ಆನ್ಲೈನ್ ತರಗತಿಗೆ ಎನ್.ಎಸ್.ಯೂ. ಐ ವಿರೋಧ

ಆನ್ಲೈನ್ ತರಗತಿಗೆ ಎನ್.ಎಸ್.ಯೂ. ಐ ವಿರೋಧ

ಮುದ್ದೇಬಿಹಾಳ : ಆನ್ಲೈನ್ ಶಿಕ್ಷಣ ಜಾರಿ ಮಾಡಿದರೆ ಗ್ರಾಮೀಣ ಪ್ರದೇಶದ ವಿದ್ಯರ‍್ಥಿಗಳಿಗೆ ತೊಂದರೆಯಾಗುತ್ತಿದ್ದು ಕೂಡಲೇ ಸರಕಾರ ಇಂತಹ ಅವೈಜ್ಞಾನಿಕ ನರ‍್ಧಾರವನ್ನು ವಿರೋಧಿಸುವುದಾಗಿ ಎನ್.ಎಸ್.ಯೂ.ಐ ಸಂಘಟನೆಯ ಜಿಲ್ಲಾಧ್ಯಕ್ಷ ಸದ್ದಾಂ ಕುಂಟೋಜಿ ತಿಳಿಸಿದ್ದಾರೆ.

ಈ ಕುರಿತು ಸಿಎಂ ಯಡಿಯೂರಪ್ಪನವರಿಗೆ ಪತ್ರ ಬರೆದಿರುವ ಕುಂಟೋಜಿ, ಎಷ್ಟೋ ಪೋಷಕರ ಬಳಿ ಸ್ಮರ‍್ಟ್ ಫೋನ್ ಇಲ್ಲ. ಎಲ್ಲ ವ್ಯವಸ್ಥೆ ಇದ್ದರೂ ನೆಟ್ರ‍್ಕ ಸಿಗಲ್ಲ. ಶಿಕ್ಷಕರು ಏನಾದರೂ ಬರ‍್ಡ್ ಮೇಲೆ ಬರೆದರೆ ಅದು ಮೊಬೈಲ್ ಪರದೆ ಮೇಲೆ ಸರಿಯಾಗಿ ಕಾಣುವುದಿಲ್ಲ.

ಲ್ಯಾಪ್ಟಾಪ್ ಬೇಕಾಗುತ್ತದೆ. ಇದಕ್ಕಾಗಿ ಮಕ್ಕಳು ಪಾಲಕರು ಮೇಲೆ ಲ್ಯಾಪ್ಟಾಪ್, ಸ್ಮರ‍್ಟ್ ಫೋನ್ಗಾಗಿ ಬೇಡಿಕೆ ಸಲ್ಲಿಸಲು ಶುರು ಮಾಡಿದ್ದಾರೆ. ಕೊರೋನಾದಿಂದ ಗ್ರಾಮೀಣ ಪ್ರದೇಶಕ್ಕೆ ಬಂದಿದ್ದ ಐಟಿ ಕಂಪನಿಗಳ ಉದ್ಯೋಗಿಗಳು ನೆಟ್ರ‍್ಕ ಸಿಗದ ಕಾರಣ ವಾಪಸ್ ನಗರಗಳಿಗೆ ತೆರಳುತ್ತಿದ್ದಾರೆ.

ಈ ಹಿನ್ನೆಲೆಯಲ್ಲಿ ಅವಸರದಲ್ಲಿ ಈ ಆನಲೈನ್ ಶಿಕ್ಷಣ ಜಾರಿಗೆ ಸರಕಾರ ಮುಂದಾಗಬಾರದು ಎಂದು ಮನವಿ ಮಾಡಿಕೊಳ್ಳುವುದಾಗಿ ಸಿಎಂಗೆ ಪತ್ರದಲ್ಲಿ ವಿವರಿಸಿದ್ದಾರೆ.

Related