ಕೃಷಿ ಇಲಾಖೆಗೆ ನೋಟಿಸ್

ಕೃಷಿ ಇಲಾಖೆಗೆ ನೋಟಿಸ್

ಗದಗ: ಕೃಷಿ ಪರಿಕರ ಗುಣ ನಿಯಂತ್ರಣ ಕಾಯ್ದೆಯ ನಿಯಮಾವಳಿಯಲ್ಲಿ ಲೋಪ ಕಂಡು ಬಂದ ಹಿನ್ನೆಲೆಯಲ್ಲಿ ಗದಗ, ಭೇಟಗೇರಿ, ಲಕ್ಕುಂಡಿಯ ನಾಲ್ವರು ಮಾರಾಟಗಾರರಿಗೆ ಇಲಾಖೆಯಿಂದ ನೋಟೀಸ್ ನೀಡಲಾಗಿದೆ ಎಂದು ಗದಗ ಸಹಾಯಕ ಕೃಷಿ ನರ‍್ದೇಶಕ ವೀರಣ್ಣ ವಿ. ಗಡಾದ ತಿಳಿಸಿದ್ದಾರೆ.

ಜಂಟಿ ಕೃಷಿ ನರ‍್ದೇಶಕರ ಕರ‍್ಯಾಲಯದ ಜಾರಿದಳ ತಂಡವು ಗದಗ ತಾಲೂಕಿನ ವಿವಿಧ ಕೃಷಿ ಪರಿಕರಗಳ ಮಾರಾಟಗಾರರ ಮಳಿಗೆಗಳಿಗೆ ಅನಿರೀಕ್ಷಿತವಾಗಿ ಭೇಟಿ ನೀಡಿ ಪರಿಶೀಲನೆ ನಡೆಸಿತ್ತು.  ಜಾರಿದಳದ ಅಧಿಕಾರಿ ಸಂತೋಷ ಪಟ್ಟದಕಲ್ಲ ಅವರ ನೇತೃತ್ವದಲ್ಲಿ ಪರಶೀಲನೆ ನಡೆಸಿದ ತಂಡ, ರೈತರಿಗೆ ನೊಂದಾಯಿತ ಕಂಪನಿಯ ಪ್ರಮಾಣಕರಿಸಿದ ಬೀಜಗಳನ್ನು ಮಾರಾಟ ಮಾಡಬೇಕು, ದರವನ್ನು ಸೂಚನಾ ಫಲಕದಲ್ಲಿ ನಮೂದಿಸಿ ಕಂಪನಿಯು ನರ‍್ದಿಷ್ಟಪಡಿಸಿದ ದರದಲ್ಲಿ ಕೃಷಿ ಪರಿಕರಗಳ ಮಾರಾಟಕ್ಕೆ ಸೂಚನೆ ನೀಡಿತು.

ಕೋವಿಡ್-19 ವೈರಸ್ ಸೋಂಕು ನಿಯಂತ್ರಣದ ಅಂಗವಾಗಿ ಮಾರಾಟ ಕೇಂದ್ರದಲ್ಲಿ ಸಾಮಾಜಿಕ ಅಂತರವನ್ನು
ಕಡ್ಡಾಯವಾಗಿ ಕಾಯ್ದುಕೊಳ್ಳುವುದು, ಮಾರಾಟಗಾರರು ಮಾರುಕಟ್ಟೆ ಬೆಲೆಗಿಂತ ಹೆಚ್ಚು ಬೆಲೆಗೆ ಹಾಗೂ ಅವಧಿ ಮುಗಿದ ಬೀಜಗಳನ್ನು ಮಾರಾಟ ಮಾಡಬಾರದು. ಕಳಪೆ ಬೀಜಗಳ ಕಂಡು ಬಂದರೆ ಕಾನೂನು ಕ್ರಮ ತೆಗೆದುಕೊಳ್ಳಬೇಕಯಾಗಿದೆ.

Related