ಬಸ್ ದರ ಹೆಚ್ಚಳಕ್ಕೆ ಪ್ರಯಾಣಿಕರ ಆಕ್ರೋಶ

  • In State
  • February 29, 2020
  • 391 Views
ಬಸ್ ದರ ಹೆಚ್ಚಳಕ್ಕೆ ಪ್ರಯಾಣಿಕರ ಆಕ್ರೋಶ

ಹುಬ್ಬಳ್ಳಿ, ಫೆ. 29: ಹುಬ್ಬಳ್ಳಿ- ಧಾರವಾಡ ನಡುವೇ ಸಂಚರಿಸುವ ತ್ವರಿತ ಬಸ್ ಸೇವೆ ಎರಡು ಪಟ್ಟು ಟೆಕೆಟ್ ದರವನ್ನು ಹೆಚ್ಚಿಸಿ ಪ್ರಯಾಣಿಕರ ಜೆಬಿಗೆ ಕತ್ತರಿ ಹಾಕುತ್ತಿದೆ.

ಸರ್ಕಾರ ಶೇ.12ರಷ್ಟು ದರವನ್ನು ಹೆಚ್ಚಿಸಲು ಆದೇಶ ನೀಡಿದೆ. ಆದರೆ ಬಿಆರ್‌ಟಿಎಸ್ ಸಂಸ್ಥೆಯವರು ಅದನ್ನು ಮೀರಿ ಶೇ. 27ರಷ್ಟು ಬಸ್ ದರವನ್ನು ಹೆಚ್ಚಿದ್ದಾರೆ. ಅಂದ್ರೆ ಸುಮಾರು 7 ರಿಂದ 8 ರೂಪಾಯಿ ಹೆಚ್ಚಿಸಿದಂತಾಗಿದೆ. ಇದರಿಂದ ಪ್ರಯಾಣಿಕರಿಗೆ ಹೊರೆ ಆಗಲಿದ್ದು, ಕೆ ಎಸ್ ಆರ್ ಟಿಸಿಗೆ ಒಂದು ನ್ಯಾಯವಾದರೆ, ಬಿಆರ್ ಟಿಎಸ್ ಗೆ  ಮತ್ತೊಂದು ನ್ಯಾಯಾನಾ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.

ಇದಲ್ಲದೇ ಹುಬ್ಬಳ್ಳಿಯ ಹಳೇ ಬಸ್ ನಿಲ್ದಾಣದಲ್ಲಿ “ದರ ಹೆಚ್ಚಾಗಿದೆ ಸಹಕರಿಸಿ” ಅಂತ ಪೋಸ್ಟರ್ ಹಚ್ಚಲಾಗಿದ್ದು,  ಮುಂಜಾನೆ 10.00 ಗಂಟೆ ಆದರೂ ಕೇವಲ 2 ಕೌಂಟರ್‌ಗಳಲ್ಲಿ ಟಿಕೆಟ್ ವಿತರಿಸಲಾಗುತ್ತಿದೆ. ಇದರಿಂದ ಸರತಿ ಸಾಲಿನಲ್ಲಿ ನಿಂತು ಸಾಕಷ್ಟು ಸಮಯವನ್ನು ಟಿಕೆಟ್ ಪಡೆಯುವದರಲ್ಲೇ ಸಾರ್ವಜನಿಕರಿಗೆ ಕಿರಿಕಿರಿ ಆಗುತ್ತಿದೆ. ಇದು ದಿನಂಪ್ರತಿ ಸಾರ್ವಜನಿಕರು ಅನುಭವಿಸುತ್ತಿರುವ ಪಾಡಾಗಿದೆ ಎಂದು ಸಾರ್ವಜನಿಕರು ಆರೋಪಿಸಿದರು.

Related