ಆಯುಕ್ತ ದಿಲೀಪ್ ವರ್ಗಾವಣೆಗೆ ವಿರೋಧ

  • In State
  • February 22, 2020
  • 477 Views
ಆಯುಕ್ತ ದಿಲೀಪ್ ವರ್ಗಾವಣೆಗೆ ವಿರೋಧ

ಹುಬ್ಬಳ್ಳಿ-ಧಾರವಾಡ, ಫೆ. 22: ಪೊಲೀಸ್ ಆಯುಕ್ತರಾದ ಆರ್ ದಿಲೀಪ್ ಅವರನ್ನು ಬೇರೆಡೆ ವರ್ಗಾವಣೆ ಮಾಡದೆ ಅವಳಿ ನಗರದಲ್ಲಿಯೇ ಅವರ ಸೇವೆ ಮುಂದುವರಿಸುವಂತೆ ಆದೇಶಿಸಬೇಕೆಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ಬೆಳಗಾವಿ ವಿಭಾಗಿಯ ಅಧ್ಯಕ್ಷರಾದ ಪಾಪು ಧಾರೆ  ಮನವಿಮಾಡಿದ್ದಾರೆ.

ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತರಾಗಿ ಸೇವೆ ಸಲ್ಲಿಸುತ್ತಿರುವ ಆರ್, ದಿಲೀಪ್ ಕರ್ತವ್ಯಕ್ಕೆ ಹಾಜರಾದ ದಿನದಿಂದಲೇ ಹುಬ್ಬಳ್ಳಿ-ಧಾರವಾಡ ನಗರದಲ್ಲಿ ಅವ್ಯಾತವಾಗಿ ನಡೆಯುತ್ತಿದ್ದ ಕೊಲೆ-ಸುಲಿಗೆ ಗಳಿಗೆ, ಮಟ್ಕಾ, ಮ್ಯಾಚ ಬೆಟ್ಟಿಂಗ್ ಹಾಗೂ ಅಮಾಯಕರ ಮೇಲೆ ದೌರ್ಜನ್ಯ ಎಸಗಿ ಅವರ ಭೂಮಿ ಕಬಳಿಕೆ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದರ ಮೂಲಕ ಹಾಗೂ ಅಮಾಯಕರಿಗೆ ಹಣದ ವವ್ಯಹಾರದಲ್ಲಿ ಮೋಸ ವಂಚನೆ ಮಾಡಿದಂತಹ, ಸಮಾಜಘಾತುಕರನ್ನು ಗುರುತಿಸಿ ಗಡೀಪಾರು ಮಾಡುವ ಮೂಲಕ ಮತ್ತು ಜೈಲಿಗೆ ಹಾಕುವ ಮೂಲಕ ಮತ್ತು ಕರ್ಕಶ ಧ್ವನಿಯ ಡಿಜೆ, ಸೌಂಡ್ ಸಿಸ್ಟಮ್ ಬ್ಯಾನ್ ಮಾಡುವದರೊಂದಿಗೆ  ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ಕಾನೂನು ಸುವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿ ಧಾರವಾಡದಲ್ಲಿ ಅಪರಾಧ ಸಂಖ್ಯೆಗಳನ್ನು ಅತಿವಿರಳ ಎಂಬAತೆ ಕಾನೂನು ಪರಿಪಾಲನೆ ಮಾಡಿದ್ದರು.

ಅದೇ ರೀತಿ ಕ್ರಿಮಿನಲ್ ಹಿನ್ನಲೆಯುಳ್ಳ ಸಮಾಜಘಾತುಕ ರೊಂದಿಗೆ ಶಾಮಿಲಾಗಿ ಅಮಾಯಕರಿಗೆ ತೊಂದರೆ ನೀಡುತ್ತಿದ್ದ ಮತ್ತು ಕರ್ತ್ಯವ್ಯ ಲೋಪ ಎಸುಗಿದ ಪೊಲೀಸ್ ಸಿಬ್ಬಂದಿ ಹಾಗೂ ಅಧಿಕಾರಿಗಳನ್ನು ಮುಲಾಜಿಲ್ಲದೆ ಕೆಲಸದಿಂದ ಅಮಾನತು ಮಾಡಿದ ಹೆಗ್ಗಳಿಕೆ ಇವರದಾಗಿದೆ.

