ಶಾಲೆ ಆರಂಭಕ್ಕೆ ಪೋಷಕರ ಸಂಘ ವಿರೋಧ

ಶಾಲೆ ಆರಂಭಕ್ಕೆ ಪೋಷಕರ ಸಂಘ ವಿರೋಧ

ಬೆಂಗಳೂರು :  ಜುಲೈ 1 ರಿಂದ ಶಾಲೆಗಳನ್ನು ಪುನಾರಂಭಿಸಲು ಸರ್ಕಾರ ಚಿಂತನೆ ನಡೆಸುತ್ತಿದೆ. ಆದರೆ ನರದ ಪೋಷಕರ ಸಂಘ ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ವಿರೋಧ ವ್ಯಕ್ತ ಪಡಿಸಿದೆ.

ಬೆಂಗಳೂರಿನಲ್ಲಿ ಕೊರೋನಾ ಕೇಸ್ ಶೂನ್ಯವಾಗುವವರೆಗೂ ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸದಿರಲು ನಿರ್ಧರಿಸಿದೆ. ಸರ್ಕಾರದ ನಿರ್ಧಾರ ಸರಿಯಿಲ್ಲ, ಜುಲೈ ನಲ್ಲಿ ಶಾಲೆ ಆರಂಭಿಸುವದು ಕೆಟ್ಟ ಯೋಚನೆಯಾಗಿದೆ, ಇದು ಬೆಂಕಿಯ ಜೊತೆ ಸರಸವಾಡಿದಂತೆ, ನಾವು ಒಂದೇ ಒಂದು ಮಕ್ಕಳನ್ನು ಶಾಲೆಗೆ ಕಳುಹಿಸುವುದಿಲ್ಲ ಎಂದು ಹೇಳಿದ್ದಾರೆ. ಈ  ಸಂಬAಧ ಸಹಿ ಸಂಗ್ರಹ ಅಭಿಯಾನ ಆರಂಭಿಸಿದ್ದಾರೆ.

ಬದಲಾಗಿ ಬೇರೆ ರೀತಿ ತರಗತಿಗಳನ್ನು ನಡೆಸುವಂತೆ ಸಲಹೆ ನೀಡಿದ್ದಾರೆ. ಆನ್ ಲೈನ್ ತರಗತಿಗಳ ಮೂಲಕ ಪೂರ್ಣ ಪ್ರಮಾಣದಲ್ಲಿ ತರಗತಿಗಳನ್ನು ಏಕೆ ನಡೆಸಬಾರದು ಎಂದು ಪ್ರಶ್ನಿಸಿದ್ದಾರೆ. ಈ ಅಭಿಯಾನಕ್ಕೆ ಸುಮಾರು 1,06,500 ಪೋಷಕರು ಸಹಿ  ಮಾಡಿದ್ದಾರೆ, ಹಲವು ಪ್ರಾಥಮಿಕ ಶಾಲೆಗಳು ಆನ್ ಲೈನ್ ತರಗತಿಗಳಿಗೆ ಒತ್ತು ನೀಡಿವೆ, ಆದರೆ ನಿಮ್ಹಾನ್ಸ್ ಇದನ್ನು ವಿರೋಧಿಸಿದೆ.

ಸಮಸ್ಯೆನ್ನು ಹತೋಟಿಗೆ ತರಲು ಹಾಗೂ ಹೊಸ ದೃಷ್ಟಿಕೋನಗಳನ್ನು ಆರಂಭಿಸಲು ಇದೊಂದು ಅಭೂಪ ಪೂರ್ವ ಸಮಯವಾಗಿದೆ. ನಮ್ಮ ಚಿಕ್ಕ ಮಕ್ಕಳಿಗೆ ಕಲಿಕೆಯ ಹಾದಿಗೆ ತಡೆ ಆಗುವುದಿಲ್ಲ ಎಂದು ಖಚಿತಪಡಿಸುತ್ತದೆ. ಇಂದಿನ ದಿನಗಳಲ್ಲಿ ಸಣ್ಣ ಮಕ್ಕಳನ್ನು ಹೊರಗೆ ಕಳುಹಿಸುವುದು ಸುರಕ್ಷಿತವಲ್ಲ, ತರಗತಿಗಳಿಗೆ ಮಕ್ಕಳನ್ನು ಕಳಿಸುವ ಬದಲು ಡಿಜಿಟಲ್ ವಾತಾವರಣದಲ್ಲಿ ಕಲಿಕೆಗೆ ಅವಕಾಶ ನೀಡುವುದು ಉತ್ತಮ ಎಂದು  ಪೋಷಕರು ಅಭಿಪ್ರಾಯ ಪಟ್ಟಿದ್ದಾರೆ, ಮಕ್ಕಳಿಗೆ ಮನೆಯಲ್ಲೇ ಪಾಠ ಹೇಳಿಕೊಡುವುದು ಉತ್ತಮ ಎಂದು ಯುರೋ ಕಿಡ್ಸ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಪ್ರಜೋದ್ ರಂಜನ್ ಹೇಳಿದ್ದಾರೆ.

 

Related