ನಾಳೆಯಿಂದ ಆನ್‌ಲೈನ್, ಆಫ್‌ಲೈನ್ ಕ್ಲಾಸ್ ಬಂದ್

ನಾಳೆಯಿಂದ ಆನ್‌ಲೈನ್, ಆಫ್‌ಲೈನ್ ಕ್ಲಾಸ್ ಬಂದ್

ಬೆಂಗಳೂರು :  ರಾಜ್ಯದಲ್ಲಿ  ಜನವರಿ  1ರಿಂದ-10 ಮತ್ತು 12ನೇ ತರಗತಿ ವಿದ್ಯಾರ್ಥಿಗಳಿಗೆ ಶಾಲೆಯನ್ನು ತೆರೆಯುವಂತೆ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದ್ದು, ಈ ಬೆನ್ನಲ್ಲೇ ಶಿಕ್ಷಕರು ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಆನ್‌ಲೈನ್, ಆಫ್‌ಲೈನ್ ಎಲ್ಲಾ ಕ್ಲಾಸ್‌ಗಳನ್ನು ಕ್ಲೋಸ್ ಮಾಡಲು ನಿರ್ಧರಿಸಿದರು.

ಅನುದಾನರಹಿತ ಖಾಸಗಿ ಶಾಲೆಗಳ ಒಕ್ಕೂಟದ ಅಡಿಯಲ್ಲಿ ಬರುವ ಎಲ್ಲಾ ಶಾಲೆಗಳ ಆನ್‌ಲೈನ್ ಮತ್ತು ಆಫ್‌ಲೈನ್ ಕ್ಲಾಸ್‌ಗಳನ್ನು ನಾಳೆಯಿಂದಲೇ ಸ್ಥಗಿತಗೊಳಿಸಲಾಗುವುದು ಎಂದು ಒಕ್ಕೂಟ ತಿಳಿಸಿದೆ.

ಈ ಹಿನ್ನೆಲೆ ರುಪ್ಸಾ ಅಡಿಯಲ್ಲಿ 12.800 ಶಾಲೆಗಳಲ್ಲಿ ನಾಳೆಯಿಂದ ಯಾವುದೇ ತರಗತಿಗಳು ನಡೆಯುವುದಿಲ್ಲ. ಜೊತೆಗೆ ಜನವರಿ 6 ರಿಂದ ಬೆಂಗಳೂರಿನಲ್ಲಿ ಉಪವಾಸ ಸತ್ಯಾಗ್ರಹ ಮಾಡಲು ಒಕ್ಕೂಟ ನಿರ್ಧರಿಸಿದೆ. ರಾಜ್ಯಾದ್ಯಂತ ಶಾಲೆಗಳನ್ನು ಬಂದ್ ಮಾಡಿ ಹೋರಾಟ ಪ್ರಾರಂಭಿಸಲು ಮುಂದಾಗಿದ್ದು, ಇಂದು ಬೆಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಈ ನಿರ್ಧಾರವನ್ನು ರುಪ್ಸಾ ಪ್ರಕಟಿಸಿದೆ.

Related