ಪಂಚ ಗ್ಯಾರಂಟಿ: ಮಹಿಳೆಯರ ಸಬಲೀಕರಣಕ್ಕೆ ನೆರವಾಗಲಿದೆ

ಪಂಚ ಗ್ಯಾರಂಟಿ: ಮಹಿಳೆಯರ ಸಬಲೀಕರಣಕ್ಕೆ ನೆರವಾಗಲಿದೆ

ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದ 5 ಗ್ಯಾರಂಟಿಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯ ಸರ್ಕಾರ ಇದೇ ಆಗಸ್ಟ್ 30ರಂದು ಜಾರಿಗಳಗೊಳಿಸಲು ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡಿದೆ.

ಹೌದು, ರಾಜ್ಯದ ಒಟ್ಟು ಮತದಾರಲ್ಲಿ ಶೇ.50ರಷ್ಟು ಮಹಿಳಾ ಮಣಿಯರಿದ್ದು, ಚುನಾವಣಾ ಪ್ರಚಾರದ ವೇಳೆ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅವರು ಘೋಷಿಸಿದ ಗೃಹ ಲಕ್ಷ್ಮೀ ಯೋಜನೆ ಮಹಿಳಾ ಮಣಿಯರ ಮನ ಗೆದ್ದಿದೆ.

ಯೋಜನೆಯಡಿ, ರಾಜ್ಯ ಸರ್ಕಾರವು ಪ್ರತಿ ಮನೆಯ ಮಹಿಳೆಯೊಬ್ಬರಿಗೆ ತಿಂಗಳಿಗೆ 2,000 ರೂಪಾಯಿಗಳ ಆರ್ಥಿಕ ನೆರವನ್ನು ನೀಡುತ್ತದೆ. ಆಗತ್ಯ ವಸ್ತುಗಳ ಬೆಲೆ ಗಗನಕ್ಕೇರುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಈ ಯೋಜನೆಯು ಮಹಿಳೆಯರ ಮನಗೆಲ್ಲಲು ಸಹಾಯ ಮಾಡಿತ್ತು.  ಆದರೆ, ಯೋಜನೆ ಒಮ್ಮೆ ನೀಡಿ ಸುಮ್ಮನಾಗುವಂತಹ ಯೋಜನೆಯಲ್ಲ. ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿರುವವರೆಗೂ ಅಂದರೆ, ಮುಂದಿನ 5 ವರ್ಷಗಳ ವರೆಗೂ ಮಹಿಳೆಯರಿಗೆ ನೆರವು ನೀಡಬೇಕಿರುವುದರಿಂದ ಸರ್ಕಾರಕ್ಕೆ ಈ ಯೋಜನೆ ದೊಡ್ಡ ಸವಾಲಾಗಿ ಪರಿಣಮಿಸುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.

 

Related