ಮೂರುಸಾವಿರ ಮಠದ ಸ್ವಾಮೀಜಿಗಳ ಹಗ್ಗ ಜಗ್ಗಾಟ

ಮೂರುಸಾವಿರ ಮಠದ ಸ್ವಾಮೀಜಿಗಳ ಹಗ್ಗ ಜಗ್ಗಾಟ

ಹುಬ್ಬಳ್ಳಿ,ಫೆ. 23 : ವೀರಶೈವ ಸಮುದಾಯದ ಪ್ರತಿಷ್ಠಿತ ಹುಬ್ಬಳ್ಳಿಯ 3 ಸಾವಿರ ಮಠದ ಉತ್ತರಾಧಿಕಾರಿ ವಿವಾದ ಈಗ ಬೀದಿಗೆ ಬಂದಿದೆ. ಮೂರು ಸಾವಿರ ಮಠದ ಜಗದ್ಗುರು ಶ್ರೀ ಗುರು ಸಿದ್ದರಾಜಯೋಗೀಂದ್ರ ಸ್ವಾಮೀಜಿ ಹಾಗೂ ದಿಂಗಾಲೇಶ್ವರ ಸ್ವಾಮೀಜಿಗಳ ನಡುವೆ ಹಗ್ಗ ಜಗ್ಗಾಟ ಮುಂದುವರೆದಿದೆ. ದಿಂಗಾಲೇಶ್ವರ ಶ್ರೀಗಳು 2014ರಲ್ಲೇ ನನಗೆ ಉತ್ತರಾಧಿಕಾರತ್ವವನ್ನು ನೀಡಿದ್ದು ಇದೀಗ ಮತ್ತೊಬ್ಬರನ್ನು ಉತ್ತರಾಧಿಕಾರಿಯನ್ನಾಗಿಸಲು ಹೊರಟಿರುವ ಕ್ರಮ ಸರಿಯಲ್ಲ ಅಂದು ನಡೆದ ವಿದ್ಯಮಾನಗಳ ಬಗ್ಗೆ ಇಂದು ತಮ್ಮ ಬೆಂಬಲಿಗ ಭಕ್ತರೊಂದಿಗೆ ಸತ್ಯದರ್ಶನ ಸಭೆ ನಡೆಸಿದರು. ಪ್ರಸ್ತುತ ಪೀಠಾಧಿಪತಿಗಳಾದ ಗುರುಸಿದ್ದ ರಾಜಯೋಗೀಂದ್ರ ಸ್ವಾಮೀಜಿ ಮೌನಕ್ಕೆ ಶರಣಾಗಿದ್ದರು. ಮಠದ ಆವರಣ ಮತ್ತು ಸುತ್ತಮುತ್ತಲು ಪೊಲೀಸರ ಸರ್ಪಗಾವಲಿತ್ತು. ಮಠದ ಒಳಗಡೆ ಸತ್ಯದರ್ಶನ ಸಭೆ ನಡೆಸಲು ಅವಕಾಶವಿಲ್ಲ ಎಂದು ಪೊಲೀಸರು ಸ್ಪಷ್ಟವಾಗಿ ಹೇಳಿದರು.

ಆಗಮಿಸಿ, ಮಠದ ಮೇಲೆ ನಮಗೂ ಹಕ್ಕಿದೆ. ಮಠಕ್ಕೆ ಉತ್ತರಾಧಿಕಾರಿಯಾಗಿ ನಾವಿದ್ದೇವೆ. ಬೇರೆಯವರನ್ನು ನೇಮಿಸುವ ಅಗತ್ಯವಿಲ್ಲ. ನಾವಿಲ್ಲಿ ಶಕ್ತಿ ಪ್ರದರ್ಶನ ಮಾಡಲು ಬಂದಿಲ್ಲ. ಶ್ರೀಗಳನ್ನು ಭೇಟಿ ಮಾಡಲು ಬಂದಿದ್ದೇವೆ. ಶ್ರೀ ಗುರುಸಿದ್ದರಾಜಯೋಗೀಂದ್ರ ಸ್ವಾಮಿಗಳವರೇ ಪೀಠದಲ್ಲಿ ಮುಂದುವರೆಯಲಿ ಎಂದು ಹೇಳಿದ್ದಾರೆ.
ಜನಪ್ರತಿನಿಧಿಗಳು ಗಣ್ಯರು ಸಮಸ್ಯೆ ಬಗೆಹರಿಸಲು ಮುಂದಾಗುತ್ತಿಲ್ಲ. ಈಗಾಗಲೇ ವಿವಾದ ನ್ಯಾಯಾಲಯದ ಮೆಟ್ಟಿಲೇರಿದೆ. ಮಠದಲ್ಲಿ ಇತ್ಯರ್ಥವಾಗುತ್ತದೆಯೇ ಅಥವಾ ಕಾನೂನು ಸಮರ ನಡೆಯಲಿದೆಯೋ ಕಾದು ನೋಡಬೇಕು.

Related