ಜುಲೈ 8 ರಂದು ಹೋಪ್ ತೆರೆಗೆ..

  • In Cinema
  • July 7, 2022
  • 193 Views
ಜುಲೈ 8 ರಂದು ಹೋಪ್ ತೆರೆಗೆ..

ಒಂದಷ್ಟು ನಿರೀಕ್ಷೆಗಳ ಒಡ್ಡೋಲಗದ ನಡುವೆ ಬಿಡುಗಡೆಗೆ ಸಜ್ಜಾಗಿರುವ ಸಿನಿಮಾ ಹೋಪ್’. ಟ್ರೇಲರ್ ಮೂಲಕವೇ ನಾನಾ ದಿಸೆಯಲ್ಲಿ ಕುತೂಹಲ ಹುಟ್ಟಿಸಿರುವ ಈ ಚಿತ್ರ ಇದೇ ಜುಲೈ ೮ಕ್ಕೆ ತೆರೆಗೆ ಬರಲಿದೆ. ಪ್ರಾಮಾಣಿಕ ಅಧಿಕಾರಿಯ ವರ್ಗಾವಣೆ, ಅದರ ಸುತ್ತ ನಡೆಯುವ ರಾಜಕೀಯ ಆಟ, ಕಾನೂನು ಹೋರಾಟದ ಕಥಾಹಂದರವನ್ನು ಈ ಚಿತ್ರದಲ್ಲಿ ಕಟ್ಟಿಕೊಡಲಾಗಿದೆ.

ನಟನೆಯಿಂದ ಒಂದಷ್ಟು ಅಂತರ ತೆಗೆದುಕೊಂಡಿದ್ದ ಶ್ವೇತಾ ಶ್ರೀವಾಸ್ತವ್ ಹೋಪ್ಮೂಲಕ ಮತ್ತೆ ಬಣ್ಣ ಹಚ್ಚಿದ್ದಾರೆ. ಕೆಎಎಸ್ ಅಧಿಕಾರಿ ವರ್ಗಾವಣೆ ಜನ ಸಾಮಾನ್ಯರ ಮೇಲೆ ಏನೆಲ್ಲಾ ಪರಿಣಾಮ ಬೀರುತ್ತದೆ ಎಂಬ ಕಥಾವಸ್ತುವನ್ನು ಇಟ್ಟುಕೊಂಡು ಸಿನಿಮಾ ಮಾಡಲಾಗಿದೆ. ಸುಮಲತಾ ಅಂಬರೀಷ್, ಪ್ರಮೋದ್ ಶೆಟ್ಟಿ, ಗೋಪಾಲ ಪಾಂಡೆ, ಪ್ರಕಾಶ್ ಬೆಳವಾಡಿ, ಸಿರಿ ಸೇರಿದಂತೆ ಅನೇಕ ಕಲಾವಿದರು ಚಿತ್ರದಲ್ಲಿದ್ದಾರೆ.

ಖ್ಯಾತ ಸ್ನೂಕರ್ ಆಟಗಾರ್ತಿ ವರ್ಷಾ ಸಂಜೀವ್ ಹೋಪ್ಸಿನಿಮಾಗೆ ಕಥೆ ಬರೆದು ನಿರ್ಮಾಣ ಮಾಡಿದ್ದಾರೆ. ಈ ಹಿಂದೆ ಜ್ವಲಂತಂ ಸಿನಿಮಾ ನಿರ್ದೇಶಿಸಿದ ಅಂಬರೀಶ್ ಬಿ.ಎಂ. ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದು, ಎಸ್.ಹಾಲೇಶ್ ಛಾಯಾಗ್ರಹಣ ಮಾಡಿದ್ದಾರೆ. ರಿತ್ವಿಕ್ ಮುರಳೀಧರ್ ಸಂಗೀತ ನೀಡಿದ್ದಾರೆ.

Related