ಹೆಣ್ಣು ಮಗುವಿಗೆ ತಂದೆಯಾದ ಪವನ್ ಒಡೆಯರ್

ಹೆಣ್ಣು ಮಗುವಿಗೆ ತಂದೆಯಾದ ಪವನ್ ಒಡೆಯರ್

ಬೆಂಗಳೂರು: ನಮ್ಮ ಸ್ಯಾಂಡಲ್ ವುಡ್ ನ ನಿರ್ದೇಶಕರಾದ ಪವನ್ ಒಡೆಯರ್ ಹಾಗೂ ಅಪೇಕ್ಷ ಪುರೋಹಿತ್ ದಂಪತಿಗಳು ಇಂದು ಬೆಳಗ್ಗೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ, ನಿರ್ದೇಶಕ ಪವನ್ ಒಡೆಯರ್ ಅವರು ಸೋಶಿಯಲ್ ಮೀಡಿಯಾದಲ್ಲಿ ಮನೆಗೆ ಲಕ್ಷ್ಮಿ ಬಂದಿದ್ದಾರೆ ಎಂದು ಖುಷಿ ವಿಚಾರ ಹಂಚಿಕೊಂಡಿದ್ದಾರೆ.

ಹೊಸ ಸದಸ್ಯೆಯ ಆಗಮನದಿಂದ ಕುಟುಂಬದಲ್ಲಿ ಖುಷಿ ಹೆಚ್ಚಿದೆ. ಅವರಿಗೆ ಎಲ್ಲರೂ ಶುಭಾಶಯ ತಿಳಿಸುತ್ತಿದ್ದಾರೆ. ಮಗು ಹಾಗೂ ತಾಯಿ ಇಬ್ಬರೂ ಆರೋಗ್ಯವಾಗಿದ್ದಾರೆ ಎಂಬ ವಿಚಾರ ತಿಳಿದು ಬಂದಿದೆ. ಗೂಗ್ಲಿ, ನಟಸಾರ್ವಭೌಮ ದಂತಹ ಸೂಪರ್ ಹಿಟ್ ಚಿತ್ರಗಳನ್ನು ನಿರ್ದೇಶಿಸಿ ಪವನ್ ಒಡೆಯರ್ ಫೇಮಸ್ ಆಗಿದ್ದಾರೆ. ನಟಿ, ನಿರ್ಮಾಪಕಿ ಆಗಿ ಅಪೇಕ್ಷಾ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ.

Related