ಯಾರಿಗೂ ಕೂಡ ಕಾನೂನನ್ನು ಕೈಗೆ ತೆಗೆದುಕೊಳ್ಳಲು ಸಾಧ್ಯವಿಲ್ಲ: ಡಿಸಿಎಂ

ಯಾರಿಗೂ ಕೂಡ ಕಾನೂನನ್ನು ಕೈಗೆ ತೆಗೆದುಕೊಳ್ಳಲು ಸಾಧ್ಯವಿಲ್ಲ: ಡಿಸಿಎಂ

ಬೆಂಗಳೂರು: ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಆಂಗ್ಲ ಭಾಷೆ ನಾಮಫಲಕ ಹಾಕಿರುವುದರಿಂದ ಕರವೇ ಸಂಘಟನಕಾರರು ಬೆಂಗಳೂರು ನಗರದಲ್ಲಿ ಇಂಗ್ಲಿಷ್ ನಾಮಫಲಕ ಹಾಕಿರುವವರ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಇನ್ನು ನೆನ್ನೆ ಬುಧವಾರ ನಗರದಾದ್ಯಂತ ಆಂಗ್ಲ ಭಾಷೆಯ ನಾಮಫಲಕವನ್ನು ಹಾಕಿರುವವರ ವಿರುದ್ಧ ಹೋರಾಟ ಮಾಡಿ ನಾಮಪಲಕತ್ತಿರುವ ಮಾಡಿ ಮುನ್ನೆಚ್ಚ ನೀಡಿದ್ದಾರೆ

ಇನ್ನು ಈ ವಿಷಯಕ್ಕೆ ಸಂಬಂಧಿಸಿದಂತೆ ರಾಜ್ಯದ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಪ್ರತಿಕ್ರಿಯೆ ನೀಡಿ, ಕನ್ನಡ ಉಳಿಸಲಿ ಬೆಳೆಸ್ಲಿ, ಕನ್ನಡ ನಾಡನ್ನು ಕಟ್ಟಲಿ, ಕನ್ನಡ ಬಗ್ಗೆ ಹೋರಾಟ ಮಾಡುವವರಿಗೆ ನಾವೆಂದು ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಬೇಡ ಎಂದು ಹೇಳುವುದಿಲ್ಲ.

ಸಾರ್ವಜನಿಕರ ಆಸ್ತಿಯನ್ನು ಹಾನಿ ಮಾಡುವುದು ನಾವು ಸಹಿಸಲು ಸಾಧ್ಯವಿಲ್ಲವೆಂದು ಮಾಧ್ಯಮ ಪ್ರತಿನಿಧಿಗಳಿಗೆ ಇಂದು ಡಿಕೆ ಶಿವಕುಮಾರ್ ಅವರು ಉತ್ತರಿಸಿದ್ದಾರೆ.

ಯಾರಿಗೂ ಕೂಡ ಕಾನೂನನ್ನು ಕೈಗೆ ತೆಗೆದುಕೊಳ್ಳಲು ಸಾಧ್ಯವಿಲ್ಲ. ನಮ್ಮ ಕರ್ನಾಟಕ ಗೌರವ ಸ್ವಾಭಿಮಾನಕ್ಕೆ ದಕ್ಕೆಯಾಗಬಾರದು. ಇದು ಕರ್ನಾಟಕದ ಗೌರವದ ವಿಚಾರ.

ಕನ್ನಡದ ಬಗ್ಗೆ ಪ್ರತಿಭಟನೆ ಮಾಡಲಿ ಹಾಗಂತ ಹೇಳಿ ಕಾನೂನನ್ನು ಯಾವತ್ತೂ ಕೈಗೆ ತೆಗೆದುಕೊಳ್ಳಬಾರದು. ಕನ್ನಡ ನಾಮಪಲಕ ಹಾಕಲೆಂದು ಹೋರಾಟ ಮಾಡಲಿ ಅದೆಲ್ಲ ತಪ್ಪೆಂದು ನಾವು ಹೇಳುವುದಿಲ್ಲ.

ಇನ್ನು ಕಾನೂನನ್ನು ಕಾಪಾಡಿಕೊಳ್ಳುವುದು ಎಲ್ಲ ನಾಗರಿಕರ ಕರ್ತವ್ಯ. ಹಾಗಂತ ಹೇಳಿ ಅವರಿಗೆಲ್ಲ ಹೊಡೆದು ಬಡಿದು ಮಾಡಿದರೆ ಆಸ್ತಿ ಹನಿ ಮಾಡಿದರೆ ಯಾರು ಕೂಡ ಸಹಿಸುವುದಿಲ್ಲ ಎಂದುರು.

ನಾವೀಗಾಗಲೇ ನಗರದ ಜನತೆಗೆ ನೋಟಿಸ್ ನೀಡಿದ್ದೇವೆ. ಯಾವ ರೀತಿ ನಾಮಫಲಕ ಇರಬೇಕೆಂದು ನಮ್ಮ ಅಧಿಕಾರಿಗಳು ನಾಮಫಲಕದ ಬಗ್ಗೆ ಮಾಹಿತಿಯನ್ನು ಸಾರ್ವಜನಿಕರಿಗೆ ನೀಡಿರುತ್ತಾರೆ ಎಂದರು.

ದಯವಿಟ್ಟು ಸಂಘಟನಾಕಾರರು ಯಾರು ಹೋರಾಟ ಮಾಡಿ ಕಲ್ಲು ತೋರಿ ಪ್ರಾಣ ಹಾನಿ ಮತ್ತು ಆಸ್ತಿ ಹನಿ ಮಾಡಿಕೊಳ್ಳಬಾರದೆಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಸಂಘಟನಾಕಾರರಿಗೆ ಮನವಿ ಮಾಡಿದ್ದಾರೆ.

Related