ಬೆಳಗಾವಿ, ಬೆಂಗಳೂರಿನ ಮೇಲೆ ಬಿದ್ದಿದೆ ಓವೈಸಿ ಕಣ್ಣು

ಬೆಳಗಾವಿ, ಬೆಂಗಳೂರಿನ ಮೇಲೆ ಬಿದ್ದಿದೆ ಓವೈಸಿ ಕಣ್ಣು

ಬೆಂಗಳೂರು  : ಬಿಬಿಎಂಪಿ ಚುನಾವಣೆಗೆ ಇನ್ನು ಮುಹೂರ್ತ ನಿಗಧಿಯಾಗದಿದ್ದರೂ ಅಸಾದುದ್ದಿನ್ ಓವೈಸಿ ನೇತೃತ್ವದ  ಎಐಎಂಐಎಂ  ಪಕ್ಷ  ಈಗಾಗಲೇ  ಪಕ್ಷದ ಅಭ್ಯರ್ಥಿಗಳ ಹುಡುಕಾಟ ಆರಂಭಿಸಿದೆ. ಗ್ರೇಟರ್ ಹೈದ್ರಾಬಾದ್ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಅದ್ಭುತ ಸಾಧನೆ ಮಾಡಿ ಬೀಗುತ್ತಿರುವ ಓವೈಸಿ ತನ್ನ ಮುಂದಿನ ಗುರಿ ಕರ್ನಾಟಕದ ಮೇಲೆ ಇಟ್ಟಿದ್ದಾರೆ.

ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಸ್ಪರ್ಧಿಸಲು ತೀರ್ಮಾನಿಸಿರುವ ಓವೈಸಿ ಇದರ ಜತೆಗೆ ಬಿಬಿಎಂಪಿ ಚುನಾವಣೆಯಲ್ಲಿ ಸ್ಪರ್ಧಿಸಲು ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ. ಬಿಬಿಎಂಪಿ ಚುನಾವಣೆ ವಿಚಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರೂ ಭವಿಷ್ಯದಲ್ಲಿ ನಡೆಯಲಿರುವ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಸಮರ್ಥ ಅಭ್ಯರ್ಥಿಗಳಿಗಾಗಿ ಓವೈಸಿ ಹುಡುಕಾಟ ಆರಂಭಿಸಿದ್ದಾರೆ.

ಮುಸ್ಲೀಂ  ಸಮುದಾಯದ ಕೆಲ ಬಿಬಿಎಂಪಿ ಮಾಜಿ ಸದಸ್ಯರನ್ನು ಸಂಪರ್ಕಿಸಿರುವ ಓವೈಸಿ ಮುಂದಿನ ಚುನಾವಣೆಯಲ್ಲಿ ತಮ್ಮ ಪಕ್ಷದಿಂದಲೇ ಸ್ಪರ್ಧಿಸುವಂತೆ ಮನವೊಲಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ. 198 ಇಲ್ಲವೇ 243  ವಾರ್ಡ್ ಗಳಲ್ಲಿ    ಚುನಾವಣೆ ನಡೆದರೂ  ಎಲ್ಲ  ಕ್ಷೇತ್ರದಲ್ಲಿ  ಸ್ಪರ್ಧಿಸದೆ ಕೇವಲ ತಮ್ಮ ಪಕ್ಷದ ಅಭ್ಯರ್ಥಿಗಳಿಗೆ ಸೂಕ್ತವಾದ ವಾರ್ಡ್ ಗಳಲ್ಲಿ   ಳಲ್ಲಿ ಸ್ಪರ್ಧಿಸಲು ಅವಕಾಶ ನೀಡಿ ಬೆಂಗಳೂರಿನಲ್ಲಿ ನೆಲೆ ಕಂಡುಕೊಳ್ಳುವುದು ಓವೈಸಿ ಆಗಿದೆ.

ತಮ್ಮ ಸಂಪರ್ಕದಲ್ಲಿರುವ ಸ್ಥಳೀಯ ನಾಯಕರೊಂದಿಗೆ ಹಲವಾರು ಸುತ್ತಿನ ಮಾತುಕತೆ ನಡೆಸಿರುವ ಓವೈಸಿ ಮುಂಬರುವ ಬಿಬಿಎಂಪಿ ಚುನಾವಣೆಯಲ್ಲಿ ಸ್ಪರ್ಧಿಸಲು ಸೂಕ್ತ ವಾರ್ಡ್ ಗಳಲ್ಲಿ  ಹುಡುಕಾಟ  ನಡೆಸುವುದರ  ಜತೆಗೆ  ಸಮರ್ಥ  ಅಭ್ಯರ್ಥಿಗಳ  ಶೋಧಕ್ಕೂ ಸೂಚನೆ ನೀಡಿದ್ದಾರೆ.

Related