ಕಣ್ಣೀರು ತರಿಸುತೆ ಈರುಳ್ಳಿ ಬೆಲೆ

ಕಣ್ಣೀರು ತರಿಸುತೆ ಈರುಳ್ಳಿ ಬೆಲೆ

ಬೆಂಗಳೂರು: ರಾಜ್ಯದಲ್ಲಿ ಒಂದಲ್ಲ ಒಂದು ರೀತಿಯಲ್ಲಿ ವಸ್ತುಗಳ ಬೆಲೆ ಏರಿಕೆ ಕಂಡಿದ್ದು ಕಳೆದ ತಿಂಗಳು ಟೊಮೆಟೊ 200 ರಿಂದ 250ರ ಗಡಿ ದಾಟಿತ್ತು. ಆದರೆ ಈಗ ಈರುಳ್ಳಿ ಬೆಲೆ ಏರಿಕೆ ದಾರಿ ಹಿಡಿದಿದೆ.

ಹೌದು ರಾಜ್ಯದಲ್ಲಿ ವಾಡಿಕೆಯಂತೆ ಮಳೆಯಾಗದಿದ್ದ ಕಾರಣ ಮತ್ತೆ ರಾಜ್ಯದಲ್ಲಿ ತರಕಾರಿ ಬೆಲೆ ಗಗನಕ್ಕೇರುತ್ತಿದೆ. ಸದ್ಯ ರಾಜ್ಯದಲ್ಲಿ ಈರುಳ್ಳಿ ಬೆಲೆ 65 ರಿಂದ 70 ದಾಟಿದ್ದು ಇನ್ನೇನು ನೂರರ ಅಡಿ ದಾಟಲಿದೆ ಎಂದು ತಿಳಿದು ಬರುತ್ತಿದೆ.

ರಾಜ್ಯದಲ್ಲಿ ಮಾತ್ರವಲ್ಲದೆ ದೆಹಲಿ ಮಾರುಕಟ್ಟೆಯಲ್ಲು ಸಹ ಕಳೆದ ಎರಡು ವಾರದಲ್ಲಿ ಈರುಳ್ಳಿ ಬೆಲೆ ಶೇ. 50ರಷ್ಟು ಏರಿಕೆ ಆಗಿದೆ. ಭಾರತದಾದ್ಯಂತ ಟೊಮೆಟೋ ರೀತಿಯಲ್ಲಿ ಅಡುಗೆಗೆ ಸರ್ವೇ ಸಾಮಾನ್ಯವಾಗಿ ಬಳಕೆಯಾಗುವ ಈರುಳ್ಳಿ ಬೆಲೆ ಏರಿದರೆ ಜನಸಾಮಾನ್ಯರಿಗೆ ಕಷ್ಟಕರ ಎನಿಸುವುದು ಸಹಜ. ದೆಹಲಿ ಎನ್​ಸಿಆರ್ ಪ್ರದೇಶದ ರೀಟೇಲ್ ಮಳಿಗೆಗಳಲ್ಲಿ ಈರುಳ್ಳಿ ಬೆಲೆ ಕಿಲೋಗೆ 70 ರೂವರೆಗೂ ಮಾರಾಟವಾಗುತ್ತಿದೆ.

ಕಳಪೆ ಗುಣಮಟ್ಟದ ಈರುಳ್ಳಿಯೇ ಕಿಲೋಗೆ 50 ರೂ ಬೆಲೆ ಪಡೆದಿದೆ. ಉತ್ತಮ ಗುಣಮಟ್ಟದ ಈರುಳ್ಳಿ 70 ರೂವರೆಗೆ ಸೇಲ್ ಆಗುತ್ತಿದೆ. ಆದರೆ, ಈರುಳ್ಳಿ ಬೆಲೆ ಟೊಮೆಟೋ ರೀತಿ ಗಗನಕ್ಕೇರುವ ಸಾಧ್ಯತೆ ಇಲ್ಲ ಎನ್ನಲಾಗುತ್ತಿದೆ. ಮಾರುಕಟ್ಟೆ ತಜ್ಞರ ಪ್ರಕಾರ ಡಿಸೆಂಬರ್​ನಲ್ಲಿ ಹೊಸ ಈರುಳ್ಳಿ ಆವಕ ಬರಲಿದ್ದು, ಬೆಲೆ ಕಡಿಮೆ ಆಗುವ ನಿರೀಕ್ಷೆ ಇದೆ ಎಂದು ಹೇಳಿದ್ದಾರೆ.

 

Related