ದೇಶದ ಕಾನೂನಿನ ಭದ್ರತೆಗಾಗಿ ಪಂಡೀತರಾಗಬೇಕು: ಎನ್‌ ಕುಮಾರ್

ದೇಶದ ಕಾನೂನಿನ ಭದ್ರತೆಗಾಗಿ ಪಂಡೀತರಾಗಬೇಕು: ಎನ್‌ ಕುಮಾರ್

ಬೊಮ್ಮನಹಳ್ಳಿ: ಕಳೆದ ಮೂರ್ನಾಲ್ಕು ವರ್ಷದಿಂದ ಲಾ‌ ಕಾಲೇಜಿನ ವಿಧ್ಯಾರ್ಥಿಗಳು ಪರಿಪೂರ್ಣ ವಿಧ್ಯಾಭ್ಯಾಸ ಮಾಡುತ್ತಿಲ್ಲ,ಇದರಿಂದ ಕಾನೂನಿನ ಮೇಲೆ ಬಾರೀ ಪ್ರಭಾವ ಬೀರುತ್ತಿದೆ ಎಂದು ನಿವೃತ್ತ ಹೈಕೋರ್ಟ್ ನ್ಯಾಯಮೂರ್ತಿ ಎನ್.ಕುಮಾರ್ ಬೇಸರಿಸಿದರು.

ಅವರು ಬೊಮ್ಮನಹಳ್ಳಿ ಆಕ್ಸ್‌ಫರ್ಡ್ ಲಾ ಕಾಲೇಜಿನಲ್ಲಿ ಆಯೋಜನೆ ಮಾಡಿದ್ದ ಮೊದಲನೇ ವರ್ಷದ ನ್ಯಾಷನಲ್ ಮೂಟ್ ಕೋರ್ಟ್ ಕಾಂಪಿಟೇಷನ್ ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿದರು, ದೇಶದ ಕಾನೂನಿನ ಭದ್ರತೆಗಾಗಿ ನೀವೆಲ್ಲ ಒಳ್ಳೆಯ ಕಾನೂನು ಪಂಡೀತರಾಗಬೇಕು, ನಿಮ್ನನ್ನು ನಂಬಿ ಬರುವವರಿಗೆ ನ್ಯಾಯ ಒದಗಿಸುವ ಕೆಲಸ ಆಗಬೇಕು, ಸಮಾಜಕ್ಕೆ ಸತ್ಯದ ನ್ಯಾಯ ಸಿಗಬೇಕು ಆಗಲೇ ಜನ ಉತ್ತಮ‌ ಸಮಾಜ ಕಾಣಲು ಸಾದ್ಯ ಎಂದರು.

ಯಾವ ದೇಶದಲ್ಲಿ ಉತ್ತಮ‌ ಕಾನೂನು ಇರುತ್ತದೋ ಅಲ್ಲಿ ದೇಶದ ಬುನಾದಿ ಭದ್ರವಾಗಿರುತ್ತದೆ, ಕಾನೂನು ಶಿಕ್ಷಣ ಇತರೆ ಶಿಕ್ಷಣಕ್ಕಿಂತಲೂ ಮಿಗಿಲು ಎನ್ನುವುದನ್ನು ವಕೀಲರು ಆಗುವ ವಿಧ್ಯಾರ್ಥಿಗಳು ಅರಿತಾಗ ಉತ್ತಮ ವಕೀಲರು ಆಗಲು ಸಾದ್ಯ ಎಂದರು.

ಹೈಕೋರ್ಟ್ ಹಿರಿಯ ವಕೀಲ ಕೆ.ಜಿ.ರಾಘವನ್ ಮಾತನಾಡಿ, ನೀವು ವಕೀಲರಾಗಿ ಸಮಾಜಕ್ಕೆ ಹಾಗೂ ನಿಮ್ಮ ಕೆಲಸಕ್ಕೆ ಸರಿಯಾದ ನ್ಯಾಯ ಒದಗಿಸಬೇಕು. ಸಮಾಜವೂ‌ಕೂಡ ಕಾನೂನಿಗೆ ಗೌರವ ನೀಡುವ ಕೆಲಸ ಮಾಡಬೇಕು ಎಂದರು.

ಪ್ರತಿ ದಿನ ದಿನಪತ್ರಿಕೆ ಓದಬೇಕು, ಪುಸ್ತಕಗಳನ್ನು ಓದುವುದು, ಇದನ್ನು ಮಾಡದೇ ಇರುವವರು ಗುಣಮಟ್ಟದ ನಾಲೆಡ್ಜ್ ಕಡಿಮೆ ಆಗಿ ಸಶಕ್ತ ವಕೀಲರು ಆಗಲು ಸಾದ್ಯವೇ ಇಲ್ಲ ಎಂದು ಕಿವಿಮಾತು ಹೇಳಿದರು.

ಈ ಸಂದರ್ಭದಲ್ಲಿ ಹೈಕೋರ್ಟ್ ಹಿರಿವ ವಕೀಲ ಸುಬ್ರಹ್ಮಣ್ಯ ಕೌಶಿಕ್, ಅಧ್ಯಕ್ಷತೆಯನ್ನುಆಕ್ಸ್‌ಫರ್ಡ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಎಸ್.ಎನ್.ವಿ. ನರಸಿಂಹರಾಜು, ಪ್ರಾಂಶುಪಾಲೆ ಡಟ.ಎಮ್.ಸೀತಾಲಕ್ಷ್ಮಿ ಮತ್ತಿತರರು ಹಾಜರಿದ್ದರು.

 

Related