ಕೆಎಲ್ಇ ಇಂಜಿನಿಯರಿಂಗ್ ಕಾಲೇಜಿನ ಮೂವರು ಕಾಶ್ಮೀರ ವಿದ್ಯಾರ್ಥಿಗಳು ಪಾಕ್ ಪರ ಪೋಷಣೆ ಕೂಗಿದ ಪ್ರಕರಣದಲ್ಲಿ ಆ ಆರೋಪಿಗಳ ಪ್ರಕರಣ ಗಂಭೀರವಾಗಿ ಪರಿಗಣಿಸದೆ ಕರ್ತವ್ಯಲೋಪ ಮಾಡಿದ್ದಾರೆಂದು ಆರೋಪಿಸಿ ಈ ಕೂಡಲೇ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತರಾದ ಅಂತಹ ಆರ್ ದಿಲೀಪ್ ಅವರನ್ನು ವರ್ಗಾವಣೆ ಮಾಡಿ ಎಂದು ಪಟ್ಟುಹಿಡಿದದ್ದು ನಿಜಕ್ಕೂ ಖೇದಕರ ಸಂಗತಿಯಾಗಿದೆ.

ಆಯುಕ್ತರ ವರ್ಗಾವಣೆ ಹಿಂದೆ, ಈ ಮೊದಲು ಆಯುಕ್ತರು ಗಡಿಪಾರು ಮಾಡಿದ ಹಾಗೂ ಕರ್ತ್ಯವ್ಯ ಲೋಪದಡಿಯಲ್ಲಿ ಅಮಾನತುಗೊಂಡ ಹಾಗೂ ಕಂಬಿ ಹಿಂದೆ ದಿನಗಳಿಯುತ್ತಿರುವ ವಂಚಕರು, ಮತ್ತು ಮಾಜಘಾತುಕರ ಕೈವಾಡ ಬಲವಾಗಿದೆ.

ಹುಬ್ಬಳ್ಳಿ-ಧಾರವಾಡ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುತ್ತಿರುವ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತರಾದ ಆರ್ ದಿಲೀಪ್ ಅವರನ್ನು ಬೇರೆಲ್ಲಿಗೂ ವರ್ಗಾವಣೆ ಮಾಡಬಾರದೆಂದು ಹಾಗೂ ಧಾರಾವಾಡದಲ್ಲಿಯೇ ಅವರ ಸೇವೆ ಮುಂದುವರೆಸಬೇಕೆಂದು ತಮ್ಮಲ್ಲಿ ಒತ್ತಾಯಿಸಿದ್ದಾರೆ.

ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ , ಕಾಶ್ಮೀರದ  ದೇಶದ್ರೋಹಿ ವಿದ್ಯಾರ್ಥಿಗಳು ಪಾಕ್ ಪರ ಪೋಷಣೆ ಕೂಗಿದ ಪ್ರಕರಣವನ್ನು   ಕಟುವಾಗಿ ಖಂಡಿಸುತ್ತಾ  ಅವರ ಮೇಲೆ  ಸೂಕ್ತ ರೀತಿಯ ಕಾನೂನು ಕ್ರಮ ಜರುಗಿಸಬೇಕೆಂದು ಹಾಗೂ   ಕೇಂದ್ರದ ಉನ್ನತ ಅಧಿಕಾರಿಗಳನ್ನು  ಈ ಗಂಭೀರ ದೇಶದ್ರೋಹದ ತನಿಖೆಗೆ ನಿಯೋಜಿಸಬೇಕೆಂದು  ಆಗ್ರಹಿಸುತ್ತದೆ.

ಬೆಳಗಾವಿ ವಿಭಾಗೀಯ ಅಧ್ಯಕ್ಷ ಪಾಪು ಧಾರೆ, ಮನೋಜ್ ಗುಡದೂರ,ಮಹೇಶ್ ಮಡಿವಾಳರ,ಜ್ಞಾನೇಶ್ ಬೋಳೆ, ರೋನಿತ್ ಧಾರೆ, ವಿಜಯ್, ವಿನಾಯಕ್ ತೀಟೆ, ವಿನಯ್ ಪಾಟೀಲ, ಸಚಿನ್ ಭಜಂತ್ರಿ, ರಿಯಾಜ್ ಮೇಗq,ೆ ಸರೋಜಾ ನವಲೂರು, ಸುರೇಖಾ ಕಮ್ಮಾರ, ಇತರರು ಉಪಸ್ಥಿತರಿದ್ದರು.

 

Related