ರ ಲಸಿಕೆ ಪಡೆದಿದ್ದಾರೆ. ವಿಜಯಪುರ 10, ಕಲಬುರಗಿ 33, ಬೆಂಗಳೂರು ಗ್ರಾಮಾಂತರ 45, ಉತ್ತರ ಕನ್ನಡ 58, ಚಿಕ್ಕಬಳ್ಳಾಪುರ 77 ಮತ್ತು ದಾವಣಗೆರೆ ಜಿಲ್ಲೆಯಲ್ಲಿ 90 ಮಂದಿ ಮಾತ್ರ ಬೂಸ್ಟರ್ ಡೋಸ್ ಸ್ವೇಕರಿಸಿದ್ದಾರೆ. ಎರಡನೇ ಡೋಸ್ ಪಡೆದು ಒಂಬತ್ತು ತಿಂಗಳ ಬಳಿಕ ಮುನ್ನೆಚ್ಚರಿಕೆ ಡೀದ್ ಪಡೆಯಲು ಅರ್ಹರಾಗಿರುವುದರಿಂದ ಸದ್ಯ ರಾಜ್ಯದಲ್ಲಿ 25 ಲಕ್ಷಕ್ಕೂ ಹೆಚ್ಚು ಮಂದಿ ವಯಸ್ಕರು ಅರ್ಹತೆ ಹೊಂದಿದ್ದಾರೆ. ಆದರೆ ಕೇವಲ 46,296 ಮಂದಿ ಮಾತ್ರ ಲಸಿಕೆ ಪಡೆದಿದ್ದಾರೆ.18-59ರ ವಯೋಮಾನ ಅತ್ಯಂತ ಚಲನಶೀಲ ವಯೋಮಾನ. ಇಲ್ಲಿ ಪದವಿ ಶಕ್ಷಣ ಪಡೆಯುವ ವಿದ್ಯಾರ್ಥಿಗಳು ಮತ್ತು ಸಮಾಜದ ದುಡಿಯುವ ವರ್ಗ ಬರುತ್ತದೆ.

Related