ಭೂ ಸುಧಾರಣೆ ತಿದ್ದುಪಡಿಗೆ ವಿರೋಧ

ಭೂ ಸುಧಾರಣೆ ತಿದ್ದುಪಡಿಗೆ ವಿರೋಧ

ಪಾವಗಡ : ರಾಜ್ಯ ಸರ್ಕಾರ ಕೈಗೆತ್ತಿಕೊಂಡಿರುವ ಭೂ ಸುಧಾರಣಾ ಕಾಯ್ದೆ ತಿದ್ದುಪಡಿಗೆ ತೀವ್ರ ವಿರೋಧ ವ್ಯಕ್ತಪಡಿಸಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ತಾಲ್ಲೂಕುಘಟಕದ ಪದಾಧಿಕಾರಿಗಳು ತಹಶೀಲ್ದಾರ್ ಕಛೇರಿಗೆ ಮುತ್ತಿಗೆ ಹಾಕಿ ಮನವಿ ಪತ್ರ ಸಲ್ಲಿಸಿದರು.

ತಾಲ್ಲೂಕು ಘಟಕದ ಅಧ್ಯಕ್ಷ ಪೂಜಾರಪ್ಪ ಮಾತನಾಡಿ ರಾಜ್ಯ ಸರ್ಕಾರ ಕೈಗೆತ್ತಿಕೊಂಡಿರುವ ಕಾಯ್ದೆ ತಿದ್ದುಪಡಿಯಿಂದ ಅತಿಸಣ್ಣ ರೈತರು, ಅಲ್ಪ ಸಂಖ್ಯಾತರು, ಬಡವರು ಹಾಗೂ ದೀನ ದಲಿತರು ಭೂಮಿಯನ್ನು ಕಳೆದುಕೊಳ್ಳಲಿದ್ದಾರೆ. ಕಾಯ್ದೆತಿದ್ದು ಪಡಿಕೂಡಲೇ ಹಿಂಪಡೆಯದಿದ್ದರೆರಾಜ್ಯ ಸರ್ಕಾರದ ವಿರುದ್ಧ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದರು.

ಡಿಜಿಎಸ್ ನಾರಾಯಣಪ್ಪ ಮಾತನಾಡಿ, ರಾಜ್ಯ ಬಿಜೆಪಿ ಸರ್ಕಾರ ಕೈಗೊಂಡಿರುವ ಭೂ ಸುಧಾರಣಾ ತಿದ್ದುಪಡಿ ಕಾಯ್ದೆ ದೀನದಲಿತರ ಕೆಳಹಂತದ ಜನತೆಯನ್ನು ತುಳಿಯುವಂತಾಗಿ ಉಳ್ಳವರ ಪರ ಸರ್ಕಾರ ನಡೆಯುತ್ತಿದೆ. ಬಂಡವಾಳ ಶಾಹಿಗಳ ಒತ್ತಡಕ್ಕೆ ಮಣಿದ ಸರ್ಕಾರಭೂ ಸುಧಾರಣಾ ಕಾಯ್ದೆ ಕೈಗೆತ್ತಿಕೊಂಡಿದ್ದು, ಈ ನಿರ್ಧಾರವನ್ನು ಸರ್ಕಾರ ಹಿಂಪಡೆಯದಿದ್ದಲ್ಲಿಕೇAದ್ರ ಮತ್ತುರಾಜ್ಯ ಸರ್ಕಾರದ ವಿರುದ್ಧ ರಾಜ್ಯಾದ್ಯಂತ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದರು.

Related