ಕೂದಲಿನ ಆರೋಗ್ಯಕ್ಕೆ ಬೆಂಡೆಕಾಯಿ

ಕೂದಲಿನ ಆರೋಗ್ಯಕ್ಕೆ ಬೆಂಡೆಕಾಯಿ

ಸಾಮಾನ್ಯವಾಗಿ ನಾವು ಬೆಂಡೆಕಾಯಿಯನ್ನು ಸೇವಿಸುವುದರಿಂದ ನಮ್ಮ ಆರೋಗ್ಯದಲ್ಲಿ ಹಲವಾರು ರೀತಿಯ ಆರೋಗ್ಯ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದು ಎಂದು ನಮಗೆ ಈಗಾಗಲೇ ಗೊತ್ತಿರುವ ಸಂಗತಿ.

ಆದರೆ ಬೆಂಡೆಕಾಯಿಯನ್ನು ಕೂದಲಿಗೆ ಬಳಸುವುದರಿಂದ ವಿವಿಧ ರೀತಿಯ ಕೂದಲ ಸಮಸ್ಯೆಗಳನ್ನು ನಾವು ನಿವರಿಸಿಕೊಳ್ಳಬಹುದು.

ಹೌದು, ಸಾಮಾನ್ಯವಾಗಿ ಬೆಂಡೆಕಾಯಿಯನ್ನು ಆಹಾರವಾಗಿ ಸೇವಿಸಿದರೆ, ಇನ್ನು ಕೆಲವುರು ನೇರವಾಗಿ ಬೆಂಡೆಕಾಯಿಯನ್ನು ಕೂದಲಿನ ಆರೈಕೆಗಾಗಿ ಬಳಸುತ್ತಾರೆ. ಕೂದಲಿನ ಆರೋಗ್ಯಕ್ಕೆ ಬೆಂಡೆಕಾಯಿಯ ಕೆಲವು ಪ್ರಯೋಜನಗಳು ಇಲ್ಲಿವೆ.

ಬೆಂಡೆಕಾಯಿಯ ಬೀಜಗಳ ಪೇಸ್ಟ್ ಅನ್ನು ತಲೆಗೆ ಹಚ್ಚುವುದರಿಂದ ಶುಷ್ಕತೆಯನ್ನು ನಿವಾರಿಸಲು ಮತ್ತು ಆರೋಗ್ಯಕರ ನೆತ್ತಿಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ ಎಂದು ಕೆಲವರು ನಂಬುತ್ತಾರೆ.

ಆದಾಗ್ಯೂ, ಇದಕ್ಕೆ ಪೂರಕವಾದ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ. ಆದರೆ, ಕೆಲವರು ಅದನ್ನು ವೈಯಕ್ತಿಕವಾಗಿ ಬಳಸಿದ್ದಾರೆ ಮತ್ತು ಉತ್ತಮ ಫಲಿತಾಂಶಗಳನ್ನು ಪಡೆದಿದ್ದಾರೆ ಎಂದು ಉಲ್ಲೇಖಿಸಿದ್ದಾರೆ.

ಇನ್ನು ತಪ್ಪದೇ ನಿಯಮಿತವಾಗಿ ಆಗಾಗ ಬೆಂಡೆಕಾಯಿ ನೀರನ್ನು ಉಪಯೋಗಿಸುತ್ತಿದ್ದರೆ, ತಲೆ ಕೂದಲಿನ ಬೇರುಗಳು ಉತ್ತಮ ಸಾಮರ್ಥ್ಯದಿಂದ ಕೂಡಿರಲು ಅನುಕೂಲವಾಗುತ್ತದೆ ಜೊತೆಗೆ ತಲೆ ಕೂದಲು ಉದುರುವುದು ಹಾಗೂ ಕೂದಲು ಅರ್ಧಕ್ಕೆ ಮುರಿದುಕೊಳ್ಳುವ ಸಾಧ್ಯತೆ ಕೂಡ ಇರುವುದಿಲ್ಲ. ಬೆಂಡೆ ಕಾಯಿಯ ಸತ್ವಗಳು ಪೂರ್ಣ ಪ್ರಮಾಣದಲ್ಲಿ ತಲೆ ಕೂದಲಿಗೆ ಸಿಗುತ್ತವೆ.

ತಲೆ ಕೂದಲಿಗೆ ಬೆಂಡೆಕಾಯಿ ನೀರನ್ನು ಬಳಸುವುದರಿಂದ ನೀವು ನೈಸರ್ಗಿಕ ಕಂಡೀಷನರ್ ಬಳಸಿದ ಅನುಭವವನ್ನು ಪಡೆದು ಕೊಳ್ಳಬಹುದು. ಇದು ತಲೆ ಕೂದಲಿನ ಸಿಕ್ಕು ಸಮಸ್ಯೆಯನ್ನು ಸರಿಪಡಿಸಿ ತಲೆ ಕೂದಲನ್ನು ಮೃದುವಾಗಿ, ಹೊಳಪಿನಿಂದ ಕೂಡಿರುವಂತೆ ಮಾಡುತ್ತದೆ.

Related