ಕೊಪ್ಪಳ: ಉತ್ತರ ಕರ್ನಾಟಕ ಮಂದಿಗೆ ದೊಡ್ಡ ಜಾತ್ರೆ ಎಂದರೆ ಅದು ಗವಿಸಿದ್ದೇಶ್ವರ ಮಠದ ಜಾತ್ರೆ.
ಸಿದ್ದೇಶ್ವರ ಮಠದ ಜಾತ್ರೆಯಲ್ಲಿ ಸಾವಿರಾರು ಭಕ್ತರು ಸೇರಿಕೊಂಡು ಈ ಜಾತ್ರೆಯಲ್ಲಿ ಸಂಭ್ರಮ ಪಡುತ್ತಾರೆ. ಜಾತ್ರೆಯಲ್ಲಿ ತೇರು ಎಳೆಯುವ ಮೂಲಕ ಜಾತ್ರೆಯನ್ನು ಪ್ರಾರಂಭಿಸುತ್ತಾರೆ.
ಇನ್ನು ಜನವರಿ 23 ರಿಂದ ನಡೆಯುತ್ತಿರುವ ಕೊಪ್ಪಳದ ಗವಿಸಿದ್ದೇಶ್ವರ ಜಾತ್ರೆಗೆ ಈಗಾಗಲೇ ರಾಜ್ಯ ಮಾತ್ರವಲ್ಲದೆ ಬೇರೆ ಬೇರೆ ರಾಜ್ಯಗಳಿಂದ ಜನಸಾಗರ ತುಂಬಿ ಬಂದಿದ್ದು, ಇಂದು ಸಂಜೆ 5:30ಕ್ಕೆ ಜಾತ್ರೆಯ ಮಹಾ ರಥೋತ್ಸವ ನಡೆಯಲಿದೆ. ಈ ಜಾತ್ರೆ ಮಹಾ ರಥೋತ್ಸವಕ್ಕೆ ಸಾವಿರಾರು ಭಕ್ತಾದಿಗಳು ಆಗಮಿಸಿದ್ದಾರೆ.
ಇನ್ನು ಮಹಾರಾಥೋತ್ಸವದ ಸಂದರ್ಭದಲ್ಲಿ ಭಕ್ತಾದಿಗಳು ಬಾಳೆಹಣ್ಣು, ಉತ್ತತ್ತಿ ಎಸೆಯುವ ಮೂಲಕ ತಮ್ಮ ಬೇಡಿಕೆಗಳನ್ನು ದೇವರ ಹತ್ತಿರ ಕೇಳಿಕೊಳ್ಳುತ್ತಾರೆ.